ಬರೆದವರು: Thomas Hardy / Tess of the d’Urbervilles
ಸುಮಾರು ಏಳೂವರೆಯಾಗಿರಬಹುದು. ಶಂಭುರಾಮಯ್ಯ ಬಂದು ಮಲ್ಲಣ್ಣನನ್ನು ಕೂಗಿದ: “ಏನರೀ, ಅಣ್ಣಾವರೆ, ಇನ್ನೂ ಶಿವ ಪೂಜೆ ಮುಗೀಲಿಲ್ಲವೇನು? ಎಂಟು ಗಂಟೆಗೆ ರಾಯರ ಮನೆಯಲ್ಲಿ ಇರಬೇಕು. ಮರೆತುಬಿಟ್ಟರೇನು ?”
“ನೀವು ಗುಂಡು ಹಾರುತ್ತಲೂ ಏಳೋರು? ನಾವು ಕೋಳೀ ಕೂಗೋ ವೇಳೆಗೆ ಏಳೋರು ? ಯಾರು ಮೊದಲೋ ನೀವೇ ನೋಡಿ ಕೊಳ್ಳಿ.”
“ಕೋಳೀ ಊರಲ್ಲಿ ಬಿಟ್ಟು ಬಂದಿದೀರಿ. ಗುಂಡು ಕೆರೆ ಹತ್ತಿರ ಬೆಟ್ಟದ ಕಡೆಗೆ ಹೊಡೀತಾರೆ. ಅದರಿಂದ ನಿಮಗೆ ಎಚ್ಚರವಾಯಿತೋ ಇಲ್ಲವೋ ಅಂತಿದ್ದೆ”
“ನೋಡಿ ಅಯ್ಯನವರೆ ನಾ ಹುಟ್ಟಿದಲಾಗಾಯ್ತು ಕಾಫೀ ಕುಡಿದಿದ್ದೋನೆ ಅಲ್ಲ. ಈಗ ನಿಮಗಿಂತ ಜೋರಾಗಿ ಹೋಗದೆ. ಕಾಫಿ ಇಲ್ಲದಿದ್ದರೆ ತಲೆನೋವು ಬರತದಲ್ರೀ !”
“ಹಾಂ, ಬಂದರೋ ದಾರೀಗೆ. ಆಗ ನಮ್ಮವರು. ಆ ಮಾತು ಅಂದರೆ, ಏನು ಹೇಳಲೋ ಅಂತಿದ್ದಿರಿ, ಕೇಳಿದಿರಾ ಕೆಂಪಮ್ಮ? ನಿಮ್ಮ ಯಜಮಾನರ ಮಾತಾ?”
“ಅದು ಅವರ ಸ್ವಂತಮಾತಲ್ಲ.”
” ಇನ್ಯಾರದು ? ”
“ಸೋಮಿಯವರದೇ ?”
” ನಂದೇನೆ ? ”
” ಹೌದು. ಗುರುಕಾಣಿಕೆ.”
“ಯಾಕೋ ಇಬ್ಬರೂ ಮಾತನಾಡಿಕೊಂಡ ಹಂಗದೆ ಕಣಪ್ಪ. ಇನ್ನು ನಾನು ಬದುಕೋ ಹಾಗಿಲ್ಲ.”
ಮಲ್ಲಣ್ಣನು ಒಂದು ಲೋಟಾದಲ್ಲಿ ಕಾಫಿ ತರುತ್ತಾ “ಏನು ಕಾಫಿ ಇಲ್ಲದೇನೇ ?” ಎಂದ.
ಶಂಭುರಾಮಯ್ಯನು ಕಾಫಿ ಈಸಿಕೊಂಡು ಕುಡಿಯುತ್ತಾ ಹೇಳಿದ “ಇನ್ನು ನಾವೊಂದು ಎಮ್ಮೆ ಇಡಬೇಕಪ್ಪಾ ! ಈ ಕಾಫಿ ಇಷ್ಟು ರುಚಿಯಾಗಿರಬೇಕಾದರೆ, ಬೇರೆ ದಾರೀನೇ ಇಲ್ಲ.”
“ಅಥವಾ ಎಮ್ಮೆ ಇರೋರ ಮನೆಗೆ ಹೊತ್ತಾರೆ ಬರ ಬೇಕಪ್ಪಾ !”
“ಒಬ್ಬನೇ ಆಗಿದ್ದರೆ ಹೆಂಗೇ ಮಾಡ್ತಿದ್ದೆ.”
“ಒಬ್ಬರೇ ಅಂದುಕೊಂಡು ಇಬ್ಬರೂ ಒಟ್ಟಿಗೇ ಬಂದರಾಯಿತು.”
ಒಳಗಿನಿಂದ ಇನ್ನೊಬ್ಬರು ಮಾತು ಸೇರಿಸಿದರು: “ಇಲ್ಲದಿದ್ದರೆ ನಮ್ಮನೇ ಕರೆದರೂ ಆಯಿತು.”
“ಎಮ್ಮೆ ಸಮೇತ ಬರೋದಾದರೆ ನಾವೇಕೆ ಬೇಡ ಅಂದೇವು? ನೋಡಿರಿ, ಎಂಟುಗಂಟೆ ಆಗುತಾ ಬಂತು ಬೇಗ ಹೋಗದಿದ್ದರೆ ತಿಂಡೀಗೆ ಚಕ್ಕರ್, ನೋಡಿ.”
” ನಮಗೆ ತಿಂಡಿಗೇನು ದೇವರು ಕಡಿಮೆ ಮಾಡಿಲ್ಲ. ಆದಕ್ಕೆ ಆ ಮಾತು ನಮಗೆ ಬಹಳ ಮುಖ್ಯ. ಅದು ತಾನೇ ನಮಗೆ ಬೇಕಾದ್ದು.”
“ನಿಜ. ಆದರೆ ನೋಡಿ, ಮೊನ್ನೆ ಆದ ಹಾಗೆ ಆದರೆ, ನಂಗೆ ಸೈಸೋಲ್ಲಪ್ಪ. ಆನಿಬಸೆಂಟಿರು ಎಷ್ಟು ಕೆಲಸ ಮಾಡಿದ್ದಾರೆ. ಹಿಂದೂ ಯೂನಿವರ್ಸಿಟಿ ಕಟ್ಟಿದವರು. ಅವರನ್ನು ಇವರು ಯಾರ್ರೀ ಬಯ್ಯೋಕೆ ?
“ಅಯ್ಯನೋರೆ, ಪೆಚ್ಚು ತಿಂದಿರಿ ಅವರಿಗೂ ಮಹದೇವಶಾಸ್ತ್ರಿ ಗಳ ಪಾರ್ಟಗೂ ಆಗೋದಿಲ್ಲ. ಇವರು ನೆರೆಯೋಕೆ ಮುಂಚೆ ಮದುವೆ ಯೋರು, ಅವರು ನೆರೆದಮೇಲೆ ಮದುವೆಯೋರು. ಇಬ್ಬರಿಗೂ ನಡುವೆ ಇಟ್ಟ ಬೆಂಕಿ ಆರೋಕಿಲ್ಲ. ಅದಕ್ಕಾಗಿ ಶಾಸ್ತ್ರಿಗಳು ಆನಿಬೆಸೆಂಟರ ಪಾರ್ಟಿ ಅಂತ ಅವರ್ನ ಬೈಯ್ತಾರೆ.?
“ನಿಮ್ಮ ಸಮಾಧಾನ ನಮಗಿಲ್ಲ. ವಿವೇಕಾನಂದರ್ನ ಆನಿ ಬಿಸೆಂಟರ್ನ ತಿಲಕರ್ನ, ದಯಾನಂದರ್ನ ಬಯ್ದರೆ ನನಗೆ ಸೈಸೋಲ್ಲ.?
“ಅಲ್ಲರೀ, ಹತ್ತು ಜನ ಸೇರಿದ ಕಡೆ ತಲೆಗೆ ತಟ್ಟಾಗಿ ಮಾತು ಬಂದೇ ಬರ್ತದೆ. ನಾವು ಅದಕೆಲ್ಲಾ ತಲೆ ಕೆಡಿಸಿಕೊಳ್ಳೋದೆ ?”
“ನನಗೆ ಇನ್ನೊಂದು ಯೋಚನೆ ಬರ್ತದೆ ಅಣ್ಣಾವರೆ ? ಹೆಂಗಿ ದ್ದರೂ ನಿಮ್ಮ ಬಂಗಲಿ ಖಾಲೀ ಆಗಿರ್ತದೆ. ಹಜಾರದಲ್ಲಿ ನಾವೇ ಯಾಕೆ ಒಂದು ಸಂಘ ಮಾಡಬಾರದು ? ನೀವು ನಿಮ್ಮ ಖಾವಂದ್ರಿಗೆ ಬರೀತೀರಾ?”
“ಈಗ ನಮ್ಮ ಖಾವಂದ್ರಿಗೆ ನಿಮ್ಮ ಮೇಲೆ ಬಹಳ ಮೋಹ. ಕಾಗದ ಬರೆದಾಗೆಲ್ಲಾ ನಿಮ್ಮ ಮಾತು ಇಲ್ಲದೆಇಲ್ಲ. ನೀವು ಬರೀರಿ, ಜೋತೇಲೇ ಹುಂ ಅಂತಾರೆ?
“ಆಗಲಿ. ಏಳಿಮತ್ತೆ ?”
“ಏನಂತೆ, ಗಾಡಿ ಅದೆ, ಕೋಟೆಗೆ ಹತ್ತು ನಿಮಿಷದಲ್ಲಿ ಹೋಗ ಬಹುದು.”
“ನಿಜ, ಹಾಗಂತ ಹೊತ್ತಾಗೇ ಹೊರಡಬೇಕಾ 1”
“ಸರಿ!”
ಇಬ್ಬರೂ ಹೊರಟರು.
“ನಿಮ್ಮ ಕುದುರೆ ಬಹಳ ಚೆನ್ನಾಗಿ ಹೋಗ್ತದಲ್ಲಾ !”
“ಇದರ ಮೇಲೆ ನಮ್ಮ ಮಲ್ಲಮ್ಮಣ್ಣೀಗೆ ಬಹಳೆ ಖಾಯಿಷ್ ಸೋಮಿ. ಇದು ಮೊನ್ನೆ ಅವಳೇ ತಾಯೀಗೆ ಕೊಟ್ಟದ್ದು. ಈಗಾಡೀ ಸಮೇತ.?
” ಕೊಟ್ಟಿದ್ದು ತಾಯೀಗೆ. ಉಪಯೋಗಿಸೋರು ನೀವು?
” ಲೋಕವೇ ಹಿಂಗೆ.”
“ಆಯಿತು. ಇವೊತ್ತು ಮಾತು ಯಾವ ಕಡೇಗೆ ಹೋಗ್ತದೋ?”
