ಕಿರುನಗೆ ಹೂನಗೆ

ಕಿರುನಗೆ ಹೂನಗೆ ಮುಗುಳುನಗೆ
ಕನ್ನೆಯರ ಕೆನ್ನೆಗುಳಿ ನಗೆ
ಪುಟ್ಟ ಮಕ್ಕಳ ಕಚಗುಳಿಯ ನಗೆ
ಸ್ವಾಗತ ನಿಮಗೆ
ನೀವೆಲ್ಲಿ ಹೋದಿರಿ ಇಷ್ಟರ ವರೆಗೆ

ಕಡೆಗಣ್ಣನಗೆ ತುಟಿಯಂಚಿನ ನಗೆ
ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ
ನೀವೆಲ್ಲಿ ಹೋದಿರಿ ಇಷ್ಟರ ವರೆಗೆ

ದುಃಖಿಸುವ ಮುಖಗಳಲಿ ಮರೆಯಾಗಿದ್ದಿರ
ದುರಿತ ಸಂಕಷ್ಟಗಳಲಿ ಜರಿದುಹೋಗಿದ್ದಿರ

ಅವಮಾನಗಳ ಕೆಳಗೆ ಕುಸಿದಿದ್ದಿರ
ಗರ್‍ವಿಷ್ಟರ ಭೀತಿಯಲಿ ಅಡಗಿಕುಳಿತಿದ್ದಿರ

ಮೂಡುವ ಬೆಳಗಿಗೆ ಜತೆಯಾಗಿದ್ದಿರ
ಬಿರಿಯುವ ಹೂಗಳಲಿ ಬೆರೆತಿದ್ದಿರ

ತಿಳಿಗೊಳದ ತೆರೆಗಳಲಿ ತೇಲುತಿದ್ದಿರ
ಕಿರುಗಾಳಿಯ ಒಳ ಸಿಕ್ಕಿ ಸುಳಿಯುತ್ತಿದ್ದಿರ

ನಮ್ಮ ಕದಗಳ ಆಗಾಗ ತಟ್ಟುತಿದ್ದಿರ
ತೆರೆಯದಿರಲು ಮರಳಿ ಹಿಂದಕೆ ಹೋಗುತಿದ್ದಿರ

ಬನ್ನಿ ನಗೆಗಳೆ ಬನ್ನಿ
ಕಿರುನಗೆ ಹೂನಗೆ ಮುಗುಳುನಗೆ ಬನ್ನಿ
ಕನ್ನೆಯರ ಕೆನ್ನೆಗುಳಿ ನಗೆ
ಪುಟ್ಟ ಮಕ್ಕಳ ಕಚಗುಳಿಯ ನಗೆ

ಎಲ್ಲ ನಗೆಗಳು ಬನ್ನಿ
ನಮ್ಮ ಕೂಟದಲಿ ಇರಿ ಬಂದು
ನಮ್ಮ ನೋಟದಲಿ ಇರಿ ಇಂದು
ತೊರೆದು ಹೋಗದಿರಿ ನಮ್ಮನೆಂದೂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿರಂಗಿ
Next post ಉಮರನ ಒಸಗೆ – ೪೫

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…