ಬರೆದವರು: Thomas Hardy / Tess of the d’Urbervilles
ದಾರಿಯಲ್ಲಿ ಕುಲಿಮೆ ಸಿಕ್ಕಿತು. ಸುಬ್ಬಾಚಾರಿ ಬಂದು ಅಡ್ಡ ಬಿದ್ದು ಒಂದು ಹಾರಾ ತುರಾಯಿ ಒಪ್ಪಿಸಿದನು. ದಿವಾನರ ಸವಾರಿಯು ಅಲ್ಲಿ ನಿಂತಿತು. “ಏನು ಆಚಾರ್ರೇ, “ಏನಕ್ಕೆ ಎಷ್ಟು ಕಬ್ಬಿಣ ತಟ್ಟು ತ್ತೀರಿ? ನಿಮಗೆ ಎಷ್ಟು ಸಿಕ್ಕತ್ತೆ” ತಿದಿಯವನಿಗೆ ಎಷ್ಟು ಕೊಡು ತ್ರೀರಿ? ಇಜ್ಜಲು ಎಲ್ಲಿಂದ ತರುತ್ತೀರಿ? ನಿಮಗೆ ಕಬ್ಬಿಣ ಎಲ್ಲಿಂದ ಸಪ್ಲೈ ಆಗುತ್ತೆ ? ಒಂದು ಗುಳ ಮಾಡೋಕೆ ಎಷ್ಟು ಹೊತ್ತು ಕಾಯಿಸ ಬೇಕು? ಎಂದು ಪ್ರಶ್ನೆಗಳ ಸುರಿಮಳೆ ಹಾಕಿಬಿಟ್ಟಿರು. ಸುಬ್ಬಾಚಾರಿಗೆ ಬಾಯಿ ತೊದಲು ಬಂದುಬಿಟ್ಟಿತು. “ಮಹಾಸ್ವಾಮಿ! ಈ ತಿದಿ ನಮ್ಮ ತಾತ ಮಾಡಿಸಿದ್ದು ಬುದ್ದಿ. ಆ ಚಮ್ಮಟಗೆ ನಮ್ಮ ಅಪ್ಪ ತಾನೇ ಮಾಡಿದ್ದು ಪಾದ.” ಎಂದು ಏನೇನೋ ಹೇಳುವುದಕ್ಕೆ ಷುರುಮಾಡಿದೆ. ನಾಯಕನು “ಅಲ್ಲ ಕಣೋ, ಬುದ್ಧಿಯವರು ಕೇಳಿದ್ದಕ್ಕೆ ಹೇಳೋ!” ಎನ್ನಲು, ಅವನಿಗೆ. ಇನ್ನೂ ಗಾಬರಿಯಾಗಿ ಹೋಗಿ ” ಅದೆಲ್ಲಾ ನಮ್ಮ ಬುದ್ಧಿಯೋರು ಎಂಗೆ ಹೇಳಿದರೆ ಹಂಗೆ! ತಮ್ಮ ಪಾದ” ಎಂದುಬಿಟ್ಟ, ದಿವಾನರು “ನೋಡಿ ನಮ್ಮವರಿಗೆ ಇದೊಂದೂ ಗೊತ್ತಿಲ್ಲ. ಇದೆಲ್ಲ ಚಾರ್ಟ್ ಹಾಕಬೇಕು. “ದಿನದಿನವೂ ರಿಕಾರ್ಡ್ ಬ್ರೇಕ್ ಮಾಡೋಕೆ ಪ್ರಯತ್ನ ಮಾಡಬೇಕು. ಇರಲಿ. ಏನಯ್ಯಾ ಆಚಾರ್ರೇ! ನೀವು ಕಬ್ಬಿಣ ಉಕ್ಕು ಮಾಡಿತ್ತೀರೋ? ಎಂದರು.
“ಮಾಡುತೀವಿ ಮಹಾಪಾದ?
