Home / ಕವನ / ಕವಿತೆ / ಪೆಣ್ಣಿನ ಮಹಿಮೆಯು

ಪೆಣ್ಣಿನ ಮಹಿಮೆಯು

ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು |
ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ ||
ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ
ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ ||

ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿಹ ಹರಿ |
ನಾಭಿಯಿಂದಲಿ ಕಮಳವೆದ್ದಿತು ಮೇಲೆ ತಾನಾಗ ||
ಆಗಜಿಗಿಯಿತು ಮೂಲಜೋತಿಯು ಆಗಸದಿ ನೇಸರನಾಗಿ ಹೊಳೆಯಿತು |
ಆದಿನಾರಾಯಣನು ತನ್ನಯ ಲೀಲೆ ಪೂಡಿದನು || ೨ ||

ಕಮಳದಹೊಳ್ತಾವಿಧಿಯರೂಪದಿ ಹೊರಟ ತೇಜವು ನಾಲ್ಮೊಗವಪಡೆಯುತೆ |
ಕಮಳಸಂಭವನಾಗಿ ತೋರುತೆ ಸೃಷ್ಟಿ ನಿರ್ಮಿಸಿದ ||
ಪ್ರಕೃತಿಯಿಂ ಘಟಗಳನು ನಿರ್ಮಿಸಿ ಆತ್ಮರೂಪದ ತೇಜವದರೆೊಳು |
ವಿಕೃತಿಪೊಂದದೊಳಿರಿಸಿ ಜೀವನ ರಾಶಿ ಪುಟ್ಟಿಸಿದಾ || ೩ ||

ಪ್ರಕೃತಿರೂಪದ ಪೆಣ್ಣಿನ್ನೋಳ್ಹರಿ ಪುರುಷರೂಪದಿ ಮಿಳತನಾಗಲು |
ಪ್ರಕೃತಿ ಪುರುಷರ ಮಿಲನ ಲೀಲೆಯೆ ವಿಶ್ವವಿಸ್ತಾರಾ ||
ಪ್ರಕೃತಿ ರೂಪದ ಪೆಣ್ಣು ಕ್ಷೇತ್ರವು ಪುರುಷರೂಪದಿ ತೇಜ ಪಡೆಯುತೆ |
ಸಕೃತದೊಳ್ಫಲವೀಯೆ ಮಾನವ ಕೋಟಿ ಜನಿಸುವುದೂ || ೪ ||

ಪೆಣ್ಣು ಅಲ್ಲವೆ ನಮ್ಮಪೆತ್ತಿಹ ಮಾತೆ ಜಗದೊಳು ನಮ್ಮಪೊರೆದಳು |
ಪೆಣ್ಣ ಮಹಿಮೆಯನರಿಯೆ ಪಡೆವವು ನಿತ್ಯಸೌಖ್ಯಗಳಾ ||
ಪೆಣ್ಣು ಪ್ರಕೃತಿಯರೂಪು ಶ್ರೀಹರಿ ಪ್ರಿಯಳುಯೆನಿಸಿದಳಾದಿಲಕ್ಷ್ಮಿಯು |
ಪೆಣ್ಣನೆಂದಿಗು ಬೀಳುಗೆಡಹದೆ ನಡೆಯೆನಿಜಸುಖವೂ || ೫ ||

ಪೆಣ್ಣು ಪಾರ್ವತಿರೂಪುತಾಳುತೆ ಬಳವಕೊಡುವಳು ನಿತ್ಯಮನುಜಗೆ ।
ಪೆಣ್ಣು ಲಕುಮಿಯ ರೂಪಿರಿಂದಲಿ ಧನವನೀಡುವಳೂ ||
ಪೆಣ್ಣು ಸರತಿಸಯಾಗಿ ಬಿಜ್ಜೆಯ ಪೊಳೆಯ ಜಗದೊಳು ಹರಿಸಿಯದರಾ |
ಹಣ್ಣು ಸವಿಯುತೆ ನರನು ಪಡೆವನು ಸೌಖ್ಯ ಇಹಪರವಾ || ೬ ||

ಪೆಣ್ಣು ಮೋಹಿನಿಯಾಗಿ ಹರಿದಾನವರ ನಾಶವಗೈದ ಪೂರ್ವದಿ।
ಪೆಣ್ಣು ದುರ್ಗೆಯು ಕೃಷ್ಣಭಗಿನಿಯು ಜಗದಿ ಮೆರೆಯುತ್ತೆ ||
ಪೆಣ್ಣು ಶಾಕಂಬರಿಯು ಭೀಕರ ರೂಪುತಾಳುತೆ ದುಟ್ಟರಕ್ಕಸ- |
ರನ್ನುಸದೆದಳು ಶಕ್ತಿಯೆನಿಸುತೆ ತಾಯಿ ಮಹಕಾಳೀ || ೭ ||

