ಕುಲಗೆಟ್ಟ ಹೆಣ್ಣು

ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ
ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ

ಪತಿಹೀನೆಯಾದವಳು ಗತಿಹೀನೆಯಾದವಳು
ಸುತರಿಲ್ಲದೇ ಮುಕ್ತಿ ಹೀನೆಯಾದವಳು

ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು
ಹಿತವಿಲ್ಲದಾ ಜನಕೆ ಮುಖವ ತೋರುವಳು

ಸಮಾಜದೊಳಗೆಲ್ಲ ಏನೇನೊ ಸುದ್ದಿಗಳು
ಅಮಮ ನೆನೆದರೆ ಎನ್ನ ತನುವೆ ನಡುಗುವುದು

ಸಮರಿಲ್ಲ ತನಗೆಂದು ಮೌನವನು ಧರಿಸಿಹಳು
ವಿಮಲ ಹೃದಯರಿಗೇಕೆ ಮಲಿನ ವಿಷಯಗಳು

ನರಕದೊಳು ಬೀಳುವಳೊ ನರಿ ನಾಯಿಯಾಗುವಳೊ
ಹರಿಯ ಸೇವೆಗೆ ಪಾಪಿ ಸಲ್ಲದಾಗಿಹಳು

ಮರುಕವೇತಕೆ ಇವಳ ಸ್ಮರಣೆಯೇತಕೆ ಸ್ವಾಮಿ
ಪರಿಹರಿಸು ದೂಷಣೆಯ ದೋಷ ಜನಕಜೆಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣ್ಣ ಬಸವಣ್ಣನಿಗೆ ಪ್ರಶ್ನೆ…
Next post ಸೋಂಪುಡಿ ಗಾಡಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…