“ಎಷು ಮಾಡುತೀರಿ !”
ಆದಷ್ಟು ಮಹಾಪಾದ.?
ನಾಯಕನು, ಆ ಉತ್ತರದಿಂದ ದಿವಾನರಿಗೆ ನಗು ಬಂದುದನ್ನು ನೋಡಿ, “ಮಹಾಸ್ವಾಮಿ ಅವನ ಗಾಬರಿ ಯಾಗಿದ್ದಾನೆ. ಇವರ ಮನೆತನ ಕತ್ತಿ ಮಾಡುವುದರಲ್ಲಿ ಬಹು ಪ್ರಸಿದ್ಧವಾದುದು. ಆದರೆ, ಈಗ ಸರ್ಕಾರದ ರೂಲ್ಸು: ಮಾಡೋ ಹಾಗಿಲ್ಲ. ಈಗಲೂ ಹಳೇ ಕಾಲದ ಎರಡು ಕತ್ತಿ ಇವರ ಮನೆಯಲ್ಲಿ ಇದ್ದಾವೆ. ತಂದು ತೋರಿ ಸಯ್ಯಾ ?”
ಸುಬ್ಬಾಚಾರಿಯು ಹೆದರಿ ಜೊತೆಯಲ್ಲಿದ್ದ ಪೋಲೀಸ್ ಸೂಪ ರಿಂಟೆಂಡೆಂಟಿರ ಮೊಕ ನೋಡಿದನು. ದಿವಾನರು ನಕ್ಕು ಅವರ ಮೊಕ ನೋಡಿ, “ಹಿ ಈಸ್ ಅಫ್ರೇಡ್ ಆಫ್ ಯು ಐಸೆ, ಪರ್ಮಿಟ್ ಹಿಂ” ಎಂದರು. ಅವರ ಅಪ್ಪಣೆಯಾಯಿತು. ಸುಬ್ಬಾಚಾರಿಯು ಒಳಕ್ಕೆ ಹೋಗಿ ಹಿಂದಿನ ಕಾಲದ ಎರಡು ಕತ್ತಿಗಳನ್ನು ತಂದನು. ಅವುಗಳ ಪರೀಕ್ಷೆಯೂ ನಡೆಯಿತು. ಮೂರು ನಾಲ್ಕು ಅಂಗುಲ ಬೆಳೆದ ಹಲ್ಲು ಚಕ್ಕನೆ ಹಾರಿ ಹೋಯಿತು. ಅದನ್ನು ಕತ್ತರಿಸುವಾಗ ನೆಗೆದು ಕೂತು ಕತ್ತಿ ಬೀಸಿದ ಚಾತುರ್ಯ ದಿವಾನರ ಮನಸ್ಸಿಗೆ ಹಿಡಿಯಿತು.
