ಐ.ಟಿ., ಬಿ.ಟಿ. ಕಂಪನಿಗಳು
ನಗರದ ಜನಜಂಗುಳಿ
ಝಗಝಗಿಸುವ ದೀಪಾಲಂಕಾರ
ಕಣ್ಣು ಕುಕ್ಕುವ ಬೆಳಕು
ತಲೆಸುತ್ತುವ ಎತ್ತರದ ಬಂಗಲೆಗಳು.
ಗಿಜಿಗುಡುವ ಜನಜಂಗುಳಿಯ ಮಧ್ಯೆ
ಏಕಾಂಗಿಯಾಗಿದೆ ಒಂಟಿ ಬದುಕು
ಮನುಜ ಮನುಜರ ಮದ್ಯ
ತುಂಬಲಾಗದ ಆಳ ಕಂದಕ
ಎಷ್ಟೊಂದು ಗಹನ?
ಬೇಸರ ಕಳೆಯಲು
ಸಂಗಾತಿ ಪಡೆಯಲು
ನಾಯಿ ಸಾಕುತ್ತಾರೆ ಇಲ್ಲಿ
ಬೆಕ್ಕುಗಳ ಒಡನಾಟ
ಟಿ.ವಿ, ಮೊಬೈಲ್‌ಗಳ ಆತ್ಮಸಂಗಾತ
ನಗರದ ಅಸಂಖ್ಯ ಜನರ
ನಡುವೆ ಏಕಾಂಗಿ ಬದುಕು
ಅತ್ತರೂ ಒಬ್ಬರೆ ಅಳಬೇಕು
ಗೋಳು ಕೇಳುವವರಾರು
ಸಾಂತ್ವನಕ್ಕೆ ಸಮಯವಿಲ್ಲ ಇಲ್ಲಿ
ಎಲ್ಲರೂ ಬಿಝಿ.
*****