ಬರೆದವರು: Thomas Hardy / Tess of the d’Urbervilles
ಬಂದವನು ನರಸಿಂಹಯ್ಯ-ತಾತಯ್ಯನವರನ್ನು ಕಂಡಕೂಡಲೇ ನೇರವಾಗಿ ಹೋಗಿ ಅವರಕಾಲಿಗೆ ನಮಸ್ಕಾರ ಮಾಡಿದೆನು. ಕಣ್ಣುಚಿ ಕೂತಿದ್ದ ಅವರು ಕಣ್ಣು ಬಿಟ್ಟು ನೋಡಿ “ಯಾರು ನರಸಿಂಹಯ್ಯನೇ ?” ಎಂದರು. ಆ ಕಣ್ಣಿನಲ್ಲಿಯೇ ಅವರ ಅಭಿಮಾನ ಕನ್ನಡಿಸಿದಂತೆ ಕಾಣುತ್ತಿತ್ತು. ಮುಖದ ಮೇಲೆ ವಿಶ್ವಾಸದ ಅರಳು ಅರಳಿ ಗಂಭೀರ ತೆಯ ಮಾಯವಾಗಿ ಪ್ರಸನ್ನತೆಯು ಮೂಡಿ, ಮುದಿಮೊಕವು ಭಾವ ಸುಂದರವಾಯಿತು.
“ಏನೋ ತುಂಟ? ನೀನೇನೋ ವಿನೇಕಾನಂದರ ಪುಸ್ತಕ ಓದಿ ಬಹು ಸ್ವಾರಸ್ಯವಾಗಿ ಕನ್ನಡಕ್ಕೆ ಹೇಳುತ್ತೀಯಂತೆ. ಕೇಳೋಣ ಅಂತ ಮಹದೇವ ಶಾಸ್ತ್ರಿಗಳನ್ನೂ ಕರೆಕೊಂಡು ಬಂದರೆ ನೀನೇ ಚಕ್ಕರ್. ನರಸಿಂಹಯ್ಯನು ತಲೆ ತಗ್ಗಿಸಿಕೊಂಡಿದ್ದನು. ತಾತಯ್ಯನವರು ಮುಂದು ವರಿಸಿದರು :
“ನೋಡು, ನೀನು ಲೇಟ್ ಆಗಿ ಬಂದದ್ದು ಎಷ್ಟು ರಂಪ ವಾಯಿತುಗೊತ್ತಾ. ಈ ಮಹಾವಿದ್ವಾಂಸರಿಗೂ ನನಗೂ ಹಣಾಹಣಿ ಯಾಗಿಹೋಯಿತು ಬಲ್ಲೆಯಾ? ಇವರಿಗೆಲ್ಲಾ ಈ ಮುದುಕನಿಗೆ ಕಪಾಳಕ್ಕೆ ಹಾಕಿ ಹಲ್ಲು ಉದುರಿಸಿ ಬಿಡಬೇಕು ಅನ್ನೋಷ್ಟು ಕೋಪ ಬಂದಿದೆ.?
” ಅದಕ್ಕೋಸ್ಕರಲೇ ಏನೋ ಹಲ್ಲೇ ಇಲ್ಲಾ !”
“ಹೀಗೆ ತಲೆ ಹರಟೆ ಮಾಡಿದಾಗ ಯಾರೋ ಉದುರಿಸಿ ಬಿಟ್ಟರು. ಇನ್ನೊಬ್ಬರಿಗೆ ಕೋಪ ಬಂದರೆ ಉದುರಿಸೋಕೆ ಇರಲಿ ಅಂತ ಕಳ್ಳ ಹಲ್ಲು ಕಟ್ಟಿಸಿಕೊಂಡಿದ್ದೇನಪ್ಪ !”