ದಿವಾನರು ಕತ್ತಿಗಳನ್ನು ಪರೀಕ್ಷಿಸಿದರು: “ಇದು ಡಮಾಸ್ಕಸ್ ಸ್ಟೀಲ್ ನಾಯಕರೆ ಬಲ್ಲಿರಾ? ನಮ್ಮ ದೇಶದಿಂದ ಇಂಗ್ಲೆಂಡಿಗೆ ಉಕ್ಕು ಹೋಗುತ್ತಿತ್ತು. ಈಗ ಕಬ್ಬಿಣದ ಮೊಳೆ ಕೊನೆಗೆ ಸೂಜಿ ಕೂಡ ನಮಗೆ ಹೊರ ದೇಶದಿಂದ ಬರಬೇಕು. ಇದು ತಪ್ಪಬೇಕು. ನಮ್ಮ ಜನದಲ್ಲಿ ಸ್ವದೇಶೀ ಅವತಾರಬೇಕು. ಈಗ ಬಂಗಾಳದಲ್ಲಿ ಅಷ್ಟಿದೆ. ಮಹರಾಷ್ಟ್ರದಲ್ಲಿ ಹುಟ್ಟುತ್ತಿದೆ. ನಮ್ಮಲ್ಲಿ ಇನ್ನೂ ಆ ಕೂಗು ಆಲ್ಲಿ ಕೇಳುತ್ತಿದೆ : ಅಷ್ಟೇ. ನೋಡಿ, ನಾನು ಪೂನಾದಲ್ಲಿ ಒಬ್ಬ ಪುಣ್ಯಾತ್ಮನ್ನ ಕಂಡಿದ್ದೆ. ಆತ ಸ್ವಂತ ದಾರ ತೆಗೆದು ಅದರಿಂದ ಬಟ್ಟೆ ಮಾಡಿಸಿ ಉಟ್ಟುಳೊಳ್ಳುತ್ತಿದ್ದ. ಅದು ಸ್ವದೇಶೀ ಭಾವನೆ ! ಜೊತೆಗೆ ಸ್ವದೇಶೀ ಪರದೇಶಿಯ ದ್ವೇಷವಾಗದೆ, ಸ್ವದೇಶಿಯ ಪ್ರೇಮವಾಗಬೇಕು. ಇರಲಿ, ಈಗ ಈ ಉಕ್ಕು ಮಾಡುವ ತರ ಇವರಿಗೆ ಗೊತ್ತೋ?
“ಇಲ್ಲ ಸ್ವಾಮಿ ” ಇಷ್ಟು ಸೊಗಸಾದ ಉಕ್ಕು ಇವರ ಅಪ್ಪನ ಕಾಲಕ್ಕೇ ಹೋಯಿತು. ಇವನು ಕೊಡೋಹಂಗೆ ಹದ ಯಾರೂ ಕೊಡೋದಿಲ್ಲ. ಆದರೂ ಆನೀರು ಕುಡಿಸೋದು ಇವರ ಅಪ್ಪನಿಗೇ ಆಗಿ ಹೋಯಿತು.?
“ನೋಡಿ, ಇಲ್ಲಿದೆ ನಮ್ಮ ಅವನತಿ, ನಾಯಕರೆ, ಎಲ್ಲಾ ಕಸ್ತೂರಿ ಕಟ್ಟದ ಬಟ್ಟೆಯಾಗಿದೆ. ಕಸ್ತೂರಿ ಹೋಗಿದೆ. ನಾವು ಕಸ್ತೂರಿ ತರ ಬೇಕು. ಆಗ ದೇಶೋದ್ಧಾರ. ಬಹುಶಃ ಎಲ್ಲಾ ನಾವು ಪರದೇಶದವ ರಿಂದಲೇ ಕಲಿಯೆಬೇಕೋ ಏನೋ? ಆದಕ್ಕೇ ನಾನು ಇಂಗ್ಲಿಷ್ ಕಲಿಯಿರಿ ; ಇಂಗ್ಲಿಷ್ ಕಲಿಯಿರಿ ಎನ್ನುತ್ತಿರುವುದು. ಇಂಗ್ಲಿಷ್ ಕಲಿ ತವರಿಗೆ ಇರುವ ದೇಶಾಭಿಮಾನ ಇಂಗ್ಲಿಷ್ ಕಲಿಯದವರಿಗಿಲ್ಲ. ಆಯಿತು. ಕಬ್ಬಿಣ ಎಲ್ಲಿಂದ ತರುತ್ತಾರೆ?”
“ಯಾವುದಾದರೂ ಹಳಿಯ ಕಬ್ಬಿಣ ಅಥವಾ ಮಳವಳ್ಳಿ ಕಡೆ ಯವವರು ಆಗಾಗ ಒಂದಿಷ್ಟು ಕಬ್ಬಣ ತಂದು ಮಾರುತ್ತಾರೆ. ಆದರೆ ಅಷ್ಟು ಬರುವುದಿಲ್ಲ. ಅಲ್ಲೀದು ಒಳ್ಳೆಯ ನಾಡುಕಬ್ಬಿಣ.?
