Home / ಕವನ / ಕವಿತೆ / ದೀಪಾಳಿಯ ಕೋಟೆಯಾಟವು

ದೀಪಾಳಿಯ ಕೋಟೆಯಾಟವು

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ ||

ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ |
ಬಸವನಮೇಲ್ಹತ್ತಿ, ಪರಶಿವಮೂಜಗವನು ಪೊರೆವಾ || ೨ ||

ಪರಶಿವನಾಜ್ಞೆಯಲೀ, ಬಸವನು ಜನಿಸಿದ ಭೂಮಿಯಲಿ |
ಪರಶಿವನಾಜ್ಞೆಯನೂ, ಬಸವನು ಬೀರಿದ ಭೂಮಿಯಲಿ || ೩ ||

ಬಸವನು ಮಾದರಸ, ಮನೆಯೊಳು ಜನಿಸಿದಮಗನಾಗಿ |
ಬಸವನು ತಾಪೊರೆದಾ, ಪತಿತರ ಪಾವನ ಮಾಡುತಲೀ || ೪ ||

ಬಸವನು ಜನಿವಾರ, ಬಿಸುಟುತೆ ಜಾತಿಯ ಗೂಡಿಸಿದ |
ಬಸವನ ದೆಯೆದಿಂದೇ, ಭಾರತ ಜನಗೂಡಿತುವೊಂದೇ || ೫ ||

ಋಷಿವರ ಬಸವಂಣಾ, ಸಂಗಮಕ್ಷೇತ್ರದಿತಪಿಸುತ್ತೇ |
ಕೃಷಿವಲರುದ್ಧಾರ, ಮಾಡಿದ ಬಸವಜನೋದ್ದಾರಾ || ೬ ||

ಬಸವನು ಭಕುತಿಯಲಿ, ಸಂಗನನರ್ಚಿಸಿ ನಿತ್ಯದಲಿ |
ಎಸೆದನು ಭೂಮಿಯಲಿ, ಭಕ್ತರಮಾಲಿಕೆ ಪದಕದಲಿ || ೭||

ಬಸವನು ತಾಹೊರಟಾ, ಮಂತ್ರಿಯ ಬಳದೇವನ ಮನೆಗೆ |
ಬಸವನ ಮೆಚ್ಚುತಲಿ, ಮಗಳನುಯಿತ್ತನು ಬಳದೇವಾ || ೮ ||

ಬಸವನ ಚಾತುರ್ಯ, ಶೆಳೆಯಿತು ಮನವನು ಬಿಜ್ಜಳನ |
ಬಸವನ ನೇಮಿಸಿದಾ, ಮಂತ್ರಿಯತಾಣದಿ ಬಿಜ್ಜಳನೂ || ೯||

ಬಸವನ ದಯದಿಂದೇ, ಧಾವಿಸಿ ಬಂದುದು ಶರಣಜನಾ |
ಬಸವನ ದರುಶನದೀ, ಹೊಂದಿತು ಸಂತಸ ಸೌಖ್ಯಗಳಾ || ೧೦ ||

ಬಸವನ ಪರಿಕಿಸಲೂ ಹೊರಟನು ಅಲ್ಲಮಪ್ರಭು ತಾನೂ |
ಬಸವನ ನೋಡುತಲಿ, ತುಂಬಿತು ಹರುಷವು ಅವನಲ್ಲೀ || ೧೧ ||

ಊರೂರಿಗೆ ಬಸವಾ, ಕಟ್ಟಿದ ಮಠಗಳನೊಂದೊಂದೂ |
ಬೇರೂರಿದ ಹಳೆಯ, ದೋಷವನೋಡಿಸಿದನು ಬಸವಾ || ೧೨ ||

ಮಠದೊಳಗಯ್ಯನಿಗೆ, ಶಿಶುಗಳನೋದಿಸೆ ವಿಧಿಸಿದನೂ |
ಶಠರನು ದೂಡಿದನೂ, ಧರ್ಮದ ಸೋಗಿಲಿ ಮೆರೆವೆವರಾ || ೧೩ ||

ಅನ್ನವ ನೀಡಿಸಿದಾ, ಮಠದಲಿ ಹಸಿದಿಹ ಜನಪದಕೇ |
ತನ್ನವರೆಲ್ಲರನೂ, ತಿಳಿಯುವ ದಾರಿಯ ತೋರಿಸಿದಾ || ೧೪ ||

ಮಾನವ ಜನವೆಲ್ಲಾ, ಮನುವಿನ ಸಂತತಿ ತಾನೆಂದೂ |
ಬೋಧೆಯ ಮಾಡಿದನೂ, ಜನಗಳನೊಂದನುಗೂಡಿಸುತೇ || ೧೫ ||

ರಾಟಿಯ ತಿರುವುತಲೀ, ನೂಲಲಿ ಬಟ್ಟೆಯ ನೇಯುತಲೀ |
ಥಾಟಿಲಿ ಮೆರೆಯುತಲೀ, ಬಾಳುವ ಧಾಟಿಯ ತೋರಿದನೂ || ೧೬ ||

ಕಾಯಕ ಕೈಲಾಸ, ವೆಂಬುವ ತತ್ವನ ಬೋಧಿಸಿದಾ |
ನಾಯಕ ಬಸವಂಣಾ, ಮಾಡದ ಕಾಯಕವೇನಣ್ಣಾ || ೧೬ ||

ಬಸವನು ಮಾಡಿದುದೇ ಬಸವನ ತಮ್ಮನು ಮೋಹನನೂ |
ಎಸಗುತೆ ಭಾರತಕೇ, ತಂದನು ಸ್ವಾತಂತ್ರದ ಲಕುಮಿ || ೧೮ ||

ಬಸವನು ಮೋಹನರೂ, ಶೇರುತೆ ಪರಶಿವ ಸಾನ್ನಿಧ್ಯಾ |
ಎಸೆವರು ದಿಟ್ಟಿಗಳಾ, ನಮ್ಮೊಳು ಪ್ರೇಮವ ಬೀರುತಲೀ || ೧೯ ||

ಬಸವನ ತತ್ವಗಳಾ, ಜನಗಳು ಪಾಲಿಸೆ ಸಂತತದೀ |
ಬಸವನು ಮೋಹನರೂ, ಮಾಳ್ಪರು ತಾಂಡವ ನೃತ್ಯಗಳಾ || ೨೦ ||

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...