“ನೀವು ಭದ್ರವಾಗಿದ್ದುಬುಡಿ-ನನ್ನ ಮಾತು ಕೇಳಿ, ನಾವು ಅಲ್ಲಿ ಕಾಸುಕೊಟ್ಟು ಎಲ್ಲರ ಜುಟ್ಟು ಇಡಿಕೊಳ್ಳೋ ಹಂಗಿಲ್ಲ. ನಾವು ಹೋಗೋದು ಇನ್ನೊಬ್ಬರ ಮನೇಗೆ. ಇವೊತ್ತು ಸುಮ್ಮನಿದ್ದು ಬಿಡಿ. ನೀವು ಹೇಳೋದು ಸರಿ. ನಾವೇ ಒಂದು ಸಂಗ ಮಾಡಿಕೊಳ್ಳೋವಾ.?
“ಅದೇ ಸರಿ. ಹಾಗೇ ಮಾಡಬೇಕು.”
ಇಬ್ಬರೂ ಕೋಟೆಗೆ ಬಂದರು. ಅಲ್ಲಿ ಪುಟ್ಟರಾಜೇ ಅರಸಿನವಕ ಮಹಡಿಯ ಮೇಲೆ ಸಭೆ ಸೇರಿದೆ. ಅರಸಿನವರು ಶ್ರೀಮಂತರು. ಅವರಿಗೆ ಸುಮಾರು ಐವತ್ತಕ್ಕೆ ಮೀರಿದ ವಯಸ್ಸು. ಅವರಿಗೆ ಯೋಗ್ಯ ವೇದಾಂತ, ಸಾಹಿತ್ಯ, ಇವುಗಳ ಮೇಲೆ ಬಹಳ ಮುಮತೆ. ಅರಮನೆಯ ವಿದ್ವಾಂಸರನ್ನೆಲ್ಲಾ ಅಲ್ಲಿಗೆ ಕರೆಸಿಕೊಳ್ಳುವರು. ಹಿಂದೆ ಅಳಿಯ ಲಿಂಗ ರಾಜೇ ಅರಸಿನವರ ಮನೆಯಲ್ಲಿ ನಡೆಯುತ್ತಿದ್ದಂತೆ ಗೋಷ್ಠಿ ನಡೆಸ ಬೇಕು ಎಂದು ಅವರ ಇಷ್ಟ. ಆದರೆ, ಅದು ಆನೆ, ಇದು ಆಡು ಎನ್ನುವ ಮಟ್ಟಿಗೇ ಇತ್ತು ಎರಡನ್ನೂ ನೋಡಿದವರ ಇಷ್ಟ. ಅಂತೂ ಶಾಸ್ತ್ರಗಳ ವಿಷಯಗಳ ಜೊತೆಗೆ ಲೋಕಾಚಾರವೆಲ್ಲ ವಿಮರ್ಶೆಗೆ ಬರುವ ಪಾರ್ಲಿ ಮೆಂಟ್ ಆಗಿತ್ತು ಆ ಸಭೆ. ಆದಿನ ಅರಸರ ಸಮಕ್ಷಮದಲ್ಲಿ ಮಹ ದೇವಶಾಸ್ತ್ರಿಗಳೂ ವೆಂಕಟಕೃಷ್ಣಯ್ಯನವರೂ ವಿದ್ವಾಂಸರನ್ನು ಎದುರಿ ಸಿದರು. ಬಾಲ್ಯ ವಿವಾಹವೇ? ಋತುಮತೀ ವಿವಾಹವೇ ಎಂದು ವಾದವು ನಡೆಯಿತು- ಧರ್ಮಶಾಸ್ತ್ರಗಳನ್ನು ವಿದ್ವಾಂಸರು ಎತ್ತಿ ತೋರಿಸಿದರು. ಮಹದೇವಶಾಸ್ತ್ರಿಗಳು ಸಾಮಾನ್ಯರೆ? ಓರಿಯನ್ಟಲ್ ಲೈಬ್ರರಿಯಲ್ಲಿ ಕ್ಯೂರೇಟಿರ್ ಆಗಿದ್ದವರು. ಸ್ವತಃ ವಿದ್ವಂಸರು. ಅವರು ನಗುನಗುತ್ತಾ ಕೇಳಿದರು : ” ಧರ್ಮ ಎನ್ನುವುದು ಅಲ್ಲಿಷ್ಟು ಇಲ್ಲಿಷ್ಟು, ಆಚರಿಸುವ ವಿಷಯವೋ? ಅಥವಾ ಸಾಕಲ್ಯವಾಗಿ ಎಂದರೆ ಈ ಕೊನೆಯಿಂದ ಈ ಕೊನೆಯನರೆಗೂ ಆಚರಿಸಬೇಕಾದುದೋ ?” ಸ್ನೇಹದಿಂದ ಕೇಳಿದ ಪ್ರಶ್ನೆಗೆ ವಿದ್ವಾಂಸರೂ ಸರಸವಾಗಿಯೇ ಉತ್ತರ ಕೊಡುತ್ತ “ನಿಜ ತಾವು ಹೇಳುವುದು. ಧರ್ಮ ಎನ್ನುವುದು ಸಾಕಲ್ಯ ವಾಗಿ ಆಚರಿಸಬೇಕಾದ ವಿಚಾರ ಅನ್ನಿ” ಎಂದರು.
