ಸ್ಮಾರ್‍ಟ್ ಮೆಟೀರಿಯಲ್ಸ್

ಸ್ಮಾರ್‍ಟ್ ಮೆಟೀರಿಯಲ್ಸ್

ದೇಹದೊಳಗಿನ ಮೂಳೆ, ರಕ್ತನಾಳ, ಇತರೆ ಚರ್‍ಮಕ್ಕೆ ಸಂಬಂಧಿಸಿದಂತೆ ಅಂಗಾಂಗಳು ಸಿಥಿಲಗೊಂಡಾಗ ಅವುಗಳ ಬದಲಿಗೆ ಬೇರೆ ಅಂಗಗಳನ್ನು ಜೋಡಿಸುವ ಪರಿಕರಗಳಿಗೆ ಸ್ಮಾರ್ಟ್‌ ಮೆಟೀರಿಯಲ್ಸ್, ಎಂದು ಕರೆಯುತ್ತಾರೆ. ಕೆಲವರಿಗೆ ಧ್ವನಿನಾಳಗಳನ್ನು ತೆಗೆದು ಹಾಕಲಾಗುತ್ತದೆ. ಅಂತವರಿಗೆ ಕೃತಕ ಧ್ವನಿನಾಳ ವರವಾಗಿ ಬಂದಿದೆ. ಮಾನವನ ದೇಹದ ಅಳವಡಿಕೆ ಅಥವಾ Implant ಗಳು ಗಟ್ಟಿಮುಟ್ಟಾಗಿರಬೇಕು. ದೇಹಕ್ಕೆ ಅದರಿಂದ ಯಾವದೇ ದುಷ್ಪರಿಣಾಮ ಆಗಬಾರದು. ಅದು ದೇಹಕ್ಕೆ ಲಗತ್ತಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ “ನಿಟಿಲಾನ್’ ಎಂಬ ಮಿಶ್ರವು ವಿಶೇಷವೆನಿಸಿದೆ. ಕೋಣೆಯ ತಾಪಮಾನಕ್ಕೆ ಮಾನವ ದೇಹದ ಶಾಖಕ್ಕೂ ಗಣನೀಯವಾಗಿ ಆಕಾರ ಬದಲಾಯಿಸುತ್ತದೆ. ಆದ್ದರಿಂದ ಮಾನವನ Intravascular stent ಗಳಿಗೆ ಇದನ್ನು ಬಳೆಸುವುದು ಸೂಕ್ತವೆಂದು ಬಗೆದು ಇದರಿಂದ ದೇಹದೊಳಗಿನ ಶಿಥಿಲ ಅಂಗಗಳನ್ನು ತಯಾರಿಸಿ ಸೇರಿಸಲಾಗುತ್ತದೆ. ಟೈಟಾನಿಯಮ್, ಎಂಬ ಧಾತು ಕೃತಕ ಹಲ್ಲು ಜೋಡಣೆಗೆ ಸೂಕ್ತವೆಂದು ಕಂಡುಕೊಳ್ಳಲಾಗಿದೆ. ದಂತ ಅಳವಡಿಕೆಗಾಗಿ ಇದು ವ್ಯಾಪಕ ಬಳಕೆಯಲ್ಲಿದೆ. ಇದರಂತೆ ಮಂಡಿಚಿಪ್ಪು, ಕೀಲುಗಳು ಇತರೆ ದೇಹದೊಳಗಿನ ಅಂಗಾಂಗಗಳು ರೋಗ ಗ್ರಸ್ಥವಾದರೆ ಅವುಗಳನ್ನು ತೆರವುಗೊಳಿಸಿ ಈ ಸ್ಮಾರ್ಟ್‌ ಮೆಟೇರಿಯಲ್ಸ್ ಗಳನ್ನು ಜೋಡಿಸಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮಹಾಯುದ್ಧದ ನಿಜವೀರರು
Next post ರಂಜಾನ ಹಬ್ಬದ ಈದೀ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…