
ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು ಎಲ್ಲಿದೆಯೆ ನಿನ್ನದೇ ನೆರಳು! ಹೊಲ...
ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು? ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು? ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು? ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು? ಸಣ್ಣ ಗಿಡದಲು ಬಣ್ಣದ ಹೂಗಳು, ಹಸಿರೆಗೆ...
ಅಂತರಂಗದ ಭಾವ ಮಸಗಿರಲಿ ಅಡಗಿರಲಿ ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ! ನಾಟಕದ ರಂಗವಿದು: ಪಾತ್ರಗಳ ವಹಿಸುತಿರು ಶಾಂತಿಯಿಂ ನೀನೀಗ ಮೌನವನು ಅನುಸರಿಸು ಹೆದರದಿರು ಕುದಿಯದಿರು ಹೇಡಿ ನೀನಾಗದಿರು ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ ಸಿರಬ...
ಕವಿತೆಯೆಂದರೆ… ಪದ, ಹದ, ಮುದ, ಮಾತು ಮಾತಿಗೂ ಮಿಗಿಲು ಮುಗಿಲು. ನಿಗೂಢ ಬಯಲು ಬಟ್ಟ ಬಯಲು ಹೊಳೆ ಹೊಳೆವ ಶಿವನ ಅಲುಗು. ಕವಿತೆಯೆಂದರೆ… ಕಂಬಳದ ಕಸರತ್ತು ಅಮ್ಮನ ಕೈ ತುತ್ತು ಮಗುವಿನ ಮುತ್ತು ಮತ್ತು, ಗಮ್ಮತ್ತು ಶಬ್ದಗಳ ಕರಾಮತ್ತು ಉಸ...
ಏನೇ ನೋವಿರಲಿ- ಯಾವುದೆ ಭಾಧೆಯ ಕಾವಿರಲಿ, ನಮ್ಮ ಮನೆಯೊಂದೇ – ಇದರಲಿ ಪ್ರೀತಿ ಆರದಿರಲಿ. ಸ್ನೇಹ ಪ್ರೀತಿ ಎಂತೋ-ವಿರಸವು ಕೂಡ ಸಹಜ ಅಂತೆ, ಚಿಂತೆ ಇಲ್ಲ ಇರಲಿ-ಎಲ್ಲೂ ಗೋಡೆ ಬಿರಿಯದಂತೆ ಬೇಸಿಗೆ ಉರಿಬೇಗೆ-ಜಡಿಮಳೆ ಸಿಡಿಲು ರೇಗಿ ಕೂಗೆ ಕದವು ಅ...
ಬರವಣಿಗೆಯ ಮೊದಲ ಅಕ್ಷರ ಗುರುವಿಲ್ಲದೇ ಕಲಿತ ಮಂತ್ರ ತಿದ್ದುವ ಉರು ಹೊಡೆಯುವ ಮರೆಯುವ ಮಾತೇ ಇಲ್ಲ ಸೊನ್ನೆ ಒಂದು ಬಿಡಿ ಹತ್ತು ಜೊತೆ ನೂರು ಮಾತು ಸೊನ್ನೆ ಇರುವಷ್ಟು ಮುಂದೆ ಹೆಚ್ಚು ತಾಕತ್ತು ಹಿಂದೆ ಭೂಮಿ ಚುಕ್ಕಿ ಸೂರ್ಯ ಸೊನ್ನೆಯ ಘನವೀರ್ಯ ಸೊನ್ನ...
ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು ಹೊರುವುದೇ? ಗಿರಿಯು ನಿಲುವುದೆ, ಹೊನಲು ಹರಿವ...
ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ...
ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ… ಹೀನ ಜಾತಿಗಳ ಪೊರೆದ ದೊರೆ ನೀ…! * ಕಲ್ಯಾಣದ ಬೆಂಕಿ ನೀ ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ ‘ಹೌದು! ಮಾದಿಗರ ಮನೆ ಮಗ ...