“ನಮ್ಮಲ್ಲಿ ಅದರಲ್ಲೂ ಬಾಬಾ ಬುರ್ಡದಲ್ಲಿ ಒಳ್ಳೆಯ ಕಬ್ಬಿಣದ ಅದುರು ಇದೆ. ಆದರೆ ನಾನು ಒಂದು ಮಣ, ಎರಡು ಮಣ, ಮಾಡಿ ಸಾಕು ಅನ್ನುವಕಾಲ ಹೋಯಿತು. ಅಮೇರಿಕದಲ್ಲಿ ಕಾರ್ನಿಗಿ ಹುಟ್ಟಿ ಕಬ್ಬಿಣ, ಕಬ್ಬಿಣ, ಎಂದು ಕೂಗಿಬಿಟ್ಟ. ಲೋಕವೆಲ್ಲ ಕಬ್ಬಣ ಆಗಿ ಹೋಗುತ್ತಿದೆ. ನಾವು ಒಂದು ಕಬ್ಬಿಣದ ಕಾರ್ಖಾನೆ ಮಾಡಬೇಕು: ಆದರೆ ಅದಕ್ಕೆ ಬ್ರಿಟಿಷ್ ಸರಕಾರ ಒಪ್ಪಬೇಕು. ಇರಲಿ.”
“ಯಾಕೆ ಬುದ್ದಿ, ಬ್ರಿಟಿಷ್ ಸರಕಾರ ಅಪ್ಪಣೆ ಕೊಡೋಕಿಲ್ವಾ ?” ನಾಯಕನು ಕೇಳಿದನು. ದಿವಾನರು ನಕ್ಕು ಹೇಳಿದರು :
ಈ ಊರಿಗೊಬ್ಬ ರಾವ್ ಬಹದ್ದೂರ್ ಮಾಡಾರು. ಕಾರಖಾನೆ ಮಾಡಗೊಡುವುದಿಲ್ಲ. ನಾಯಕರೇ! ಬ್ರಿಟಿಷರ ದೃಢಮುಷ್ಟಿ ನಮ್ಮ ಜನಕ್ಕೆ ಇನ್ನೂ ಗೊತ್ತಿಲ್ಲ. ಚಾಕುಬೇಕು ರಾಡ್ಜರ್ಸ್, ಕೌರದಕತ್ತಿ ಬೇಕು ಹಾಲೋವೇಸ್, ಗರ್ಡರ್ಬೇಕು ಮಾಂಚೆಸ್ಟರ್, ಉಡೋಕೆ ಬಟ್ಟೆ ಬೇಕು ೧೭೦೨-ನಾವು ಬದುಕುವವರೇ ? ಬ್ರಿಟನ್ ಇಂಡಿಯವನ್ನು ಹಿಡಿದಿರೋದು ಪಗೋಡಮರ ಎಂದು. ಏನು ಮಾಡೋದು ? ಇದೆಲ್ಲ ಇರೋದು ಇಂಗ್ಲಿಸಿನಲ್ಲಿ. ನಿಮಗೆ ಅನೇಕರಿಗೆ ಇಂಗ್ಲಿಷ್ ತಿಳೀದು. ಇಂಗ್ಲಿಷ್ ಓದಿದೋರೂ ಷೇಕ್ಸ್ ಪಿಯೆರ್, ಮಿಲ್ಟನ್,, ಷೆಲ್ಲಿ ಟಿನ್ನಿಸನ್ ಎಂದು ಕೂರುವರೇ ಹೊರತು, ಈ ಎಕನಾಮಿಕ್ಸ್, ಅಂದರೆ ಈ ವಿಚಾರವೇ ನೋಡೋಲ್ಲ. ಹಣ, ಹಣ, ಹಣ, ದೇಶದಲ್ಲಿ ಪ್ರತಿ ಯೊಬ್ಬರೂ ಹಣವಂತರಾಗಬೇಕು. ಸರಕಾರಬೇಕು ಅಂದಾಗ ಹತ್ತು ಕೋಟ ಸಾಲ ದೇಶದಲ್ಲಿ ಹುಟ್ಟೋ ಹಾಗೆ ಆಗಬೇಕು. ಹಾಗೆ ಆಗಲು ಜನ ವಿದ್ಯಾವಂತರಾಗಬೇಕು. ಅದಕ್ಕೇ ನಾನು ಯೂನಿವರ್ಸಿಟಿ ಬೇಕು ಅನ್ನುವುದು. ನಾನು ದಿವಾನ್ಗಿರಿ ಬಿಡುವುದರೊಳಗೆ ಒಂದು ಕನ್ನಂಬಾಡಿ, ಒಂದು ಯೂನಿವರ್ಸಿಟಿ, ಒಂದು ಕಬ್ಬಿಣದ ಕಾರ್ಖಾನೆ ಇಷ್ಟುಮಾಡಿ ತೀರುತ್ತೇನೆ ಎಂದು ಹಟ ಕಟ್ಟಿದ್ದೇನೆ. ಮಾಡಿತೀರು ತ್ತೇನೆ. ಇರಲಿ. ಹೋಗೋಣ ಥ್ಯಾಂಕ್ಸ್ ಆಚಾರ್ರೆ. ನೋಡಿ, ಉಕ್ಕು, ಉಕ್ಕು, ನಿಮ್ಮನ ಹಾಗೆ ನೀವೂ ಉಕ್ಕುಮಾಡಿ.”
ದಿವಾನರು ಮುಂದೆ ಹೊರಟರು. ದಾರಿಯಲ್ಲಿ ಒಂದು ಭಾರಿಯ ಆಲದ ಮರ ಸಿಕ್ಕಿತು. ದಿವಾನರು ಅದನ್ನು ನೋಡಿದರು. ನಾಯಕನು ಮುಂದೆಬಂದು ಅದರ ವಿಚಾರ ಹೇಳಿದನು: ” ಬುದ್ಧಿ ಈಗ ಇದು ಸುಮಾರು ನೂರುವರ್ಷದ ಮರ. ನಮ್ಮ ಹಿರಿಯರು ನೆಟ್ಟದ್ದು. ನಮ್ಮತಂದೆ ನೋಡೋ ವ್ಯಾಳ್ಯಕ್ಕೆ ಇದು ಚೆನ್ನಾಗಿ ಬಿಳಲು ಬಿಟ್ಟಿತ್ತಂತೆ ನೋಡಿ. ಅದರ ನೆತ್ತಿಮೇಲೆ ಯಾವಾಗಲೂ ಹೆಜ್ಜೇನು ಹತ್ತು ಹನ್ನೆ ರಡು ಗೂಡು ಕಟ್ಟೇ ಇರುತ್ತವೆ.”
“ನೋಡಿ ನಾಯಕರೆ ಈ ಜೇನುಗೂಡು ತಾನಾಗಿ ಹುಳು ಕಟ್ಟಿದ್ದು. ಆ ದೇಶಗಳಲ್ಲಿ ಈ ಹುಳು ಸಾಕುತ್ತಾರೆ; ದೊಡ್ಡ ದೊಡ್ಡ ಪೆಟ್ಟಿಗೆಗಳಲ್ಲಿ ಅದನ್ನು ಕೂಡಿಟ್ಟು ಆಗಾಗ ಗೂಡಿನಿಂದ ಜೇನು ತೆಗೆಯ ತ್ತಾರೆ. ಬ್ರೆಡ್ಜೊತೇಲಿ, ಹಣ್ಣು ಜೊತೇಲಿ, ಹಾಲು ಜೊತೇಲಿ, ಜೇನುತುಪ್ಪ ತಿನ್ನುತ್ತಾರೆ. ನಮಗೆ ಸಕ್ಕಕೆ ಬೆಲ್ಲ ಸಾಕಾದಷ್ಟು ಇಲ್ಲ: ಇನ್ನು ಜೇನು ಎಲ್ಲಿಂದ ಬರಬೇಕು? ಇಂಥಾದ್ದೊ೦ದು ಮರ ಊರ ಮಗ್ಗುಲಲ್ಲಿದ್ದರೆ ಅಲ್ಲಿ ಅದಕ್ಕೊಂದು ಕಟ್ಟೆ ಕಟ್ಟಿ ಅದರ ಕೆಳಗೆ ಹುಡು ಗರು “ಆಡುವ ಮೈದಾನ ಮಾಡುತ್ತಾರೆ.”
