ಭವಾಗ್ನಿ

ದಿನೆ ದಿನೆ ನಿನ್ನ ಕಾಣಲೆಂಬ
ನನ್ನ ಮನವು ತವಕಿಸುತ್ತಿದೆ
ನಿನ್ನ ಪಡೆಯದೆ ಇನ್ನೇನು ಅರ್‍ಥ
ಬದುಕು ಭವಸಾಗರವಾಗಿದೆ

ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ
ನಾನೋ ಎಲ್ಲೊ ಇರುವ ದೀನ ಜೀವಿ
ನೀನು ನನ್ನ ದನಿ ಆಲಿಸದೆ ಇರಲಾರೆ
ನಿನ್ನಲುಂಟು ನನ್ನ ಮೇಲೆತ್ತುವ ಠೀವಿ

ಜ್ಞಾನ ಅಜ್ಞಾನಗಳು ಬೇಡ ನನಗೆ
ಸಿರಿ ಬಡತನವೂ ಬೇಡ ದೊರೆ
ನಿನ್ನಲಿ ನಾನೇನು ಬೇಡಿದರೂ
ಸ್ವಾರ್‍ಥವೇ ವಿನಃ ಆಗದು ಮೊರೆ

ಮನಸ್ಸಿನಾಲೋಚನೆಯ ಕಣದಲ್ಲೂ
ನಿನ್ನ ಸ್ಮರಣೆಯೊಂದೇ ಕಾಡಿರಲಿ
ನೀ ನಿರದ ಯಾವ ಭಾಗ್ಯವೂ ನನಗೆ
ತೃಣ ಸಮಾನವೇ ಆಗಿರಲಿ

ಇನ್ನೂ ಕಾಡಬೇಡ ಓ ಗೋವಿಂದ
ತಾಳಲಾರೆ ಈ ವಿರಹ ಅಗ್ನಿ
ನಿನ್ನ ಪ್ರೀತಿಯಲಿ ಕರಗದೆ ನಾ
ಮಾಣಿಕ್ಯ ವಿಠಲನಲ್ಲದ ಭವಾಗ್ನಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೫

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…