ಪಾಂಡವರು ಲೈದೇ ಜನಗೋಳೋ
ಕೌರವರು ನೂರೊಂದು ಜನಗೋಳೋ || ೧ ||
ವಟ್ಟು ಜಾನ ಲಣ್ಣಾಲತಮದೀರೂ
ವಂದಲ್ಲೇ ವಂದೂ ಹೊಸಾಲದಿನದಲ್ಲೀ || ೨ ||
ಯೇನಂದೀ ಮಾತೇಲಾಡಿದಾರೋ
ವಂದಾಳೇ ವಂದೂ ದಿನದಲ್ಲೀ || ೩ ||
ಹಾರೆ ವಂದು ಕೋಲಾನೆ ಕಡಿಬೇಕೋ
ಆಡೂವಂದು ಕನ್ನಾಕೆ ತಂದೀರೋ || ೪ ||
ಆಸಾರೀ ಚೆನ್ನಾನ ಕರೆದಾರೋ
ಹನ್ನೆರಡ ಗಂಡ್ಯಾನೆ ಗೆಸುವಾರೋ || ೫ ||
ಹನ್ನೆರಡ ಸಬ್ಬೆನೇ ನಯುದಾರೋ
ಹನ್ನೆರಡ ಕುಂಚಾನೆ ಕಡಿದಾರೋ || ೬ ||
ಹನ್ನೆರಡ ಜನವೇ ನಿಂತಾರೋ
ಗೋಕಾಲೇಳು ಮಾಬುಲೊಡೆಯನ ಮನೆಯಲ್ಲಿ || ೭ ||
ಹನ್ನೆರಡ ಜನವೇ ನಿಂತಾರೂ
ಕಮಲಸೂರ ಮೊದಲೇ ಹೊಡೆದಾನೂ || ೮ ||
ವಾರಂದ ಬಿಮಟೀಕೆ ಹೊಡೆದಾನೂ
ಅಕ್ಲನೋ ಹೊಯ್ಲಾನೆ || ೯ ||
ವಂದಂಬು ಕೊಣತಾನೇ ಕುಣದಾರೋ
ಯರಡಂಬು ಕೊಣತಾನೇ ಕುಣದಾರೋ || ೧೦ ||
ಮೂರಂಬು ಕೊಣತಾನೇ ಕುಣದಾರೋ
ಆಕಾಸ ಬೂಮಂಡಲ ಹೋಡಿಯೆದ್ದೂ || ೧೧ ||
ವಂದು ಮೊಣಕಾಟ ಬೂಮೀನೆ ಕುಸಿದಾವೂ
ಹಂದಿ ಮುರಗ ಬಿಟ್ಟಾಕ ಸೇರಹೊದೋ || ೧೨ ||
ಹಕ್ಕಿಪಕ್ಸಿ ಆಕಾಸಕೆ ಸೇರಾರೇ
ಗೋವು ಗೆಂಟಿ ಹುಲುನೀರಾನೆ ಬಿಡುವಾರೋ || ೧೩ ||
ಈವ ಸುಗ್ಗೀ ನಮಗೇ ತೆರವಲಾ
ಹಾಲಕ್ಕಿ ಗೌಡರಿಗೆ ಕೊಡಬೇಕೂ || ೧೪ ||
*****
ಹೇಳಿದವರು: ಯಂಕಟ ರಾಮಕೃಷ್ಣ ಗೌಡ, ಕಲ್ಕೋಡು, ಹೆಗಡೆ ಊರು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.