Home / ಕವನ / ಕವಿತೆ / ಭಿಕ್ಷುಕನು

ಭಿಕ್ಷುಕನು

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು|
ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧||

ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ |
ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨||

ಭಿಕ್ಷೆಯ ಬೇಡಲು ಬಂದಿಹೆನಮ್ಮಾ ಮತ್ಸರಿವಿರದಿರೆ ಭಿಕ್ಷೆಯ ನೀಡು |
ತುಚ್ಛರ ಮನೆಯ ಭಿಕ್ಷೆಯ ನೆಂದಿಗೂ ಗ್ರಹಿಸೆನು ನಾನಿಂದೂ || ೩ ||

ಮನೆಯಜಮಾನನು ಮೈಮುರಿ ದುಡಿದು ಹೊಲದೊಳು ಧಾನ್ಯವ ಬೆಳೆದಿರೆ ನೀ |
ನನುನಯದಿಂದಲಿ ನೀಡಲು ಭಿಕ್ಷೆಯ ಗ್ರಹಿಸುವೆ ಪ್ರೇಮದಲ್ಲಿ || ೪ ||

ಮಾನಸ ಶ್ರಮವನು ಮಾಡುತೆ ನಿನ್ನಯ ಪ್ರೇಮದಪತಿ ಧನಗಳಿಸುತಿರೆ |
ದಾನವ ಭಕುತಿಲಿ ಮಾಡಿದೊಡದನನು ಸಾನಂದದಿನಾಂ ಕೊಳ್ಳುವೆನೂ ||೫||

ಅನ್ನದ ವಸ್ತ್ರದ ಕೊರೆತೆಯನರಿಯೆನು ನನ್ನಯಗೆಳೆಯವ ಧನಪತಿಯು |
ಚಿನ್ನ ಮನದಿನೀ ನೆನ್ನೊಳು ನೀಡುವ ಭಕುತಿಯ ಭಿಕ್ಷೆಯ ಕೊಳ್ಳುವೆನು ||೬||

ಜಾತಿ ವಿಜಾತಿಯ ಭೇಧವ ನೆರಿಯೆನು ಪ್ರೀತಿಯಿಂದೆ ನೀಭಿಕ್ಷೆಯನೀಡಲು |
ಓತುಹರಿಸುವೆ ನಖಂಡಸು ಮಂಗಲೆಯಾಗುತೆ ನೀ ಪೊಳೆಯೆಂದೂ || ೭||

ಪೆಣ್ಣನು ಪೊರೆವೆನು ಪತಿರೂಪದಿ ನಾಧನ್ಯ ಸದಾಶಿವ ಮೂರುತಿಯು |
ಇನ್ನು ಜನಗಳ ಪಾಲಿಪೆ ತಂದೆಯ ರೂಪದಿ ಶ್ರೀಹರಿ ವಿಶ್ವಾತ್ಮಾ || ೮ ||

ಸಂಣಮಕ್ಕಳರೂಪದಿ ಪೊರೆವಳು ಎನ್ನಯಸತಿಜಗದಂಬೆ |
ನಿನ್ನಯ ಅತಿಥಿಯ ರೂಪದಿ ಬಂದಿಹೆ ಜಗದೊಳು ನಾನಿಂದೂ || ೯ ||

ಸನ್ನುತ ಬಿಜ್ಜೆಯ ವಿತರಣ ಕಾರ್ಯವ ಸರಸತಿರೂಪದಿ ಮಾಡುವೆನೂ |
ಇನ್ನುನಾನು ಮಾಡದ ಕಾಯಕವದು ಜಗದೊಳಗೇನುಂಟು || ೧೦||

ಕಪ್ಪು ಸಂತೆಯಿಂ ಜನಗಳು ದುಡ್ಡನು ಗಳಿಸುವರೆಂಬ ದೂರನುಕೇಳುತೆ |
ತಪ್ಪನು ತಿದ್ದಲು ಜಗದಲಿ ಬಂದಿಹೆ ಜೋಗಿಯ ವೇಷದಲಿ || ೧೧ ||

ವಕ್ಕಲಿಗರು ತಾ ರೊಕ್ಕದ ಆಶಿಲಿ ಹೊಲಬೀಳ್ಗೆಡಹುತೆ ಪೀಡಿಪರೊಡೆಯ ನ|
ಚೊಕ್ಕು ಭೂಮಿಯನು ಮಾಡುತೆ ಬೆಳೆಯಲು ಬುದ್ಧಿಯ ಹೇಳುವೆನೂ || ೧೨ ||

ಚಿಕ್ಕಮಕ್ಕಳು ಬಸವಮೋಹನರು ಜಗದಿ ಮಾಡಿದ ಬೋಧೆಗಳಾ |
ಚೊಕ್ಕಮನದಿ ಜನ ತಿಳಿದು ನಡೆದೊಡೆನಾನಲಿನೆನು ಸಂತಸದಿ || ೧೩||

ಶಿವಾ ಮಾದೇವಾ ನಾನೇ ಶಿವಾ ನೀತಿಗೆಟ್ಟವಗೆ ಎಲ್ಲಿ ಶಿವಾ||
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...