ಶಾಸ್ತ್ರಿಗಳು ಕೈಮುಗಿದು ಕೊಂಡು ಹೇಳಿದರು: “ತಾವೆಲ್ಲ ಮಹನೀಯರು. ಬುದ್ಧಿಯವರು ಎಷ್ಟೇ ಆಗಲಿ ರಾಜವಂಶದವರು. ನಾವೆಲ್ಲ ಲೋಕ ಕ್ಷೇಮಕ್ಕಾಗಿ ಮಾತನಾಡೋಣ. ಅಗ್ನಿ ಗಾಯತ್ರಿ, ಎರಡೂ ಮೂರು ವೇಳೆ ತಪ್ಪಿದರೆ ಹೋಯಿತು ಎಂದು ಶಾಸ್ತ್ರಗಳೇ ಹೇಳುತ್ತಿವೆ. ಎರಡನ್ನೂ ತಲೆತಲಾಂತರದಿಂದ ಬಿಟ್ಟವರ ವಿಷಯ ವನು ಹೇಳುತ್ತೀರಿ? ಅವೇ ಸನಾತನಧರ್ಮದ ಮೂಲಸ್ತಂಭಗಳು. ಅವಿಲ್ಲದ ಮೇಲೆ ನಾವು ಮಾಡುವುದೇನು? ಅದಕ್ಕಾಗಿಯೇ ದಯಾನಂದರು, ಆರ್ಯಸಮಾಜ ಮಾಡಿ ಎಲ್ಲರಿಗೂ ವೇದಾಧಿಕಾರ ಎಂದರು. ಈಗ ತಾವು ಬ್ರಾಹ್ಮಣರಿಗೆ ವಿನಾ ಇನ್ನು ಯಾರಿಗೂ ಇಲ್ಲ ಎನ್ನುತ್ತೀರಿ. ನಾಳೆ ನಾವು ಬ್ರಾಹ್ಮಣರು ಹೇಗೆ ಬೇಕಾದರೂ ಮಾಡಿಕೊಳ್ಳಲಿ. ಬ್ರಾಹ್ಮಣೇತರೆರಿಗೆಲ್ಲ ಋತುಮತಿ ವಿವಾಹವೇ ಆಗಬೇಕು ಎಂದು ಲಾ ಮಾಡಿದರೆ, ಆಗೇನು ಮಾಡುತ್ತೀರಿ. ನೀವು ಬ್ರಾಹ್ಮಣರು ಇರು ವುದು ಶೇ. ೪ರಷ್ಟು. ಉಳಿದ ೯೬ ಕ್ಕೆ ಮಾಡುವ ಲಾ ನೀವು ಅನು ಸರಿಸುವುದೇ? ನಿಮಗಾಗಿ ಮಾಡಿದ ಲಾ ಅವರು ಅನುಸರಿಸುವುದೇ ತಾವೇ ಹೇಳಿ.”
” ನೋಡಿ ಶಾಸ್ತ್ರಿಗಳೇ, ಧರ್ಮ ಸಂಖ್ಯಾಬಲದಿಂದ ಗೊತ್ತು ಮಾಡುವುದಲ್ಲ. ಬ್ರಹ್ಮ ವಿವಾಹ ಬೇಕು ಎನ್ನುವವರು “ಪ್ರಾಗೃತೋ: ಕನ್ಯಾದಾತವ್ಯಾ’ ಎಂಬ ಆರ್ಯೋಕ್ಕಿಯಂತೇ ನಡೆಯಬೇಕು. ಇದು ನಮ್ಮ ತ್ತಪ್ತಿಗಾಗಿ ನಾನು ಮಾಡಿದ್ದಲ್ಲವಲ್ಲ!
” ಸ್ವಾಮಿ, ತಾವು ಹೇಳಿದ ವಚನ ಗೌತಮಧರ್ಮ ಸೂತ್ರದ್ದು. ತಾವು ಕೋಪ ಮಾಡಿಕೊಳ್ಳಬೇಡಿ. ಹೇಳುವ ಮಂತ್ರದ ಅರ್ಥ ಪುರೋ ಹಿತರಿಗೂ ತಿಳಿಯದ ಕಾಲವಾಗಿದೆ. ಕೊಬರಿಬಿಟ್ಟು ಚಿಪ್ಪು ಹಿಡಿದ ಹಾಗೆ ಅರ್ಥ ಬಿಟ್ಟು ಶಬ್ದ ಹಿಡಿದರೆ ಫಲವೇನು ?”
“ಸ್ವಾಮಿ ನಮ್ಮ ಶಾಸ್ತ್ರ ಶ್ರದ್ಧಾವಂತರಿಗೆ ಮಾತ್ರ ಅರ್ಥವಾ ಗುವುದು. ಮಾಡಿ ನೋಡಬೇಕಾದ ವಿಚಾರ ಆಡಿ ಮುಗಿಸುವುದು ಹೇಗೆ ?”
ವೆಂಕಟಕೃಷ್ಣಯ್ಯನವರು ಶಾಸ್ತ್ರಿಗಳನ್ನು ತಡೆದು ಒಂದು ಮಾತು ಕೇಳಿದರು: “ದೇವರು, ನಾವು ಭ್ರಷ್ಟರು. ನಮ್ಮನ್ನು ಬಿಡಿ. ನಾವು ಬ್ರಾಹ್ಮವಿವಾಹದ ದಂಪತಿಗಳಲ್ಲಿ ಹುಟ್ಟಿದೆವೋ ? ಗಂಧರ್ವ ವಿವಾಹ ವಾದವರಲ್ಲೇ ಹುಟ್ಟಿದೆವೋ ? ಈಗ ತಾವು ಹೇಳಿ. ಬ್ರಾಹ್ಮ ವಿವಾಹದ ಧರ್ಮಸಂತಾನ ತಾನೇ ತಾವು. ತಮ್ಮ ಶ್ರದ್ಧೆಯ ವಿಚಾರದಲ್ಲಿ ನಮಗೂ ಸಂದೇಹವಿಲ್ಲ: ತಮಗೂ ಇಲ್ಲ. ತಾವು ಏನು ಅರ್ಥಮಾಡಿ ಕೊಂಡಿದ್ದೀರಿ. ಹೇಳಿ. “ವರ್ಣಾನಾಂ ಬ್ರಾಹ್ಮಣೋ ಗುರುಃ’ ಎನ್ನು ತ್ತೀರಿ. ಇದೋ ನಾವೂ ಹೇಳುತ್ತೇನೆ. ಅರ್ಜುನನ ಮಾತೇನು ಶಾಸ್ತ್ರಿಗಳೇ?”