” ನೋಡಿ, ಆರಸಿನೋರೆ, ಇಂಥವರನ್ನು ತೈನಾತಿ ಕೊಟ್ಟು ಫಕೀರ ಸಾಬರ ಗರಡಿ ವಸ್ತಾದರ ಹಾಗೆ ಮಾಡಿ ಅಖಾಡಕ್ಕೆ ಬಿಡ ಬೇಕು. ನಾನು ಹೇಳಿದೆನಲ್ಲ ವಿವೇಕಾನಂದರು ದಯಾನಂದರು ಇವರ ಮಾರ್ಗ ಹಿಡಿದಲ್ಲದೆ ಇಂಡಿಯಾ ಬದುಕೋದಿಲ್ಲ ಅಂತ. ಅವರಿಬ್ಬ ರನ್ನೂ ಒಂದಚ್ಚಿಗೆ ಹಾಕಿ ತೆಗೆದ ಹಾಗೆ ಇರೋನು ನಮ್ಮ ನರಸಿಂಹಯ್ಯ? ? ತಮ್ಮ ಕೈಲಾದರೆ ಮಹಾರಾಜರಿಗೆ ಹೇಳಿ. ಇವನಿಗೆ ನಮ್ಮದು ಈಚಿನದು ಎರಡೂ ವೇದಾಂತ ಪೂರ್ಣವಾಗಿ ಓದಿಸಿ ಅಂತ ಹೇಳಿ. ಶೃಂಗೇರಿಯವರ ಹತ್ತಿರ ಉಪದೇಶ ಕೊಡಿಸಲಿ. ಆಗ ನೊಡೋ ರಂತೆ, ಇವನು ತಿಲಕ್, ಗೋಖಲೆ ಅನಿಬೆಸೆಂಟರಿಗಿಂತ ಭಾರಿಯಾಗ ದಿದ್ದರೆ ಕೇಳಿ. ಆದರೆ–”
“ಹೇಳಿಬಿಡಿ, ಅದನ್ನೂ ಕೇಳೋಣ.”
“ಆಗಲಿ. ಹೇಳೋದು ಹೇಳಿಬಿಡೋಣ, ಎಕ್ಕದ ಬೀಜ ಗಾಳಿ ಯಲ್ಲಿ ಹಾರಿ ಹೋಗಿ ಎಲ್ಲಿಯೋ ಬಿದ್ದು ಗಿಡವಾಗುವ ಹಾಗೆ ನಮ್ಮ ಭಾವನೆಗಳೂ ಎಲ್ಲಿಯಾದರೂ ಹೋಗಿ ನೆಲಸಿ ಫಲವನ್ನು ಕಾಯಲಿ.”
“ಇಂಡಿಯನ್ ಪಾಲಿಟಿಕ್ಸಿನಲ್ಲಿ ಇನ್ನೊಂದು ಆನಂದಮಠದ ಘಟ್ಟ ಬಂದಿದೆ. ಮನೆ ಬಾಗಿಲು ಹೆಂಡತಿ ಮಕ್ಕಳು ಯಾವುದೂ ಇಲ್ಲದೆ, ದೇಶ ದೇಶ ಎಂದು ಬಡಿದುಕೊಳ್ಳುವ ಯೋಗೀಶ್ವರ ಬರಬೇಕು. ಆಗ ನಮಗೆ ಮುಕ್ತಿ.”
“ಆಯಿತು, ಯಜಮಾನರೆ, ನಾವು ಆಡುವ ಉಸಿರು ಕೂಡ ಅಳೆದು ಪರೀಕ್ಷೆ ಮಾಡಿಕೊಡುತ್ತಿರುವ ಈ ಬ್ರಿಟಿಷರ ಕಪಿಮುಸ್ಟಿಯಿಂದ ನಮಗೆ ಮೋಕ್ಷವೂ ಉಂಟೆ?”
