ನೋಡಲು ಥೇಟ್ ಭೈಸಿಕಲ್ಲಿನಂತೆ ಕಾಣುವ ಈ ಬೈಕಿಗೆ ದೊಡ್ಡ ಚಕ್ರಗಳಿರುತ್ತವೆ. ಹಿಂದಿನ ಚಕ್ರದ ಮೇಲಿನ ಸ್ಯ್ಟಾಂಡ್ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಿ ಅದರಿಂದ ಎಲೆಕ್ಟ್ರೋ ವಿದ್ಯುತ್ ಉತ್ಪತ್ತಿಮಾಡಿ ಹಿಂದಿನ ಚಕ್ರಕ್ಕೆ ಸನ್ನೆ ಮಾಡುವಂತೆ ಮಾಡಲಾಗಿದೆ. ಸಮ ದೃಷ್ಟಿಯಲ್ಲಿ ಸಾಗಲು ಪೆಡಲ್ಗಳು ಹ್ಯಾಂಡ್ ಇರುತ್ತದೆ. ಸೂರ್‍ಯನ ಶಾಖವನ್ನು ಸಂಗ್ರಹಿಸಿಕೊಂಡು ಚಲಿಸುವಂತೆ ಮಾಡುವ ದ್ವಿ ಚಕ್ರವಾಹನವಿದು. ಇದನ್ನು ವಿನೂತನವಾಗಿ ತಯಾರಿಸಿದವರು ಬೆಂಗಳುರಿನ ಎಂ. ಎಸ್. ರಾಮಯ್ಯ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ನಾಲ್ವರು ವಿದ್ಯಾರ್‍ಥಿಗಳು.
*****