“ನಮ್ಮಲ್ಲಿ ತಪ್ಪದೆ ಅಲ್ಲಿ ಎರಡ ಮಾಡ್ತಾರೆ?” ಯಾರೋ ಗುಂಪಿನಿಂದ ಹೇಳಿಬಿಟ್ಟರು ದಿನಾನರೂ ನಕ್ಕು “ಅದನ್ನು ಸರಿಯಾಗಿ ಉಪಯೋಗಿಸಿದರೆ ಅದೂ ಒಳ್ಳೆ ಗೊಬ್ಬರ” ಎಂದು ಮುಂದೆ ಹೊರ ಟರು.
ದೊಡ್ಡ ಆಲದ ಮರದಿಂದ ಸುಮಾರು ಒಂದು ಫರ್ಲಾಂಗು ದೂರದಲ್ಲಿ ರೇಶಿಮೆಪಾಳ್ಯ. ಅಲ್ಲೆಲ್ಲಾ ತುರುಕರು. ದಾರಿಯುದ್ದಕ್ಕೂ ಹಿಪ್ಸಿನೇರಿಲೆತೋಟ. ಹಕೀಂ ಆ ಪಾಳ್ಯದ ಯಜಮಾನ. ಅರಮನೆ ಯಲ್ಲಿ ತಬೇಲಿ ಮೊಕ್ತೇಸರ್: ಮನೇಲಿ ರೇಶಿಮೆಗಾರ. ದಿವಾನರು ಪಾಳೆಯಕ್ಕೆ ಬರುತ್ತಿದ್ದ ಹಾಗೆಯೇ ಹಕೀಂ ಮುಂದೆಬಂದ : ಅವನ ಜೊತೆಯಲ್ಲಿ ಹತ್ತು ಹದಿನೈದು ಜನರು. ಹಕೀಂ ದೊಡ್ಡ ಹಾರತಂದು ದಿವಾನರ ಕೊರಳಿಗೆ ಹಾಕಿದನು. ನಾಯಕನ ಕೊರಳಿಗೂ ಒಂದು ದಿಂಡು ಹಾರಬಿತ್ತು. ಸೂಪರಿಂಟೆಂಡೆಂಟರಿಗೆ ಒಂದು, ಪಟೇಲ್ ಶಾನುಭೋಗರಿಗೆ ಒಂದೊಂದು ಹಾರಗಳು ಹಾಕಿದಮೇಲೆ ಹಕೀಂನು ಪಾಳೆಯವನ್ನು ತೋರಿಸಿದನು. ಸುತ್ತಲೂ ಮನೆಗಳು. ಆದರ ನಡುವೆ ಸುಮಾರು ಒಂದು ಎಕರೆಯಷ್ಟು ವಿಸ್ತಾರವಾದ ಒಂದು ಬಯಲು. ಅಲ್ಲಿ ಚಂದ್ರಂಕಿಗಳು ಅಲ್ಲಲ್ಲಿ ತಡಕೆಗಳು. ಬಿಸಿಲು ಗಾಳಿ ಹೆಚ್ಚಾದಾಗ ಅವುಗಳ ಉಪಯೋಗ. ಅಲ್ಲಲ್ಲಿ ಎತ್ತರವಾದ ಗಿಡಗಳು. ಬಯಲಿನಸುತ್ತ ತಂತಿಬೇಲಿ.