ಉಂಟಯ್ಯ, ನರಸಿಂಹಯ್ಯ ಉಂಟು, ವೇದಾಂತದಲ್ಲಿ ಮಿಕ್ಕದ್ದು ಯಾವುದೂ ನನಗೆ ತಿಳಿಯದು. ಆದರೂ ಹುಟ್ಟಿದ್ದೆಲ್ಲಾ ಸಾಯಬೇಕು ಅನ್ನುವ ತತ್ವ ಮಾತ್ರ ಮಾನ್ಯ – ಅದರಿಂದ, ರೋಮನ್ ಎಂಪೈರ್ ಹೋಯಿತು, ಛಾರ್ಲಮೆಯನ್ ಎಂಪೈರ್ ಹೋಯಿತು. ಮೊಗಲ್ ಎಂಪೈರ್ ಹೋಯಿತು. ಹಾಗೆಯೇ ಬ್ರಿಟಷ್ ಎಂಪೈರ್ ಕೂಡ ಹೋಗಬೇಕು: ಹೋಗುತ್ತೆ. ಆದಕ್ಕೆ ಬ್ರಿಟಿಷ್ ಎಂಪೈರ್ ಹೋಗಿ ಇಂಡಿಯ ಸ್ವತಂತ್ರ ವಾಗುತ್ತದೆಯೋ, ಇಂಡಿಯಾ ಹೋಗಿ ಬ್ರಿಟಿಷ್ ಎಂಪೈರ್ ಹೋಗುತ್ತದೆಯೋ ಅದನ್ನು ಮಾತ್ರ ಹೇಳಲಾರೆ. ಹೂಂ. ಇರಲಿ, ನಮ್ಮ ಹರಟೆ. ಇನ್ನೂ ಹತ್ತೂ ವರೆಗಂಟೆ. ಒಂದು ಅರ್ಧ ಗಂಟೆ ತಮ್ಮ ಉಪನ್ಯಾಸವಾಗಲಿ ಕೇಳೋಣ.”
ಅರಸಿನವರ ಕಡೆ ನರಸಿಂಹಯ್ಯ ನೋಡಿದನು: ಅವರು ಎಲ್ಲರ ಕಡೆಯೂ ನೋಡಿದರು. ಎಲ್ಲರೂ, ಆಗಬಹುದೆಂದು ತಲೆಯನ್ನು ತೂಗಿದರು. ನರಸಿಂಹಯ್ಯನು ಪ್ರವಚನವನ್ನು ಆರಂಭಿಸಿದನು. ವಿವೇಕಾನಂದರ ಉಸನ್ಯಾಸಗಳಲ್ಲಿ ಒಂದನ್ನು ತೆಗೆದುಕೊಂಡು ಅವನು ಅದನ್ನು ಕನ್ನಡದಲ್ಲಿ ಹೇಳಿದನು. ತಾತಯ್ಯನವರೂ ಶಾಸ್ತ್ರಗಳೂ ಅವನ ವಾಚೋವೈಖರಿಯನ್ನು ಕಂಡು ಆನಂದಪಟ್ಟರು. ಇಂಗ್ಲೀಷಿ ನಲ್ಲಿ ಒಮ್ಮೆ ಓದುತ್ತಾನೆ. ಆ ವಾಕ್ಯದಲ್ಲಿರುವ ಅರ್ಥವನ್ನೆಲ್ಲ ಹೃದಯ ದಲ್ಲಿ ತುಂಬಿಟ್ಟುಕೊಂಡು ಆ ಭಾವವನ್ನೇ ಸೂಚಿಸುವ ಸರಳ ವಾಕ್ಕಗ ಳಿಂದ ಅದನ್ನು ತಾನು ಅನುಭವಿಸಿ ಸಭಿಕರ ಹೃದಯಕ್ಕೆ ತಗುಲುವಂತೆ ವಿವರಿಸುತ್ತಾನೆ. ಅವರು ಹೌದು ಹೌದು ಎಂದು ಹಲ್ವಾ ತಿಂದು ರಸವನ್ನು ಅನುಭವಿಸಿದರಂತೆ ತಲೆ ತೂಗುತ್ತಾರೆ.
