ಅಶಕ್ತರಿಗೆ, ರೋಗಿಗಳಿಗೆ, ರಕ್ತಹೀನರಿಗೆ ಅಗತ್ಯವಾದ ರಕ್ತವನ್ನು ಅವರಿವರಿಂದ ದಾನ ಪಡೆಯಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕಿನಿಂದ ಹಣ ತೆತ್ತು ತಂದು ರಕ್ತವನ್ನು ರೋಗಿಗಳಿಗೆ ಪೊರೈಸಲಾಗುತ್ತದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಕೆಲವರ ರಕ್ತದಿಂದ ಏಡ್ಸ್‌ನಂತ ಮಹಾರೋಗ ತಗುಲಬಹುದು ಮತ್ತು ದುಬಾರಿ ಬೆಲೆ ಕೊಟ್ಟು ಬಡವರಿಗೆ ಕೊಳ್ಳಲಾಗದಿರಬಹುದು. ಇಂಥಹ ಅಡ್ಡಪರಿಣಾಮಗಳನ್ನು ಹೋಗಲಾಡಿಸಲೆಂದೇ ವಿಜ್ಞಾವಿಗಳು ‘ಪ್ಲೋರೋ ಕಾರ್‍ಬನ್’ ನಿಂದ ರೋಗಿಗೆ ರಕ್ತವೃದ್ಧಿಯಾಗುವ ಸಂಶೋಧನೆಯನ್ನು ಮಾಡಿದ್ದಾರೆ. (ಇಲ್ಲಿ ರಕ್ತದ ವರ್‍ಗ ಸಹಿತ ಬದಲಾಗಬಹುದು)
ಅಮೇರಿಕಾದ ವಿಜ್ಞಾನಿಗಳಾದ ಡಾ|| ಪ್ರಾಂಕ್‌ಗೊರನ್ ಮತ್ತು ಡಾ|| ರೆಲ್ಯಾಂಡ್ ಕ್ಲಾರ್‍ಕ್‌ರು ಇದರ ಅದ್ಭುತ ಗುಣವನ್ನು ಬಯಲಿಗೆಳೆದರು. ಫ್ಲೂರೋ ಕಾರ್‍ಬನನ್ನು ದೇಹಕ್ಕೆ ಸೇರಿಸಿದರೆ ಅಡ್ಡಪರಿಣಾಮಗಳಾಗದೇ ಅದು ರಕ್ತವು ಎಷ್ಟು ಅಂಗಾರಾಮ್ಲ, ಆಮ್ಲಜನಕಗಳನ್ನು ಹೀರಿಕೊಳ್ಳುವುದೋ ಅದರ ೧೫ ಪಾಲಿನಷ್ಟು ಅಧಿಕವಾಗಿ ಹೀರಿಕೊಂಡು ರೋಗಿ ಸಾಯುವುದನ್ನು ತಪ್ಪಿಸಬಲ್ಲದು ಎಂದು ದೃಧೀಕರಿಸುತ್ತಾರೆ.
೧೯೭೨ ರಲ್ಲಿ ಅಮೇರಿಕಾದ ಡಾ || ವಿಲಿಯಂ ಕೋಸೆನ್‌ಬಾಂ ಅವರು ಇಲಿಗಳ ಮೇಲೆ ಅವುಗಳ ರಕ್ತದ ಪ್ರತಿಶತ ೭೫ ರಷ್ಟು ಪ್ರಮಾಣದಲ್ಲಿ ಫ್ಲೂರೋ ಕಾರ್‍ಬನನ್ನೂ ಪೂರೈಸಿ ನೋಡಿದರು. ಅದರಿಂದ ಇಲಿಗಳ ಮಿದುಳು ಮತ್ತು ಹೃದಯದ ಕ್ರಿಯೆಗಳಲ್ಲಿ ವ್ಯತ್ಯಾಸವುಂಟಾಗಲಿಲ್ಲ. ಬಹುಬೇಗನೆ ಫ್ಲೂರೋಕಾರ್ಬನ್ ಅಂಶ ದೇಹದಿಂದ ಮಾಯವಾಗಿ ರಕ್ತವು ಅಧಿಕಗೊಳ್ಳುತ್ತಿರುವುದು ಕಂಡು ಬಂದಿತು. ಇಲಿ ಮತ್ತು ನಾಯಿಗಳ ದೇಹಕ್ಕೆ ಫ್ಲೂರೋಕಾರ್‍ಬನನ್ನು ಪ್ರಯೋಗಿಸಿ ಅವು ದೀರ್‍ಘಕಾಲ ಏನೂ ತೊಂದರೆ ಇಲ್ಲದೇ ಬದುಕಿದ್ದನ್ನು ಮನಗಂಡರು.
ಹಾರ್ವರ್ಡ್ ವಿಶ್ವವಿದ್ಯಾಲಯರಲ್ಲಿ ೧,೫೦೦ ಕ್ಕಿಂತ ಹೆಚ್ಚುರ ರೀತಿ ಫ್ಲೂರೋ ಕಾರ್‍ಬನ ಮಾದರಿ ಚುಚ್ಚು ಮದ್ದುಗಳನ್ನು ತಯಾರಿಸಿ ಅಧ್ಯಯನ ಮಾಡುವ ಕಾರ್‍ಯ ಮುಂದುವರೆದಿದೆ. ಇದರಲ್ಲಿ ಯಾವ ಮಾದರಿಯ ಪ್ರಯೋಗದಿಂದ ಬಲುಬೇಗನೆ ತಾನಾಗಿ ರಕ್ತತುಂಬಿಗೊಳ್ಳುತ್ತದೆ ಎಂಬುದರ ಸೂಕ್ಷ್ಮ ಪರೀಕ್ಷೆಯೂ ನಡೆಯುತ್ತದೆ. ಈ ಶತಮಾನದ ಕೊನೆಗೆ ರಕ್ತಹಾನಿಯ ಅಗತ್ಯವಿಲ್ಲದೇ ನಿಜರಕ್ತವಿಲ್ಲದೇ ಹೊಸ ಮಾದರಿಯ ರಕ್ತ ಗಳಿಸುವ ಸಂಶೋಧನೆ ಬೆಳಕಿಗೆ ಬರುತ್ತದೆ.
*****