ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ | ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ ಕಾಳ ಕಳೆದು ನಿನ್ನ ಏಳ್ಗೆ ಬಯಸುವೆ *****...

ಬರೆದವರು: Thomas Hardy / Tess of the d’Urbervilles ಬಂದವನು ನರಸಿಂಹಯ್ಯ-ತಾತಯ್ಯನವರನ್ನು ಕಂಡಕೂಡಲೇ ನೇರವಾಗಿ ಹೋಗಿ ಅವರಕಾಲಿಗೆ ನಮಸ್ಕಾರ ಮಾಡಿದೆನು. ಕಣ್ಣುಚಿ ಕೂತಿದ್ದ ಅವರು ಕಣ್ಣು ಬಿಟ್ಟು ನೋಡಿ “ಯಾರು ನರಸಿಂಹಯ್ಯನೇ ?&#822...

ಬಾಳುತ್ತಿರುವೆ ನಾನಿಂದು ಇಂದ್ರಿಯ ಜತೆ ಬಾಳಬಾರದೇಕೆ ಆ ಜೊತೆಗೆ ಸಂಯಮದಿ ಬಾಳುತ್ತಿರುವ ನಾನಿಂದು ನನ್ನವರ ಜೊತೆ ಬಾಳಬಾರದೇಕೆ ನಾನು ದೇವನ ಸಮಯದಿ ಬಾಳುತ್ತಿರುವೆ ನಾನಿಂದು ಮೃತ್ಯು ಲೋಕದಲಿ ಬಾಳಬಾರದೇಕೆ ನಾಮದೇವನ ಅಮೃತದಿ ಬಾಳುತ್ತಿರುವೆ ನಾನಿಂದು...

ಊರಿಗೆ ಬಂದಾರೆ ಚೆಲುವೆಯರು ಪಲ್ಲಂಗದಲವರ ಕುಳ್ಳಿರಿಸಿ ತನ್ನಿ ನಾಕು ಜನ ಅವರ ಮುಂದಕ್ಕೆ ಬನ್ನಿ ನಾಕು ಜನ ಅವರ ಹಿಂದಕ್ಕೆ ಬನ್ನಿ ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ ಊರಿಗೆ ಬಂದಾರ ಚೆಲುವೆಯರು ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ ನಾಕು ಜನ ಅವರ ...

ಅಗೊ ಅಗೊ ಬಂದ ಓ ಹೊತ್ತಗೆಯನೆ ತಂದ! ನಾಚುತ ನಿಂದ “ಬಿಡುವಿಹುದೇ?” ಎಂದ. ಬಿಡುವಿಲ್ಲದೆ ಏನು?- ಇದು ಈತನ ಜಾಣು. ಬಾ ಇನ್ನೇನು, ಆಡಿಸು ಗೋಣು. ಕಟತಟಕಟವೆನುತ ಏನೀ ನುಡಿಸಿಡಿತ! ಇದೆ ಈತನ ಬೆರಗು, ಎನ್ನ ಯ ಕೊರಗು. “ಚೆನ್ನ ವೆ ಎಂತು?”...

ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ. ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ ಒಂದು ಚುಟುಕು ನೆಮ್ಮದಿಯ ಚೂರು ದಯಾಮಯ ಅಲ್ಲಾಹ್‌ನಲಿ ಕೈಯತ್ತಿ ಬೇಡುತ್ತಿರುವೆ ನಮಗೆ ಮನುಷ್ಯತ್ವದ ವರವ ನೀಡೆಂದು. ಜಗತ್ತು ಎಷ್ಟೇ ಹೊತ್ತಿ ಉರಿದರೂ ಏನಂತ...

ದೇಹದೊಳಗಿನ ಮೂಳೆ, ರಕ್ತನಾಳ, ಇತರೆ ಚರ್‍ಮಕ್ಕೆ ಸಂಬಂಧಿಸಿದಂತೆ ಅಂಗಾಂಗಳು ಸಿಥಿಲಗೊಂಡಾಗ ಅವುಗಳ ಬದಲಿಗೆ ಬೇರೆ ಅಂಗಗಳನ್ನು ಜೋಡಿಸುವ ಪರಿಕರಗಳಿಗೆ ಸ್ಮಾರ್ಟ್‌ ಮೆಟೀರಿಯಲ್ಸ್, ಎಂದು ಕರೆಯುತ್ತಾರೆ. ಕೆಲವರಿಗೆ ಧ್ವನಿನಾಳಗಳನ್ನು ತೆಗೆದು ಹಾಕಲಾಗು...

ಜಗದಗಲ ಧಗಧಗಿಸುವೀ ಸಮರದಲ್ಲಿ ಲಕ್ಷಶಃ ಸಾಯೆ, ಲಕ್ಷಾಂತರಂ ಸೀಯೆ, ಹಸಿವೆ ಬೇನೆಯಿನಿನ್ನೆನಿತೊ ಲಕ್ಷ ಬೀಯೆ, ನಿಜವೀರರಾರಂತೆ ಈ ಅಮರರಲ್ಲಿ? ಗೆಲವೆ ವೀರತೆಯಲ್ಲ. ಅನ್ಯರದನೆಲ್ಲಾ ಕಸಿಯೆ ಕಾದಿಸುವ, ಕಾದುವ ವೀರರಲ್ಲ. ಒತ್ತಿಬರೆ ತನ್ನಿಳೆಗೆ ಕಾದಲಾರೊಲ...

ಸ್ವರ್ಗವೆಂದರೆ ಇಲ್ಲೆ ಕನ್ನಡ ನಾಡಲ್ಲಿ ನಲುಮೆ ಗೆಲುಮೆ ಒಲುಮೆ ಎಲ್ಲ ನಿತ್ಯ ನೋಡಿಲ್ಲಿ ಚೆಲುವು ಬೆಡಗು ಹಸಿರ ಮೆರಗು ಎಂದೂ ಹಸಿರಾಗಿ ತಣಿಸಿದೆ ಕಣ್ಮನ… ಉಣಿಸಿದೆ ಹೂರಣ… ಚೆಲುವಿನ ಸಲೆಯಾಗಿ ಪಂಪ ನಾರಣಪ್ಪರ ರನ್ನ ರಾಘವಾಂಕರ ಕಾವ್ಯ ಜ...

ಕಣ್ಣುಮಸುಕು ಇರುವಾಗಲೇ ಅವಳು ಊರ ಹೊರಗಿನ ಬಾವಿಗೆ ನೀರಿಗೆ ಹೋದಳು. ಹಾದಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಒಬ್ಬ ಸಣ್ಣ ಹುಡುಗಿಯು ತನ್ನ ಚಿಕ್ಕ ತಮ್ಮನನ್ನು ಚಂದಪ್ಪನ ಕಡೆಗೆ ಬೊಟ್ಟು ಮಾಡಿ ತೋರಿಸಿ ರಮಿಸುತ್ತಿದ್ದಳು. ಸಂಜೆಯಾದರೂ ತನ್ನ ಹುಡುಗ ಮನ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...