ನರಸಿಂಹಯ್ಯನ ಪ್ರವಚನ ಸುಮಾರು ಒಂದು ಗಂಟೆ ನಡೆಯಿತು. ಎಲ್ಲರೂ ಸಂತೋಷಪಟ್ಟರು. ಎಲ್ಲರ ಸಂತೋಷವೂ ಒಂದು ತೂಕ. ತಾತಯ್ಯನವರದೇ ಒಂದು ತೂಕ ಎನ್ನಿಸಿತು. ಶಾಸ್ತ್ರಿಗಳು “ನಿಜ ವೆಂಕಟಕೃಷ್ಣಯ್ಯನವರೇ, ನೀವು ಹೇಳಿದಾಗ ನಾನೂ ಹೀಗೂ ಉಂಟೆ ಎಂದುಕೊಂಡೆ. ಆದರೆ ಈಗ ನೀವು ಹೇಳಿದ್ದೆಲ್ಲ ಅಕ್ಷರಶಃ ನಿಜ ಎನ್ನಿ ಸುತ್ತೆ. ಪಂಡಿತರನ್ನೂ ಕರೆದುಕೊಂಡು ಬಂದು ತೋರಿಸಿ. ಈಗಲೇ ಬೇಕಾದರೂ ಈತನನ್ನು ನಮ್ಮ ಲೈಬ್ರರಿಯಲ್ಲಿ ಪಂಡಿತನನ್ನಾಗಿ ತೆಗೆದು ಕೊಳ್ಳಬಹುದು. ಏನಯ್ಯ, ನಿನ್ನ ವಯಸ್ಸೆಷ್ಟು ?”
“ನನಗೆ ಹದಿನಾರು ತುಂಬಿತು.”
“ನಿಮ್ಮಪ್ಪನಿಗೆ ನೀನು ಒಬ್ಬನೇ ಮಗ ಅಲ್ಲವೇ ನರಸಿಂಹಯ್ಯ?”
“ಹೌದು ಸಾರ್.”
“ನೋಡಿ, ಇವರಪ್ಪನಿಗೆ ಇನ್ನೊಬ್ಬ ಮಗ ಇದ್ದಿದ್ದರೆ, ನೀನು ಸಂನ್ಯಾಸಿಯಾಗಿ ಹೋಗೋ ಎನ್ನುತ್ತಿದ್ದೆ. ಇವನು ಸಂನ್ಯಾಸಿಯಾಗ ಬೇಕು. ಒಂದು ಕಡೆ ಅನುಷ್ಕಾ ನದಿಂದ್ಯ ದೆ ವಿಶ್ವಾಸದಿಂದ. ಹಿಂದೂ ಆಗಿ, ಇನ್ನೊ ದು ಕಡೆ ಬ್ರಿ ಟಷ್ ಸಿಂಹದ ತ್ ಕೀಳುವ ಧೀರನಾಗ ಬೇಕು. ಏನು ಮಾಡಲಿ. ನನಗೆ ವಯಸ್ಸಾಗಿ ಹೋಯಿತು, ನೋಡಿ. ಅರಸಿನವರೆ ಇನನು ಸಂಸ್ಯಾಸಿಯಾದರೆ, ವಿವೇಕಾಕಂದ : ಗೃಹಸ್ಥನಾ ದರೆ ತಿಲಕ್”
ಅರಸಿನನರು ತೆಲೆದೂಗುತ್ತಾ ಹೇಳಿದರು:
” ಆಗಲೇ ನೀವು ಹೇಳಿದಿರಿ: ಮಹಾರಾಜರಿಗೆ ಹೇಳಿ ಅಂತ, ಈ ನರಸಿಂಹಯ್ಯ ಅರಣ್ಯದ ಸಿಂಹ-.ವಾಗುವ ಜಾತಿ: ಸರ್ಕಸ್ಸಿನ ಸಿಂಹ ವಲ್ಲ.”