“ಶಿಷ್ಯಸ್ತೇsಹಂ ಶಾಧಿವಾಂ ಪ್ರಪನಂ”
” ಇಗೋ ನಾವು ಎದ್ದು ನಿಮಗೆ ಸಾಷ್ಟಾಂಗ ಹಾಕುತ್ತೇವೆ. ತಮ್ಮ ಅಪ್ಪಣೆಯಾದರೆ ಮಡಿಯಲ್ಲಿ ದರ್ಭೆ ಕಲಶ ಹಿಡಿದುಕೊಂಡು ತಾನು ಹೇಳಿದ ಹೊತ್ತಿಗೆ ತಮ್ಮ ಮನೆಗೆ ಬರುತ್ತೇವೆ. ನಮಗೆ ಬಾಹ್ಮ ವಿವಾಹ ಏಕೆಬೇಕು ? ಗಾಂಧರ್ವ ವಿವಾಹ ಏಕೆ ಬೇಡ ? ಹೇಳಿಕೊಡು ತ್ತೀರಾ? ಈಗ ನೋಡಿ ಗಾಂಧರ್ವ ವಿವಾಹ ಒಪ್ಪಿಕೊಂಡು ಅದರಂತೆ ನಡೆಯುವ ಯೂರೋಪಿರ್ಯರು ಬೂಡ್ಸು ಕಾಲನ್ನು ನಮ್ಮ ತಲೆಯ ಮೇಲೆ ಇಟ್ಟು ತುಳಿದು ಆಳುತ್ತಿದ್ದಾರೆ. ಬ್ರಾಹ್ಮ ವಿವಾಹದ ಧರ್ಮ ಸಂತಾನಗಳು ಯೂರೋಪಿಯನ್ರಿಗೆ” ನಾವು ದಾಸರು ಅನ್ನುವುದು ತಿಳಿದೇ ಇದೇ ಸ್ವರ್ಗ, ಬ್ರಿಟಿಷರು ಧರ್ಮದೇವತೆಯ ಅಪರಾವತಾರ ಎನ್ನುತ್ತೇವೆ. ಈಗ ಹೇಳಿ, ಯಾವುದು ಸರಿ?”
ವಿದ್ವಾಂಸರು ಅಪ್ರತಿಭರಾದರು.
ಅರಸಿನವರು ನಡತವೆ ಬಾಯಿ ಹಾಕದಿದ್ದರೆ ಚಿನ್ನಿಲ್ಲ’ ಎಂದು ಮಾತನಾಡಿದರು: “ವೆಂಕಟಕೃಷ್ಣಯ್ಯನವರೆ, ನಿಮ್ಮ ಬಾಯಿಗೆ ಮಾಧವರಾಯರಂತಹ ಸಿಂಹ ಅಂಜಿಬಿಟ್ಟಿತು. ಇನ್ನು ನಮ್ಮ ವಿದ್ವಾಂ ಸರ ಮಾತೇನು ? ಹಾಗಾದರೆ ತಮ್ಮ ಮಾತೇನು?”
” ನಮ್ಮ ಮಾತು ಏನೂ ಇಲ್ಲ ಬುದ್ದಿ. ಇದು ಹೀಗೆ ಬಿಟ್ಟರೆ ಇಂಡಿಯ ಧ್ವ೦ಸವಾಗಿ ಹೋಗುತ್ತೆ. ಇದೇ ನಮ್ಮ ವಿದ್ವಾಂಸರನ್ನೆಲ್ಲಾ ‘ಆ ಕ್ರಿಶ್ಚಿಯನ್ರು ನಿಮ್ಮ ಶಾಸ್ತ್ರಗಳಿಗೆಲ್ಲ ಕಾಮನಹಬ್ಬ ಮಾಡುತ್ತಿ ದ್ದಾರೆ. ಅವರನ್ನು ಎದುರಿಸಿ ಎರಡು ಮಾತನಾಡುವವರಿಲ್ಲ ಬನ್ನಿ ರಯ್ಯ’ ಎಂದರೆ ಒಬ್ಬರೂ ಮುಂದೆ ಬರುವುದಿಲ್ಲ. ಅವರನ್ನು ಎದುರಿಸಿ ನಾವು ಸಾಧ್ವಿಯಲ್ಲಿ ಬರದದ್ದೇ ಬರೆದದ್ದು. ಆ ಕ್ರಿಶ್ಚಿಯನ್ರು ನೋಡಿ, ಅವರ ಶ್ರದ್ಧೆ ನೋಡಿ, ನಮ್ಮವರ ಬಾಯಿ ಬುಡುಕುತನ ನೋಡಿ. ಒಬ್ಬ ಕ್ರಿಶ್ಚಿಯನ್ ತಾನು ಕ್ರಿಸ್ತನ ಸಂದೇಶವನ್ನು ತಂದು ಲೋಕೋದ್ಧಾರ ಮಾಡುವ ದೇನದೊತನೆಂದುಕೊಳ್ಳುತ್ತಾನೆ. ಮಹಮ್ಮದೀಯ ಖೊರಾನ್ ಓದಿರಲಿ, ಬಿಡಲಿ ಕಾಫರನನ್ನು ತುಳಿದರೆ ಜಿನ್ನತ್ ಬರುತ್ತೆ ಎಂದುಕೊಳ್ಳುತ್ತಾನೆ. ಒಬ್ಬರ ರಾಜ್ಯವಾಯಿತು : ಇನ್ನೊಬ್ಬರ ರಾಜ್ಯ ಒಡೆಯುತ್ತಿದೆ. ನಮ್ಮ ಸಂಸ್ಕೃತದ ಉತ್ತಮ ಗ್ರಂಥಗಳಲ್ಲಿ. ಅಷ್ಟೇನು, ವೇದಗಳಲ್ಲಿ ಇನ್ನೊಬ್ಬರಿಗೆ ಅಧಿಕಾರ ಇಲ್ಲ ಎಂದೆವು. ಗೋಮಾಂಸ ಭಕ್ಷಕನಾಗಿ ಮದ್ಯಪಾನ ಧುರಂಥರನಾದ ಮಾಕ್ಸ್ ಮುಲ್ಲರ್, ತಪಸ್ಸು ಮಾಡಿ, ನಮ್ಮ ನೂರು ಜನರ ಕೈಲಿ ಆಗದ ಕೆಲಸವನ್ನು ಅವನು ಸಾಧಿಸಿ ವೇದಗಳನ್ನು ಪ್ರಿಂಟ್ ಮಾಡಿಸಿದ. ನಮ್ಮವರೆಲ್ಲರೂ ಅವನು ಮೋಕ್ಷ ಮೂಲರ ಭಟ್ಟಾಚಾರ್ಯ ಎಂದು ತಮ್ಮ ಪಾಂಡಿತ್ಯ ಮರೆದರು. ಅರಸಿನವರೇ, ಯಾವ ದೇಶದಲ್ಲಿ ವಿದ್ದಾಂಸರು ಆತ್ಮಗೌರವ, ಆತ್ಮ ಶ್ರದ್ಧೆಗಳನ್ನು ಬಿಟ್ಟು ಗ್ರಾಮೊಫೋನ್ ಆಗುತ್ತಾರೆಯೋ ಅಲ್ಲಿ ಶಾರದೆಗೆ ನಡೆಯುವುದು ಪೂಜೆಯಲ್ಲ: ಅಪಮಾನ. ಅದು ಅಭಿವೃದ್ಧಿಯ ಗುರು ತಲ್ಲ: ಸಮಾಧಿಗೆ ಹೋಗುತ್ತಿರುವ ನಡೆಗೆ. ನಮ್ಮವರಿಗೆ ಇದು ಎಂದಿಗೆ ಅರ್ಥವಾಗುವುದೋ ಅವೊತ್ತು ಮುಕ್ತಿ. ಬಿಡಿ.”
ಅರಸಿನವರಿಗೆ ವೆಂಕಟಕೃಷ್ಣಯ್ಯನವರ ಉತ್ಸಾಹ ನೋಡಿ, ಅಭಿಮಾನನೋಡಿ, ಅವರು ವರ್ಣಿಸಿದ ಪತನದ ಕಡೆ ನೋಡಿ, ಮನಸ್ಸು ಭತ್ತ ಮೊಸರು ಕಲಿಸಿದಂತಾಯಿತು. ವಿದ್ವಾಂಸರು ಚಿತ್ರಾ, ರ್ಕನಂತಾಗಿದ್ದರು. ಶಂಭುರಾಮಯ್ಯ ಮಲ್ಲಣ್ಣ ಇಬ್ಬರೂ ಅದನ್ನು ಕೇಳಿ ಪರವಶರಾಗಿ ಹೋಗಿದ್ದರು.
” ಇದಕ್ಕೇನು ಔಷಧಿ ಯಜಮಾನರೇ?”
