ಬಾಳುತ್ತಿರುವೆ ನಾನಿಂದು ಇಂದ್ರಿಯ ಜತೆ
ಬಾಳಬಾರದೇಕೆ ಆ ಜೊತೆಗೆ ಸಂಯಮದಿ
ಬಾಳುತ್ತಿರುವ ನಾನಿಂದು ನನ್ನವರ ಜೊತೆ
ಬಾಳಬಾರದೇಕೆ ನಾನು ದೇವನ ಸಮಯದಿ
ಬಾಳುತ್ತಿರುವೆ ನಾನಿಂದು ಮೃತ್ಯು ಲೋಕದಲಿ
ಬಾಳಬಾರದೇಕೆ ನಾಮದೇವನ ಅಮೃತದಿ
ಬಾಳುತ್ತಿರುವೆ ನಾನಿಂದು ವ್ಯವಹಾರಿಗಳೊಂದಿಗೆ
ಬಾಳಬಾರದೇಕೆ ನಾನು ನನ್ನದೆ ಮತದಿ
ಬಾಳುತ್ತಿರುವೆ ನಾನಿಂದು ಹೊಲಸಾದ ಪರಿಸರದಿ
ಬಾಳಬಾರದೇಕೆ ನಾನು ಸುಪರಿಸರ ನಿರ್‍ಮಿಸಿ
ಬಾಳುತ್ತಿರುವೆ ನಾನಿಂದು ಸ್ವಾರ್‍ಥ ಜನಮಧ್ಯ
ಬಾಳಬಾರದೇಕೆ ನಾನು ನಿಸ್ವಾರ್‍ಥಕ್ಕೆ ಶ್ರಮಿಸಿ
ಬಾಳುತ್ತಿರುವೆ ನಾನಿಂದು ಒತ್ತಡ ಮಧ್ಯದಿ
ಬಾಳಬಾರದೇಕೆ ನಾನು ಶಾಂತ ಭಾವದಿ
ಬಾಳುತ್ತಿರುವೆ ನಾನಿಂದು ಜೀವನ ಹೋರಾಟದಿ
ಮಾಣಿಕ್ಯ ವಿಠಲನಾಗಿ ನಿರಭಾವದಿ
*****