ನರಸಿಂಹಯ್ಯ ನಕ್ಕು ಹೇಳಿದ: “ಸಾರ್, ವರ್ಷ ವರ್ಷ ನೂರಾರುಜನ ನನ್ನಂತಹ ತಮ್ಮ ಕೈಕೆಳಗೆ ತಯಾರಾಗಿ ಹೋಗುತ್ತಾರೆ. ಆದ್ದರಿಂದ ನನ್ನ ಹೃದಯದಲ್ಲಿ ಇರುವುದನ್ನು ಹೆದರಿ ಹೆದರಿ ತಮ್ಮ ಮುಂದೆ ಹೇಳುತ್ತೇನೆ. ನಾನು ಸಂನ್ಯಾಸಿಯಾಗ ಬೇಕೆಂದೇ ಇದ್ದೇನೆ, ತಾವು ಹೇಳಿದಂತೆ ತಿಲಕರು, ವಿವೇಕಾನಂದರೇ ನನ್ನ ಜೀವನದ ಗುರಿ. ಈಗ ಮೆಟ್ರಿಕ್ಯುಲೇಷನ್ ಆಗುತ್ತಲೂ ಸಂಸ್ಕೃತ ದಲ್ಲಿ ವಿದ್ವತ್ಪರೀಕ್ಷೆ ಮಾಡಿಕೊಂಡು ಆಮೇಲೆ ಪೂನಾ ಕಲ್ಕತ್ತಾಗಳಿಗೆ ಹೋಗಬೇಕು ಎಂದಿದ್ದೇನೆ. ಅಲ್ಲದೆ, ನಮ್ಮ ತಂದೆಯ ಆಸ್ತಿಯನ್ನು ತಂಗಿಯರಿಗೆ ಬಿಟ್ಟು, “ಸ್ವಂತ ಪರಿಶ್ರಮದಿಂದ ಬದುಕ ಬೇಕೆಂದು ನನ್ನ ಆಸೆ”
ತಾತಯ್ಯನವರು ನಕ್ಕು ಹೇಳಿದರು:
” ನರಸಿಂಹಯ್ಯ, ಜೀವನ ಎಂದರೆ ಏನು ಎಂದುಕೊಂಡಿದ್ದೀಯೆ ? ಇಟ್ ಈಸ್ ಎ ಲೆಬ್ರಿಂತ್ ವಿತ್ ಸರ್ಪ್ರೈಸ್ ಅಟ್ ಎವ್ವೆರಿ ಸ್ಟೆಪ್. ಇದೊಂದು ಚಕ್ರ ಭೀಮನಕೋಟೆ. ಹೆಜ್ಜೆ ಹೆಜ್ಜೆಗೂ ವಿಸ್ಮಯ. ಅದ ರಿಂದ, ಗುರಿಯೊಂದು ಭದ್ರವಾಗಿಟ್ಟುಕೊ. ತೃಪ್ತಿತಪ್ಪದಿರಲಿ, ಬಂದ ದ್ದೆಲ್ಲಾ ಬರಲಿ, ಗೋವಿಂದನ ದಯೆಯಿರಲಿ ಎಂದು ಹೊರಡು. ಗೆಲುವು ನಿನ್ನನ್ನು ಹುಡುಕಿಕೊಂಡು ಬರುತ್ತೆ. ನೋಡಿ, ಅರಸಿನವರೆ ನಿಮ್ಮ ಮಾತಿನಲ್ಲಿ ಅರಣ್ಯದ ಸಿಂಹವಾಗುವ ನರಸಿಂಹಯ್ಯನಿಗೆ, ಮಜ್ಜಿಗೇಹಳ್ಳಿ ರಾವ್ ಬಹೆದ್ದೂರನಂಥ ದಾನಶೂರನ ಒತ್ತಾಸೆ ಸಿಕ್ಕಿದರೆ ಏನಾದೀತು ಗೊತ್ತೇ ?”