“ನೋಡಿ ದೇವರು, ರಾಮಕೃಷ್ಣ ಪರಮುಹಂಸರು ಹುಟ್ಟಿದರು. ಆ ಮನುಷ್ಯ ನಿರಕ್ಷರಕುಕ್ಷಿ ‘ಅ’ ಎಡಗಡೆಯಿಂದ ಬರೆಯಬೇಕೋ ಬಲಗಡೆಯಿಂದ ಬರೆಯಬೇಕೋ ತಿಳಿಯದವನು. ಆದರೆ ಅದೇನೋ ಕಾಳೀಮಾಯಿಯೆಂದರೆ ಸಾಕು ಮೈಮರೆತು ಹೋಗುತ್ತಿತ್ತು. ಆ ಪುಣ್ಯಾತ್ಮ ಏನೋ ತಪಸ್ಸು, ಏನೋನಿಷ್ಠೆ, ಏನೋ ಮಣ್ಣುಮಾಡಿ ಸತ್ತು ಸುಣ್ಣವಾಗಿ ನರೇಂದ್ರನಮೇಲೆ ಪ್ರಭಾವ ಬೀರಿದ. ಕಲಕತ್ತಾ ಯೂನಿವರ್ಸಿಟಿಯಲ್ಲಿ ಮೊದಲನೆಯನನಾಗಿ ಬಂದ ತೇಜಸ್ವಿ ಬಾಲಕ, ಮಹರ್ಷಿ ದೇವಂದ್ರನಾಥ ಟಾಗೋರರವರನ್ನು ದೇವರನ್ನು ಕಂಡಿದ್ದೀಯಾ ಎಂದು ಕೇಳಿದ ಧೀರ ತರುಣ, ಪರಮಹಂಸರ ಮಾತಿಗೆ ಮುಗ್ಗುರಿಸಿದ. ಅವರ ಶಿಷ್ಯನಾದ. ದೇಶದೇಶಾಂತರಗಳಲ್ಲಿ ಅವರ ಕೀರ್ತಿಯನ್ನಲ್ಲ: ನಮ್ಮ ವೇದಾಂತದ ಪ್ರತಿಷ್ಠೆ ಗೌರವಗಳನ್ನು ಕಾಪಾ ಡಿದ. ಇದೆಲ್ಲ ಗಂಗಾತೀರದ ಕೊನೆಯಲ್ಲಿ. ಇತ್ತ ಗಂಗಾ ಸಿಂಧೂ ಗಳ ನಡುವೆ ಇನ್ನೊಬ್ಬ ಪುಣ್ಯಾತ್ಮ ಹುಟ್ಟಿದ. ಅವನು ಹೇಳುವುದು ನಿಜವೋ ಸುಳ್ಳೋ ಅಂತೂ ಈ ಜಗತ್ತಿಗೆ ಸವಾಲ್ ಹಾಕಿದ: ವೇದ ಗಳಲ್ಲಿ ಇಲ್ಲದ್ದು ಇನ್ನೆಲ್ಲೂಇಲ್ಲ ಎಂದ. ಖುರಾನ್ ಬೈಬಲ್ಗಳನ್ನು ವಿಮರ್ಶೆಮಾಡಿ ಪೂರ್ವಾಪರ ವಿರೋಧಗಳನ್ನು ತೋರಿಸಿ ಶುದ್ಧ ಲಘು ಗ್ರಂಥಗಳು ಎಂದುಬಿಟ್ಟ. ಆ ಪುಣ್ಯಾತ್ಮ ಆ ಮಹಾಪುರುಷ ಆ ದಯಾನಂದ, ಖುರಾನ್ ಹುಟ್ಟಿದಲಾಗಾಯಿತು ನಡೆಯದಿದ್ದ ಭಾರೀ ಕೆಲಸಮಾಡಿಬಿಟ್ಟ. ಆತನಹಾಗೆ ಎಲ್ಲವನ್ನೂ ತರ್ಕದ ಕೊಡಲಿ ಪೆಟ್ಟು ಹಾಕಿ ಸೀಳಿ ಎಸೆಯುವ ಕೆಲಸವೂ ಬೇಕು. ವಿವೇಕಾನಂದನಹಾಗೆ ನಮ್ಮ ಶಾಸ್ತ್ರ ಸಿದ್ಧಾಂತಗಳನ್ನು ಬುಡದಿಂದ ನೆತ್ತಿಯವರೆಗೆ ಸರಿ ಎನ್ನಿ ಸುವ ಶ್ರದ್ಧಾಮಾರ್ಗವಾದರೂ ಬೇಕು. ಎರಡೂ ಇಲ್ಲದೆ, ತೆಲುಗರು ಹೇಳುವ ಹಾಗೆ ‘ಪೆಟ್ಟಾ ಕಾದು ಪೋತೂಕಾದು’ ಅನ್ನುವ ಶಾಲು ಜೋಡಿ ವಿದ್ವಾಂಸರಿಂದ ನಮಗೆ ಆಗಬೇಕಾದುದೇನು ? ಆಗುವುದೇನು? ಇಲ್ಲ ಅನ್ನದೆ ಗಣೇಶನ ಹಬ್ಬದಲ್ಲಿ ಇವರು ವಾಕ್ಯಾರ್ಥ ಮಾಡಿದರೆ ಕಿವಿಯಾರೆ ಕೇಳಬಹುದು-ಸಂಸ್ಕೃತದಲ್ಲಿ ಅವರು ಹೇಳುವುದು ನಮಗೆ ಅರ್ಥವಾಗುವು ದಿಲ್ಲ: ನಮ ಅಜ್ಞಾನ ಬಿಟ್ಟು ಕೊಡಲಾರದೆ, ನಾವು ಆಹಾ ಆಹಾ ಎನ್ನುವುದು. ಇದೆಲ್ಲ, ನಮ್ಮ ಗೋಕುಲಾಷ್ಟಮಿಯ ದನದ ಮೆರವಣಿಗೆ ಹಾಗೆ, ಅದು ಉತ್ತಮೋತ್ತಮ ಗೋಧನದ ಪ್ರದರ್ಶನ ಅನ್ನುವುದನ್ನು ಮರೆತು, ಕಾಮುಕರ ಸಂತೆ ಮಾಡಿದ್ದೇವಲ್ಲ ಹಾಗೆ. ಹೀಗಾದರೆ ಉಳಿ ಯುವುದು ಹೇಗೆ?”
ನಡುವೆಯೇೆ ಒಬ್ಬರು ಬಾಯಿಹಾಕಿದರು: “ಅಲ್ಲಾ ಸ್ವಾಮಿ, ವಿದ್ವಾಂಸರಿಗೆ ಈಗ ಗೌರವ ಎಲ್ಲಿದೆ? ಅವರ ಮಾತು ಕೇಳುವವರು ಯಾರು?”