ದಿವಾನರು ಒಂದೊಂದಾಗಿ ನೋಡಿಕೊಂಡು ಬಂದರು. ಅಲ್ಲಿಯೂ ಅವರ ಪ್ರಶ್ನೆಗಳ ಸುರಿಮಳೆ ಆರಂಭವಾಯಿತು: “ನೀವು ರೇಶಿಮೆ ಎಷ್ಟು ತಯಾರಿಸುತ್ತೀರಿ ??
“ಸುಮಾರು ಒಂದೊಂದು ಸಲಕ್ಕೆ ಎಂಟು ಹತ್ತುಮಣ ಆಗ ಬೋದು ಖಾವಂದ್ ? i
“ಅದೆಲ್ಲಿಗೆ ಕಳುಹಿಸುತ್ತೀರಿ?”
“ನಮಗೆ ಅದೆಲ್ಲಾ ಗೊತ್ತಿಲ್ಲ ಖಾವಂದ್ ! ನಾವು ತಕೊಂಡು ಹೋಗಿ ಮೈಸೂರು ಬೆಂಗಳೂರು ವರ್ತಕರಿಗೆ ಮಾರಿಬಿಡುತ್ತೇವೆ. ಅವರು ಅದನ್ನು ತೋಡಿ, ಬಣ್ಣಹಾಕಿಸಿ, ಬೊಂಬಾಯಿ ಕಡೆ ಕಳುಹಿಸು ತಾರಂತೆ, ಖಾವಂದ್?
“ಪರದೇಶಕ್ಕೆ ಹೋಗುತ್ತದೆ. ಅಲ್ಲಿ ಅವರಿಗೆ ದಾರ ಎಷ್ಟು ದಪ್ಪ ಇರಬೇಕು? ಎಷ್ಟುದ್ದ ಇರಬೇಕು? ಯಾವಬಣ್ಣ ಬೇಕು? ಅದೆಲ್ಲ ತಿಳಿದಿದ್ದಿರಾ?”
” ಅದೇನೋ ನಮ್ಮದಾರ ದಪ್ಪ ಅಂತಾರೆ ಖಾವಂದ್, ಬಣ್ಣ ದಢೂತಿ ಅದೆಲ್ಲಾ ನಮಗೆ ಗೊತ್ತಿಲ್ಲ.
“ಈ ದಾರಕ್ಕಿಂತ ಸಣ್ಣದಾಗಿ ತೆಗೆಯುವುದಕ್ಕೆ ಆಗುವುದಿಲ್ಲವೋ?”
“ನಮ್ಮ ದಾದಾ ಇದ್ದಾರೆ ಖಾವಂದ್, ತಾವು ನೋಡಬೇಕೆಂದರೆ ತಮ್ಮ ಎದುರೇ ದಾರ ತೆಗೇತಾರೆ. ಅವರು ಎಡಗೈಯಲ್ಲಿ ಒಂದು ಉಗುರು ಬೆಳೆಸಿಕೊಂಡಿದ್ದಾರೆ. ಅದರಲ್ಲಿ ಸಣ್ಣ ತೂತು ಮಾಡಿಕೊಂಡಿ ದ್ದಾರೆ. ಅದರ ಕಣ್ಣಿಂದ ದಾರ ತೆಗೀತಾರೆ. ಆದು ಮರೀತುಪಟದ ಎಳೇಗಿಂತ ಸಣ್ಣಗೆ ಬರುತದೆ ಖಾವಂದ್ !”
” ನೋಡೋಣ. ”
ದಿವಾನರ ಮುಂದೆ ದಾದಾಪೀರ್ ಖಾನನು ಎಳೆ ತೆಗೆದನು. ಹಕೀಂ ಹೇಳಿದಂತೆಯೇ ಅದು ಬಲು ನವಿರಾಗಿತ್ತು.