“ಅನೇಕ ಸಮಯ ಇಂಗ್ಲಿಷಿನ ಗಾದೆ ಹೇಳುವ ಹಾಗೆ, “ಒಂದು ಮೊಳೆಯಿಲ್ಲದೆ ಲಾಳ ಬಿತ್ತು. ಲಾಳವಿಲ್ಲದೆ ಕಾಲು ಕುಂಟಿತು, ಕಾಲು ಕುಂಟಿ ಕುದುರೆ ಕೆಟ್ಟಿತು.’ ಅನ್ನುವ ಹಾಗೆ ಆಗುವುದು ತಪ್ಪುತ್ತೆ. ಅಂಥಾವರ ಆಶ್ರಯ ಬೇಕಾಗಿಲ್ಲ. ಈ ಜಾತಿ ಆಶ್ರಯಿಸುವುದೂ ಇಲ್ಲ: ಸ್ನೇಹ ಇದ್ದರೆ, ದೀಪಕ್ಕೆ ಸ್ನೇಹ ಇದ್ದಹಾಗೆ ಆಗುತ್ತೆ : ಉರಿದು ದೀಪಕ್ಕೆ ಆಗಬೇಕಾದ್ದೇನೂ ಇಲ್ಲ: ಆದರೆ ದೀಪ ಉರೀದಿದ್ದರೆ ಇದ್ದವರಿಗೆಲ್ಲಾ ಕತ್ತಲೆ.”
ಶಂಭುರಾಮಯ್ಯನು “ತಾವು ಹೇಳಿದೋರ ಹತ್ತಿರ ಸಂಬಂಧಿಗಳು ಇಲ್ಲೇ ಇದ್ದಾರೆ ಬುದ್ಧಿ ” ಎಂದೇ ಬಿಟ್ಟ.
ತಾತಯ್ಯನನರು ಮಲ್ಪಣ್ಣನ ಪೂರ್ವೋತ್ತರ ವಿಚಾರಿಸಿ, “ಇಂಥಾವರ ಸ್ನೇಹ ಸಂಪಾದಿಸಿಕೊಳ್ಳಿ. ನಿಮಗೊಂದು ಚಿನ್ನದಗಣಿ ಸಿಕ್ಕಿದ ಹಾಗಾಗುತ್ತೆ ಎಂದು ನಾನು ಹೇಳಿದೇ ಅಂತ “ಹೇಳಿ. ಅವರು ಈಸಲ ಬಂದಾಗ ನನ್ನ ಅವರೇ ಬಂದು ನೋಡಿದರೂ ಸರಿ. ಬಾ ಅಂದರೆ ನಾನೇ ಬರುತ್ತೇನೆ ಅಂತಲೂ ಹೇಳಿ.” ಎಂದರು.
ಮಲ್ಲಣ್ಣಗೆ ತಾತಯ್ಯನವರಂತಹ ಮಹಾಪುರುಷರು ತನ್ನೊ ಡನೆ ಮಾತನಾಡಿದರಲ್ಲ ಎಂದು ಪರಮ ಸಂತೋಷವಾಗಿ ಹೋಯಿತು.
ಮಲ್ಲಣ್ಣನು ಮನೆಗೆ ಹೋಗುವ ವೇಳೆಗೆ ಹನ್ನೆರಡು ಗಂಟೆಯಾಗಿ ಹೋಗಿತ್ತು. ಮಜ್ಜಿಗೇ ಹಳ್ಳಿಯಿಂದ ಸುದ್ದಿ ಬಂದಿತ್ತು: “ಮಲ್ಲಮ್ಮಣ್ಣಿ ಮೈನೆರೆದಿದ್ದಾರೆ. ಈ ಕೂಡಲೇ ಇಬ್ಬರೂ ಬರಬೇಕು. ಅನಂದನ್ನು ನವರು ಶಂಭುರಾಮಯ್ಯನವರನ್ನೂ ಕರೆದು ತೆರಬೇಕು ” ಎಂದು ರಾಣಿ ಸುಂದರಮ್ಮಣ್ಣಿಯವರು. ಕೆಂಪಮ್ಮಣ್ಣಿಯವರಿಗೆ ಬರೆದಿದ್ದರು.
