Home / ಲೇಖನ / ವಿಜ್ಞಾನ / ಬಿಸಿಯಾಗುತ್ತಿರುವ ಭೂಮಿ !!

ಬಿಸಿಯಾಗುತ್ತಿರುವ ಭೂಮಿ !!

ಜಗತ್ತಿನಾದ್ಯಂತ ಇತ್ತೀಚೆಗೆ ಪರಿಸರಮಾಲಿನ್ಯ ಶಬ್ಧ ಮಾಲಿನ್ಯ, ಭೂಮಿಯನ್ನು ಕೊರೆಯುವುದು, ಸ್ಫೋಟಗೊಳಸುವುದು ಇದೇ ಮೊದಲಾದ ಕಾರಣಗಳಿಂದಾಗಿ ಭೂಮಿ ನಿಧಾನವಾಗಿ ಬಿಸಿಯಾಗುತ್ತಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಭೂಮಿ ಬಿಸಿಯಾದಾಗ ಸ್ವಾಭಾವಿಕವಾಗಿ ಹಲವಾರು ಬಗೆಯ ರೋಗಗಳು ಉಗ್ರರೂಪತಾಳುತ್ತಲಿವೆ ಎಂದು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ವ್ಯಾಪಕವಾಗಿ ರೌದ್ರ ರೂಪತಾಳಿದ್ದ ಮಲೇರಿಯಾ ಕಾಯಿಲೆಯ ನಿರ್‍ನಾಮದ ಸೂಚನೆ ಸಿಕ್ಕಿತ್ತು ಆದರೆ ಡಿ.ಡಿ.ಟಿಯ ಬಳಕೆ ಆರಂಭ ಗೊಂಡಾಗಿನಿಂದ ಸೊಳ್ಳೆಗಳು ಕಡಿಮೆಯಾಗುತ್ತ ಬರುತ್ತವೆ ಎಂದು ಭಾವಿಸಲಾಗಿತ್ತು.

ಆದರೆ ಈಗ ಮಲೇರಿಯಾ, ಡೆಂಗೆಜ್ವರ ಮುಂತಾದ ಕಾಯಿಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪೀಡಿಸುತ್ತಿವೆ. ಈ ರೀತಿ ಏರುತ್ತಿರುವ ರೋಗಗಳಿಗೂ ಭೂಮಿಯ ಉಷ್ಣತೆಗೂ ಸಂಬಂಧ ಇರುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದೇ ಸಂದರ್‍ಭದಲ್ಲಿ ಜಗತ್ತಿನ ಎಲ್ಲದೇಶಗಳು ಪರಿಸರ ಮಲಿನತೆಯನ್ನು ನಿಯಂತ್ರಿಸಿ ಭೂಮಿಯ ಉಷ್ಣತೆಯ ಏರಿಕೆಯನ್ನು ತಡೆಗಟ್ಟಬೇಕೆಂದೂ ಇಲ್ಲದಿದ್ದಾರೆ ಜಗತ್ತು ಹಲವಾರು ರೋಗಗಳಿಗೆ ಸುಲಭವಾಗಿ ಗುರಿಯಾಗಬಹುದೆಂದೂ ಎಚ್ಚರಿಸಿದರು. ಅಮೇರಿಕಾದ ಸಾರ್ವಜನಿಕ ಆರೋಗ್ಯ ಒಕ್ಕೂಟದ ಅಧ್ಯಕ್ಷ ಡಾ|| ಬ್ಯಾರಿಲೇವಿ ನಾವು, ಮುಂದೆ ಆಗಬಹುದಾದ ಗಂಡಾಂತರದ ಸಾಧ್ಯತೆಗಳನ್ನು ಸೂಚಿಸುತ್ತಿಲ್ಲ. ನಾವು ನಿಲ್ಲಿಸಬಹುದಾಗಿದ್ದ ರೋಗಗಳಿಂದಾಗಿಯೇ ಈಗ ಸಾವಿರಾರು ಜನಗಳು ಸಾಯುತ್ತಿದ್ದಾರೆ. ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಾಳಬಹುದೆಂದು, ಎಚ್ಚರಿಸಿದ್ದರು.

ಅನೇಕ ಬಗೆಯಾಗಿ ಹೊಗೆಯನ್ನು ಹೊರಹಾಕುತ್ತಿರುವುದರಿಂದಾಗಿ ರಾಸಾಯನಿಕಗಳನ್ನು ಹೊರಬಿಡುತ್ತಿರುವುದರಿಂದಾಗಿ ವಿಷಾನೀಲಗಳನ್ನು ಬಿಡುತ್ತಿರುವುದರಿಂದಾಗಿ ಆಳವಾದ ಗಣಿಗಳನ್ನು ತೊಡಿ ಸ್ಫೋಟಿಸುವುದರಿಂದಾಗಿ ಭೂಮಿಯ ಸುತ್ತ ಉಷ್ಟತೆಯು ಆವರಿಸಿಕೊಳುತ್ತಾ ಹೋಗುತ್ತಿದೆ. ಅಂತರ್ಜಲ ಬತ್ತಿ ಬರಡಾಗಿ ತಾಪ ಮಾನಕ್ಕೆ ಕಾರಣವಾಗುತ್ತಲಿದೆ. ಒಂದು ಶತಮಾನದಲ್ಲಿ ಭೂಮಿಯ ಉಷ್ಣತೆಯು ಒಂದರಿಂದ ಈಗೀಗ ಎರಡು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರುವ ಹಾಗೂ ಈ ಕಾರಣಗಳಿಂದ ಕಡಲಿನ ಮಟ್ಟವು ೧೫ ಸೆಂ.ಮಿ ಗಳಿಂದ ಒಂದು ಮೀಟರ್‌ಗಳಷ್ಟು ಏರುವ ಅಪಾಯವಿದೆ. ಇಡೀ ಜಗತ್ತೇ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿದ್ಯುತ್ ಉತ್ಪಾದನೆ, ಅಡುಗೆ ಮಾಡುವುದು, ವಾಹನಗಳಿಗೆ ಇಂಧನ ಮುಂತಾದ ಕಾರಣಗಳಿಂದಾಗಿ ಅತೀವ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳು ಸೌದೆ ಮತ್ತು ಕಲ್ಲಿದ್ದಲು ಸುಟ್ಟು ಹೋಗುತ್ತವೆ. ದೇಶ ದೇಶಗಳ ಆರ್ಥಿಕ ಅಭಿವೃದ್ಧಿಯೇ ಈ ರೀತಿಯ ಇಂಧನ ಬಳಕೆಯ ಮೇಲೆ ಆಧಾರಿತವಾಗಿರುವುದರಿಂದ ಇಂತಹ ಇಂಧನ ಬಳಕೆಯನ್ನು ಕಡಿಮೆಗೊಳಿಸುವುದಾಗಲೀ, ನಿಯಂತ್ರಿಸುವುದಾಗಲೀ ಸಾಧವಿಲ್ಲವಾಗಿದೆ. ಕಡಿಮೆ ಇಂಧನ ಬಳಸಿ ಅಧಿಕ ಶಕ್ತಿ ಉತ್ಪಾದನೆಗೊಳಿಸುವ ಪರಿಸರದ (ಜೈವಿಕ) ಶಕ್ತಿಯಿಂದ ಶಕ್ತಿ ಪಡೆದು ಪರಿಸರವನ್ನು ಶುದ್ದವಾಗಿರಿಸಿಕೊಳ್ಳುವ ಆಲೊಚನೆಯನ್ನು ಮಾಡಬೇಕಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...