Home / Karakuna SB

Browsing Tag: Karakuna SB

ಹಿಡಿಯಿರಿ, ಹಿಡಿಯಿರಿ, ಕಳ್ಳನ ಹಿಡಿಯಿರಿ, ಯೆನ್ನಯಮನ ಕದ್ದೊಡುತಿಹ| ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ || ೧ || ಎಂದಿಗು ಕಳ್ಳನು ಗೊಲ್ಲಬಾಲನಿವ ಗೋಪಿಯ ಬೆಣ್ಣೆಯ ಕದ್ದಿಹೆನೂ | ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನನ ...

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು| ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧|| ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ | ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨|| ಭಿಕ್ಷೆಯ ಬೇ...

ನೆಲ್ಲ ಕುಟ್ಟೋಣ ಬಾರೆ, ತಂಗಿ ನೆಲ್ಲ ಕುಟ್ಟೋಣ ಬಾರೆ | ಗೊಳ್ಳತೆಗೆಯೋಣ ಬಾರೆ, ನೆಲ್ಲ ಥಳಿಸೋಣ ಬಾರೆ || ಪಲ್ಲ || ನೆಲ್ಲಿನಂತರ್ಯಾಮಿ, ತಾನಿಹುದು ಅದರೊಳಕ್ಕಿ | ನೆಲ್ಲ ಥಳಸಲಕ್ಕೀ, ಕಾಣುವುದು ಗೊಳ್ಳದೂರೀ || ೧ || ಗೊಳ್ಳು ಜಗದಮಾಯಾ, ಅದರೊಳಕ್ಕಿ...

ಹೆಸಿರು ಬಂಣದಿಂದೆಸೆಯುತೆ ಪಕ್ಕವ | ಪಸರಿಸಿ ಗಿಳಿಹಾರಾಡುವುದೂ || ಹೊಸಗಾಲದ ಗಿಳಿ ಹುಸಿಯನು ಪೇಳದು | ಹಸುಮಕ್ಕಳ ಮನ ಶೆಳೆಯವುದೂ ||೧|| ಹಸಿರು ಒಂಣದಿಂದೆಸೆಯವ ವೃಕ್ಷದಿ | ನಸುನಗುತಲಿ ತಾ ಕೂರುವುದೂ | ಹಸಿವನೀಗಿಪುದು ಫಲಗಳ ತಿನ್ನುತೆ | ಹೊಸಮನದ...

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ | ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ || ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ | ಬಸವನಮೇಲ್ಹತ್ತಿ, ಪರಶಿವಮೂಜಗವನು ಪೊರೆವಾ || ೨ || ಪರಶಿವನಾಜ್ಞೆಯಲೀ, ಬಸವನು ಜನಿ...

ಗೀತೆಯನು ಬರೆವಾಗ ಜನಸಿದೆಯೆ ನೀನಮ್ಮಾ | ಗೀತೆಯೆಂಬಭಿಧಾನ ಪಡೆದೆನೀನಮ್ಮಾ || ಗೀತೆತಾಪ್ರಿಯಕರವು ತಾತಪರಮಾತ್ಮಂಗೇ | ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ || ಗೀತಮ್ಮ ಕೇಳೀಗ ಕೂಸುನಿನಾಗಿಹೆಯೆಂದೂ | ಓತು ನಿನಗಾಗಿ ತಂದಿಹನು ನಿಮ್ಮಣ್ಣಾ || ...

ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ || ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ | ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ || ಬಿಂಕವ ಮೆರೆಯಲು ...

ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು | ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ || ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ || ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿ...

ಮೆರೆವುದು ಭಾರತ ಬಾವುಟವೂ, ಮೆರೆಯಿಸಿ ನಮ್ಮಯ ಕೀರ್‍ತಿಯನೂ | ತರುಣರ ಹುಮ್ಮಸ ಹೊಮ್ಮಿಸುತೇ, ತರುತಲಿ ಸ್ವಾತಂತ್ರವ ಜನಕೆ || ೧ || ಏರಿಸು ಧ್ವಜವನು ಆಗಸದೋಳ್‌, ತೋರಿಸುಸ್ಫೂರ್ತಿಯ ಜಗವೊಳಗೇ | ಓಡಿಸುಪರಚಕ್ರದ ಭಯವ, ಕೂಡಿಸುಜನರನು ಧ್ವವಜದದಡಿಯೋಳ್...

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ | ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ | ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ | ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ || ಶ್...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...