ಪೆಣ್ಣು ಸೀತಿಯು ಘೋರ ರೂಪವತಾಳಿ ಶತಶಿರನನ್ನು ಕೊಂದಳು |
ಪೆಣ್ಣು ಶಾರದೆವಾದಕೆಳೆದಳು ಮುನಿಯ ಶಂಕರನ ||
ಪೆಣ್ಣಿನಕತದಿಂದೆ ರಾಮಾನುಜನು ಯತಿವರನಾದುದದರಿಂ |
ಪೆಣ್ಣು ಜಗದೊಳು ಮಾಡಲಾಗದ ಕಾರ್ಯ ತಾನಿಲ್ಲಾ || ೮ ||

ನುಣ್ಣವೆನಿಪಾ ಕ್ರೈಸ್ತಧರ್ಮವ ಜಗದಿ ಹರಡಿದಯೇ ಶುಪ್ರಭುತಾ |
ಪೆಣ್ಣು ಮೇರಿಯ ದಯದಿಮೆರೆದನು ಸರ್ವದಿಶೆಯಲ್ಲಿ ||
ಪೆಣ್ಣಿನ ಮೋಹಕ್ಕೆ ಹೇಸುತೆ ತ್ಯಜಿಸಿ ಸಂಸಾರವನು ಗೌತುಮ |
ಘನ್ನಮುನಿವರ ಬುದ್ಧನೆನಿಸುತೆ ಮೆರೆದ ವಿಶ್ವದೊಳೂ || ೯ ||

ಪೆಣ್ಣುಮಣಿ ರೇಝಿಯಳು ತನ್ನಯ ಬುದ್ಧಿಕೌಶಲದಿಂದಲಾಳ್ದಳು |
ಪೆಣ್ಣುರಾಣಿಯ ನೂರಜಹನಳ ಸಮರು ಯಾರಿಲ್ಲಾ |
ಪೆಣ್ಣು ಮಣಿಮಾಲೆಯಲಿ ಪೊಳೆವರು ಚನ್ನೆಚನ್ನಮ್ಮಾದಿ ಸತಿಯರು |
ಪೆಣ್ಣು ಪ್ರಾಂತವನಾಳಿ ಪೋದಳು ಸರೋಜಳೆಂಬವಳೂ || ೧೦ ||

ಘನ್ನ ಕೀರ್ತಿಯ ಪಡೆದಹಲ್ಯಯ ದ್ರು‍ಪದಪುತ್ರಿಯಸೀತೆ ತಾರೆಯ |
ಚನ್ನೆಮಂದೊದರಿಯ ಸ್ಮರಣೆಯಮಾಡೆ ಪಾಪಗಳೂ ||
ಇನ್ನುನಾಶವ ಪಡೆದು ಮನುಜನು ಸನ್ನ ಸದ್ಗತಿಪಡೆದುತಾ ನತಿ |
ಘನ್ನಸಂತಸದಿಂದೆ ಮೆರೆವನು ನಿಯತಸಗ್ಗದೊಳೂ || ೧೧ ||

ಪೆಣ್ಣು ವಿರಹಿತ ಮನೆಯು ಪಾಳ್ಗುಡಿ ಪೆಣ್ಣು ಇರ್ದೊಡೆ ದೇವಮಂದಿರ |
ಪೆಣ್ಣು ಮನೆಯ ಲಕುಮಿಯೆನಿಪಳು ಸದ್ಗತಿಯ ತೋರಕಳೂ ||
ಪೆಣ್ಣು ಮುನಿದೊಡೆ ಮಾರಿಯಾಗ್ವಳು ಪೆಣ್ಣು ವೊಲಿದೊಡೆ ಶ್ರೇಯ ತರುವಳು||
ಪೆಣ್ಣು ಸರುವರ ಹೆಮ್ಮೆ ಕುಲದೇವತೆಯು ಯೆನಿಸಿಹಳೂ || ೧೨ ||

ಪೆಣ್ಣು ಸನ್ಮಾರ್ಗದೊಳೆ ಇರ್ದೊಡೆ ತನ್ನ ಕುಲಕೋಟಿಯನು ಮೆರೆವಳು |
ಪೆಣ್ಣು ವಾಮದ ಮಾರ್ಗ ಪಿಡಿದೊಡೆ ಹಾಳುಗೆಡಹುವಳೂ ||
ಪೆಣ್ಣಿಗೆ ಪತಿದೇವನೆನಿಪನು ಪೆಣ್ಣು ಗಂಡನ ಮಂತ್ರಿಯೆನಿಪಳು |
ಪೆಣ್ಣ ಬೀಳ್ದೊಡೆ ನಿಯತನನರಕವು ನರಗೆ ಶಾಶ್ವತವೂ || ೧೩ ||
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...