ಮಲ್ಲಣ್ಣನು ಸುದ್ದಿಯನ್ನು ಕೇಳಿ “ಮತ್ತೆ ಇನ್ನೂ ಗಂಟೇ ಕಟ್ಟಿಲ್ಲವಲ್ಲಾ “ಕೆಂಪಮ್ಮಣಿ ಯವರು ?” ಎಂದನು. “ಮಾತಿನಲ್ಲಿ ಕೊಂಕು ತಾನೇ ತಾನಾಗಿತ್ತು.
ಕೆಂಪಿಯೂ ಅದೇ ಕೊಂಕು ಸೇರಿಸಿ ಹೇಳಿದಳು: “ಮಲ್ಲ ಬುದ್ದಿಯವರ ಸವಾರಿ ಬರಲಿ ಅಂತ ಕಾದಿದ್ದರು.”
“ಹೆಂಗಂದರೆ ಊಟಾನೂ ಅಲ್ಲೇನೋ ?”
“ಹುಜೂರ್ ಅಪ್ಪಣೆ ಆದಂಗೆ.”
“ನಾವು ಬರೋಕಿಲ್ಲ. ನಮಗೆ ಬಹಳ ಕೆಲಸಾ ಅದೆ.”
” ಅಬ್ಬಾ ! ಅದೇನೋ ನಾಕಾಣದ ಕೆಲಸ.”
“ಬಲು ಭಾರಿ ಕೆಲಸ.”
“ಅದೇನೂ ಅಂತಲಾದರೂ ಹೇಳಬಾರದಾ ಮೂದೇವಿ!”
“ಹಂಗೆ ಬಾ ದಾರಿಗೆ. ಅಲ್ಲಾ ಕಣ್ಲೇ ! ಕೇಳಿಲ್ಲವಾ? ಮಾದೇ ವನೇ ಮಾಯೆ ಕೈಹಿಡಿದು ಮೂದೇವಿಯಾದ ಮೇಲೆ ನಿನ್ನಂತಾ ಹೆಣ್ಣು ದೈಯ ಹಿಡಿದಿರೋ ನಾನು ಮೂದೇವಿಯಲ್ಲದೆ ಇನ್ನೇನಾ ದೇನು?”
“ಏ! ನನ್ನೇ ದೈಯ ಮಾಡಬುಟ್ಟರಲ್ಲಾ, ನೋಡಿದಿರಾ? ಅದೇನಾ ಕೆಲಸ ಏಳಿ ಅಂದ್ರೆ.”
ಹೊಟ್ಟೆ ಪೂಜೆಯ ಮಾಡಬೇಕಮ್ಮೀ ॥ಅಮ್ಮೀ॥l ತಟ್ಟೆ ಮುಂದೆ ಕೂತುಕೊಂಡು, ರೊಟ್ಟಿ ಎದುರು ಇಟ್ಟುಕೊಂಡು, ಚೆಟ್ನಿ ತುಪ್ಪ ಹಾಕಿಕೊಂಡು, ಪಟ್ಟಾಗಿ ಹೊಡೆಯುತ್ತಾ ॥
“ಅಂಯ್ ! ನಿಮ್ಮ ಸರಸ ಏನೇಳೇವೋ! ನಾನು ನಿಜವಾಗಿ ಏನೋ ಕೆಲಸ ಕಟ್ಟಿಕೊಂಡು ಬಂದವ್ರೆ ಅಂತಿವ್ನಿ. ಆಗ ಕಾಲಲ್ಲಿ ತಿರುಗತಾ ಇದ್ದಾಗ ಮೊಕಾ ಕಂದೀ ಹಸಿವು ಗೊತ್ತಾಯ್ತಿತ್ತು. ಈಗ ಗಾಡೀಲಿ ತಿರುಗೋವಾಗ ತಿಳೀನಿಲ್ಲ. ಏಳಿ. ಆಮೇಲೆ ಮಾತಾಗಲಿ. ಅಯ್ಯನೋರಿಗೆ ಯಾವಾಗ ಹೇಳುತೀರಿ ?
