ಈ ಜಲಜನಕ ಬಾಂಬಿನ ವಿರಾಟ ಶಕ್ತಿ ಅದ್ಭುತವಾದುದು. ಈ ಬಾಂಬ್‌ನ ಸಿಡಿಯುವ ಶಕ್ತಿ ೧೯೪೫ ರಲ್ಲಿ ಹಿರೂಶಿಮಾದ ಮೇಲೆ ಹಾಕಿದೆ ಅಣುಬಾಂಬಿಗಿಂತಲೂ ೩೦೦೦ ಪಟ್ಟು ಹೆಚ್ಚಾಗಿರುತ್ತದೆ. ನೂತನವಾಗಿ ತಯಾರಿಸಿದ ಜಲಜನಕ ಬಾಂಬು ಸಿಡಿಸಿದಾಗ ೫.೫ಕಿ. ಮೀ ಅಗಲದ ಬೆಂಕಿ ಉಂಡೆಯನ್ನು ಉಂಟುಮಾಡಿ ೫.೫ ಕಿ. ಮೀ ವ್ಯಾಸವಿರುವ ಪ್ರದೇಶವನ್ನು ಸಂಪೂರ್ಣವಾಗಿ ನಾಶಮಾಡಿ ೮ ಕಿ. ಮೀ ವರೆಗೆ ಬಹುತೇಕ ನಷ್ಟವಾಗಿ ೨೪ ಕಿ.ಮೀ ವರೆಗೆ ತೀವ್ರದಿಂದ ಸಾಧಾರಣದವರೆಗೆ ನಷ್ಟವಾಗಿ, ೪೦ ಕಿ. ಮೀ ವರೆಗೆ ಕಡಿಮೆ ನಷ್ಟವಾಗುತ್ತದೆ.
ಈ ಜಲಜನಕ ಬಾಂಬನ್ನು ಕಂಡು ಹಿಡಿದ ಮುಖ್ಯ ಯಶಸ್ಸು ಎರ್‍ಡಾರ್‍ಡ್ ಟೆಲ್ಲರ್‌ಗೆ ಸಲ್ಲುತ್ತದೆ. ಈ ಬಾಂಬು ತನ್ನ ಸ್ಫೋಟಕ ಶಕ್ತಿಯನ್ನು ಜಲಜನಕ ಹ್ಯುಟೇರಿಯಂ ಮತ್ತು ಟ್ರಟಯಂ ಎಂಬ ಎರಡು ಐಸೋಟೋಪುಗಳ ಬೇಸುಗೆ ಪ್ರತಿಕ್ರಿಯೆಯಿಂದ ಪಡೆಯುತ್ತದೆ. ಈ ಎರಡೂ ಅಣುಗಳನ್ನು ಜೋಡಿಸುವಂತೆ ಮಾಡುವುದೇ ಬೆಸುಗೆ ವಿಧಾನವಾಗಿದೆ. ಈ ಐಸೋಟೋಪುಗಳು ಅತಿ ಹೆಚ್ಚಿನ ಬಲದಿಂದ ಒಂದಕ್ಕೊಂದು ಢಿಕ್ಕಿ ಹೊಡೆದಾಗ ಅವು ಹಿಲೀಯಂ ಅಣುಗಳಾಗಿ ರೂಪುಗೊಂಡು ಹೆಚ್ಚಿನ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ.
*****