ವೆಂಕಟಕೃಷ್ಣಯ್ಯನವರು ಅಂಗಾರವಾಗಿ ಹೋದರು : “ತೆಂಗಿನ ಮರ ಹುಟ್ಟುವಾಗಲೇ ದಶಿ ಬಂದಹಾಗೆ ಬರುತ್ತದೆ. ಬಳ್ಳಿ ಹುಟ್ಟುವಾಗಲೇ ನೆಲದ ಮೇಲೆ ಬಿದ್ದಿರುತ್ತದೆ. ನಿಮಗೆ ಗೌರವ ಕೊಡ ಬೇಕೋ? ನೀವು ತಲೇಮೇಲೆ ಹೊಡೆದು ತಕೋಬೇಕೋ? ಆನೆ ಬೀದೀಲಿ ಹೋಗುವಾಗ ನೀವಾಗಿ ದಾರಿಬಿಟ್ಟು ಅತ್ತಕಡೆ ಸರಿಯೋ ಹಾಗೆ ಆಗಬೇಕು. ಆಗತ್ತೆ ಆಗತ್ತೆ! ನಾವೆಲ್ಲ ಅಳುತಿರುವ ಅಳು ವ್ಯರ್ಥವಾಗುವುದಿಲ್ಲ. ಒಬ್ಬ ವಿವೇಕಾನಂದ ಬಂದು ನಮ್ಮ ವೇದಾಂತದ ಗೌರವ ಪ್ರತಿಷ್ಠೆ ಕಾಪಾಡಿದ ಹಾಗೆ, ಮತ್ತೊಬ್ಬ ಮಹಾತ್ಮ ಬರುತ್ತಾನೆ, ಭಾರತಲಕ್ಷ್ಮಿಯ ಹೊಟ್ಟೆ ಬಂಜೆಯಾಗಿಲ್ಲ.”
ಅವರ ಗದರುವಿಕೆಯನ್ನು ಆರ್ಭಟವನ್ನು ಕೇಳಿ ಎಲ್ಲರೂ ಹೆದರಿ ಬಿಟ್ಟಿದ್ದರು. ಆವೊತ್ತು ಮಲ್ಲಣ್ಣನಿಗೆ ಇವರ ಹಿಂದೆ ತಿರುಗಿಕೊಂಡಿದ್ದರೆ ಅನ್ನಿಸಿತು. ಶಂಭುರಾಮಯ್ಯನು “ಇವರು ಈ ಕೊಂಪೆ ಹಳ್ಳೀಗೆ ಹಳ್ಳಿಯಲ್ಲ: ದಿಳ್ಳೀಗೆ ದಿಳ್ಳಿಯಲ್ಲ. ಈ ದೊಡ್ಡಹಳ್ಳಿಯಲ್ಲಿ ಒದ್ದಾಡೋ ಬದಲು ಮದರಾಸು ಬೊಂಬಾಯಿಗಳಲ್ಲಿ ಇದ್ದಿದ್ದರೆ.” ಎಂದು ನೊಂದು ಕೊಂಡನು.
ಸಭೆಗೆ ಸಭೆಯೇ ಕೊಂಚ ಹೊತ್ತು ಮೌನವಾಗಿತ್ತು. ಎಲ್ಲರೂ ಭರತಖಂಡದ ದುರದೃಷ್ಟದ ಭಾರದಿಂದ ನೊಂದು ಕಂದಿದವರಂತೆ, ಮೂಕರಾಗಿ ಕೂತುಕೊಂಡಿದ್ದರು. ಮಹದೇವ ಶಾಸ್ತ್ರಿಗಳು ಪದ್ಮಾಸನ ದಲ್ಲಿ ತೊಡೆಯಮೇಲೆ ಊರಿದ್ದ ಕೈಯಲ್ಲಿ ತಲೆಯನ್ನು ಇಟ್ಟುಕೊಂಡು ಗಂಭೀರವಾಗಿ ಕುಳಿತಿದ್ದರು.
ವೆಂಕಟಕೃಷ್ಣಯ್ಯನವರು ಗೋಡೆಯನ್ನು ಒರಗಿಕೊಂಡಿದ್ದರು. ಒಂದು ಮಂಡಿ ನಿಂತಿತ್ತು. ಆದರ ಮೇಲೆ ಕೈ ಚಾಚಿಕೊಂಡು ಅವರ ಹೃದಯದಲ್ಲಿದ್ದ ಸಂಕಟದ ಮೂಟೆಯನ್ನು ಹೊರಸಾಗಿಸುವ ಭಾಟಾ ಮಾರ್ಗದಂತೆ ನಿಂತಿದೆ. ಕಣ್ಣು ಮುಚ್ಚಿದ್ದರೂ ನೀರು ತೊಟ್ಟು ತೊಟ್ಟಾಗಿ, ಮಳೆಯಲ್ಲಿ ಇಳಿಯುವ ಸೂರು ನೀರಿನಂತೆ, ಇಳಿಯು ತ್ತಿದೆ.
ಅದನ್ನು ನೋಡಿ ಎಲ್ಲರೂ ಪೆಚ್ಚಾಗಿದ್ದಾರೆ. ಒಬ್ಬರೊಬ್ಬರೂ ಅದನ್ನು ನೋಡುತ್ತಿದ್ದಾರೆ. ಒಬ್ಬರ ಮೊಕ ಒಬ್ಬರು ನೋಡುತ್ತಿ ದ್ದಾರೆ. ಅಷ್ಟರಲ್ಲಿ ಯಾರೋ ಸರಸರ ಅಂತ ಹತ್ತಿ ಬಂದರು-ಮಹಡಿಯ ಮೆಟ್ಟಲಿನ ಮೇಲೆ ಆದ ಸದ್ದು ನೋಡಿ ಎಲ್ಲರ ದೃಷ್ಟಿಯೂ ಅತ್ತ ತಿರುಗಿತು.
*****