ಹೊಟ್ಟೆಯನ್ನು ತೋರಿಸಿ ಅದನ್ನು ತಟ್ಟುತ್ತಾ “ಮೊದಲು ಇದು. ಆ ಮೇಲೆ ಅದು” ಎಂದನು.
“ಅಂಗೇ ಆಗಲೇಳಿ. ಏಳಿ ಮತ್ತೆ?”
ನೀರು ಸಿದ್ದವಾಗಿತ್ತು.
“ಅಲ್ಲ ಕಣ್ರಿ, ಅಮ್ಮಣ್ಣಿಯವರೇ, ಮೈ ಬೆವರು ಆರಬೇಕೋ ಬೇಡವೋ ? ಬೆವರಿರೋವಾಗ ಗಾಳಿಗೆ ಮೈ ಬಿಟ್ಟರೆ ಸೀತಾ ಗೀತಾ ಆದರೋ?”
“ಸೀತಾ ಆದರೆ ರಾಮನ್ನ ಕರೆತರೋದು.?
“ಹೌದು ಹೌದು, ಸೀತೇನ ರಾಮನ್ನ ಕೂಡಿಸೋಕೆ ತಾವು ಹೊರಟಿರೋದು.”
“ಅಂಯ್ ! ಮೂದೇವಿ ಎಲ್ಲಿಂದೆಲ್ಲಿಗೋ ಹಾರುತದೆ. ಎಳು ಊಟಕ್ಕೆ
“ಬರೋ ವರ್ಷ ಮೊಮ್ಮಗನ್ನ ಎತ್ತುಕೊಂಡು, ಎರಡು ಸಲ ಮೂದೇವಿ ಮೂದೇವಿ ಅನ್ನು ಅವನು ನನ್ನ ಮೂದೇವೀ ಅಂತಲೇ ಕರೀಲಿ. ಆಯಿತು. ಯಾವಾಗ ಮೈನೆರೆದದ್ದು ? ಎಲ್ಲಾ ಚೆನ್ನಾ ಗದಾ? ಹೆಂಗೆ ಅಂತೀನಿ.”
“ಕಾಗದಾನೇ ಕೊಟ್ಟನಲ್ಲಾ?
“ಓದೋ ಕಷ್ಟಯಾಕೇ? ಬಾಯಲ್ಲಿ ಹೇಳೋರಿರುವಾಗ ??
“ನಾನೂ ಕೇಳ್ದೆ. ಎಲ್ಲಾ ಚೆನ್ನಾಗದೆಯಂತೆ.?
“ಪ್ರಯಾಣ ಯಾವಾಗ
” ಸಂಜೆಗೆ. ”
ಹೀಗೇ ವಿನೋದವಾಗಿ ಮಾತನಾಡಿಕೊಂಡು ಊಟಮಾಡುತ್ತಿರು ವಾಗಲೇ ಅಯ್ಯನವರು ಬಂದರು. “ಅಣ್ಣಾವರೆ! ಅಣ್ಣಾವರೆ
ಯುದ್ಧ ಷುರುವಾಯ್ತಂತೆ.?
ಮಲ್ಲಣ್ಣ ಗಾಬರಿಯಾಗಿ “ಅಂದ್ರೆ ?” ಅಂದ.
” ಅಂದ್ರೆ ಏನು? ಇಂಗ್ಲಿಷ್ನವರಿಗೂ ಜರ್ಮನರಿಗೂ ಯುದ್ಧ ಆಯ್ತದೆ ಇನ್ನು ಅಂತ!”
” ಹಂಗಾದರೆ ಸುದ್ದಿ ನಿಜವಾಯಿತು. ಅದಿರಲಿ ಬುಡಿ. ನಮ ಗೇನು? ನಿಮಗೊಂದು ಪಯಣ ಬಂದದೆ!”
” ಅಂದ್ರೆ ?” “ಹೇಳ್ತೀನಿ ಕುಂತು ಕೊಳ್ಳಿ.”
*****