ನೆಲ್ಲ ಕುಟ್ಟೋಣ ಬಾರೆ, ತಂಗಿ ನೆಲ್ಲ ಕುಟ್ಟೋಣ ಬಾರೆ |
ಗೊಳ್ಳತೆಗೆಯೋಣ ಬಾರೆ, ನೆಲ್ಲ ಥಳಿಸೋಣ ಬಾರೆ || ಪಲ್ಲ ||
ನೆಲ್ಲಿನಂತರ್ಯಾಮಿ, ತಾನಿಹುದು ಅದರೊಳಕ್ಕಿ |
ನೆಲ್ಲ ಥಳಸಲಕ್ಕೀ, ಕಾಣುವುದು ಗೊಳ್ಳದೂರೀ || ೧ ||
ಗೊಳ್ಳು ಜಗದಮಾಯಾ, ಅದರೊಳಕ್ಕಿಯಾತ್ಮತೇಜಾ |
ಜೊಳ್ಳುಮಾಯೆ ಪೋಗೆ, ಪೊಳೆವುದಾತ್ಮ ತೇಜಾ || ೨ ||
ಪೊಳ್ಳುದೇಹ ಮಾಯಾ, ಅದರೊಳಿರುವ ನಂತಂರಾತ್ಮಾ |
ಜೊಳ್ಳು ಮಾಯೆದೂಡೆ, ಪೊಳೆವನಂತರಾತ್ಮಾ || ೩ ||
ಕೊಲ್ಲೆ ಗಾಂಧಿ ದೇಹಾ, ಅದರೊಳಿರ್ದ ದಿವ್ಯತೇಜಾ |
ಸಲ್ಲಿತಾಗ ಬೇಗ, ನಿತ್ಯ ಪರಾಂಧಾಮಾ || ೪ ||
ಕೊಲ್ಲೆ ಕೊಲೆಗಳೆಲ್ಲಾ, ನಡೆವುದೆಲ್ಲಾ ಜಗದಮಾಯಾ |
ಕೊಲ್ಲೆ ನರನದೇಹಾ, ಕೊಲ್ಲಲಾರನಾತ್ಮಾ || ೫ ||
ಘಲ್ಲನಯನ ಕೃಷ್ಣಾ, ಗೀತೆ ಕಣದಿ ಪೇಳ್ದನಾಗ |
ಮಲ್ಲನರಗೆ ಜೀವಾ, ನೆಲ್ಲಪ್ರಾಯವೆಂತಾ || ೬ ||
*****


















