ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂದು ಸಾಬೀತು ಪಡಿಸಿದ್ದಾರೆ. (ಕಡಿಮೆ ವ್ಯಚ್ಚದಲ್ಲಿ) ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮದ್ ಏನನ್ನಾದರೂ ಸಾಧಿಸಬೇಕೆಂಬ ಛಲವುಳ್ಳವರು. ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು (ಉಪಕರಣ) ಬಳಸಿಕೊಂಡು, ಅದಕ್ಕೊಂದು ರೂಪನೀಡಿ ಸೂರ್ಯನ ಶಾಖಾವನ್ನು ಹಾಯಿಸಿ ಪರಿಸರ ಪ್ರೇಮಿ ಕಾರೊಂದನ್ನು ಕೊನೆಗೂ ಸಿದ್ಧಪಡಿಸಿದರು. ಈ ಕಾರಿಗೆ ಇವರು ಖರ್ಚು ಮಾಡಿರುವುದು ಕೇವಲ ೫೦ ಸಾವಿರ ರೂಪಾಯಿಗಳು ಮಾತ್ರ. ಸೌರಶಕ್ತಿ ಚಾಲಿತ ಈ ಕಾರು ೩೨೫ ಕೆ.ಜಿ. ತೂಗುತ್ತದೆ. ಮೋಡ ಸೂರ್ಯನನ್ನು ಮುಚ್ಚಿಕೊಂಡ ಸಂದರ್ಭದಲ್ಲಿಯೂ ಕಾರುಕೆಡದೆಂಬ ಆತಂಕ ಪಡಬೇಕಿಲ್ಲ ಈ ಕಾರಿಗೆ ವಿಶೇಷ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಮ್ಮೆ ಬ್ಯಾಟ್ರಿ ಚಾರ್ಜ್ ಮಾಡಿದರೆ ನೂರು ಕಿ.ಮೀ. ಗಾಡಿ ಓಡಿಸಬಹುದು.
ಈ ಕಾರು ಇತರೆ ಕಾರುಗಳಂತೆ ಸದ್ದು ಮಾಡುವುದಿಲ್ಲ ಹೊಗೆಯನ್ನು ಉಗಳುವುದೇ ಇಲ್ಲ ಗೇರು ಬದಲಿಸುವ ಗೊಂದಲ ಇಲ್ಲ. ಗಾಡಿಹತ್ತಿ ಸೀದಾ ಸ್ಟೇರಿಂಗ್ ತಿರುಗಿಸುತ್ತ ಹೋಗುವುದಷ್ಟೇ ಕೆಲಸ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ಕೈ ಕೊಡದ ಈ ಕಾರು ಯಶಸ್ವಿಯಾಗಿದೆ. ಬಡವರಿಗೆ ಕೈ ಗೆಟಕುವ ಬೆಲೆಯಲ್ಲಿ ಸಿಗುವ ಈ ಕಾರು ಶ್ರೀಮಂತರಿಗೆ ಮಾಲಿನ್ಯ ರಹಿತ ಈ ಕಾರನ್ನು ಓಡಿಸುವಾಗ ತೃಪ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯವಿಲ್ಲದೇ ಕೇವಲ ಸೌರಶಕ್ತಿಯಿಂದಲೇ ನಡೆಯುವ ಈ ಕಾರು ಪರಿಸರವಾದಿಗಳಿಗೆಲ್ಲ ಅತ್ಯಂತ ಅಚ್ಚು ಮೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
*****