ಗಗನದಾ ಅಂಗಳದಲಿ ನೀಲಿ ಬಣ್ಣ
ನಿನ್ನ ಕಂಗಳ ಪದರಿನಲಿ ನೀಲಿ ಬಣ್ಣ
ಸಾಗರದ ಜಲರಾಶಿಯ ಮೇಲೆ ನೀಲಿ ಬಣ್ಣ
ನಿನ್ನ ಅಂತಃಕರಣದಲ್ಲಿ ಪ್ರೀತಿ ಬಣ್ಣ
ಬೆಳಗಿನ ರವಿಯಲಿ ಹೊಂಬಣ್ಣ ರಾಶಿ
ರಾತ್ರಿಯ ಬೆಳದಿಂಗಳಿನಲಿ ಬೆಳ್ಳಿ ಬಣ್ಣದರಾಶಿ
ಹೂವಿನ ಮೈ ಮೇಲೆ ಚಿತ್ತಾರ ಬಣ್ಣರಾಶಿ
ನಿನ್ನ ಸಾಮಿಪ್ಯದ ಹರವಿನಲಿ ಪುಣ್ಯ ಕಾಶಿ
ಬೀಸುವ ಗಿಡಮರಗಳ ಗಾಳಿ ತಂಪು ತಂಪು
ಹಾಡುವ ಹಕ್ಕಿಗಳ ರಾಗ ಇಂಪು ಇಂಪು
ಪುಷ್ಪಗಳ ಹರಡುವ ಸೌಗಂಧ ಕಂಪು ಕಂಪು
ನಿನ್ನ ಮುರಲಿಯ ಗಾನ ತನಿ ತನಿ ಗಂಪು
ಜಗವೆಲ್ಲ ತುಂಬಿಸಿದೆ ನಿನ್ನ ಲೀಲೆ ಮಾಯೆ
ಕಣಕಣದಲ್ಲೂ ಚಿತ್ರಿಸಿವೆ ನಿನ್ನ ಛಾಯೆ
ಸರ್‍ವರ ಎದೆಯ ಗೂಡಿನಲಿ ನಿನ್ನ ಪರಿಛಾಯೆ
ಮಾಣಿಕ್ಯ ವಿಠಲನ ಸಂಜೀವಿನಿ ತಾಯೆ
*****