“ಹೀಗೆ ಎಲ್ಲರೂ ತೆಗೆಯುವುದಕ್ಕಾಗುವುದಿಲ್ಲವೆ? ಖಾನ್ ಸಾಹೇಬರೆ ?”
“ಖಾವಂದ್ ! ಒಬ್ಬರೆ ಕೈಯಲ್ಲಾದುದು ಇನ್ನೂ ಒಬ್ಬರ ಕೈಯಲ್ಲಾಗಬೇಕು. ಆದಕ್ಕೆ ಅದೇನೆೋ ದುನಿಯಾ ನಂಗೆ ಗೊತ್ತಿಲ್ಲ. ಇವರೆಲ್ಲ ಭೇಷ್, ಭೇಷ್ ಅಂತಾರೆ. ಒಬ್ಬರೂ ಮಾಡೋದಿಲ್ಲ.”
“ನಿಜ. ಈತ ಹೇಳಿದ್ದು ನಿಜ. ಬಾಯಲ್ಲಿ ಎಲ್ಲರೂ ಆಡು ತ್ತಾರೆ. ಕೈಯಲ್ಲಿ ಯಾರೂ ಮಾಡುವುದಿಲ್ಲ. ಜರ್ಪಾನಲ್ಲಿ ಹೀಗೇ ತೆಗೆಯುತ್ತಾರೆ… ಅವರು ಅದಕ್ಕೆ ಯಂತ್ರಮಾಡಿದ್ದಾರೆ. ಅದಕ್ಕೆ ಫಿಲೇಚರ್ಸ್ ಎಂದು ಹೆಸರು. ನಾವೂ ಅದನ್ನು ತರಿಸಬೇಕು. ಈಸಲ ಎಗ್ಜಿಬಿರ್ಷಗೆ ಬನ್ನಿ. ಅಲ್ಲಿ ನೋಡುವಿರಂತೆ. ನಾಯಕರೆ, ಈಸಲ ಈತನನ್ನು ಎಗ್ಜಿಬಿಷನ್ಗೆ ಕರೆದುಕೊಂಡು ಬನ್ನಿ. ಸೆಕ್ರೆಟರಿ, ಪ್ಲೀಸ್ ನೋಟ್ ಇಟ್ ಸೆಂಡ್ ಹಿಂ ಎನ್ ಇನ್ವಿಟೀಷನ್ !”
ಹೀಗೆ ನೋಡಿದುದನ್ನೆಲ್ಲಾ ಕೂಲಂಕಷವಾಗಿ ವಿಚಾರಮಾಡುತ್ತಾ ಸಲಹೆಗಳನ್ನು ಕೊಡುತ್ತ ದಿವಾನರು ಮಧ್ಯಾಹ್ನಕ್ಕೆ ಹಿಂತಿರುಗಿದರು. ದಾರಿಯಲ್ಲಿ ತನ್ನ ತೋಟದಲ್ಲಿ ಎಳೆನೀರುಕೊಟ್ಟು ಏನಾದರೂ ಹೇಳಿ ಕೊಳ್ಳಬೇಕೆಂದಿದ್ದ ಮಾದೇಗೌಡ. ಎಳೆನೀರೂ ಕೆಡವಿಸಿ ಕೊಚ್ಚಿಸಿ ಇಟ್ಟಿದ್ದ. ಏಕೋ ದಿಗಿಲಾಯಿತು. ಮನಸ್ಸು ಅಳುಕಿ ಹಿಂತೆಗೆಯಿತು. ಅದೇ ಭಾವದಲ್ಲಿಯೇ ಎಲ್ಲರ ಜೊತೆಯಲ್ಲೂ ತಾನೂ ಸುಮ್ಮನೆ ಬಂದು ಬಿಟ್ಟ.
*****