ಒಂಟಿಯಾಗಿಯೆ ನೀನು ದಿನ ದಿನ ಒಂದೆ ದಿಕ್ಕಿಗೆ ಮೂಡುವೆ ಒಂದೆ ದಿಕ್ಕಿಗೆ ಮುಳುಗಿ ಬಾನವ ಕೆಂಪ ಕೆಂಪಗೆ ಮಾಡುವೆ ಒಮ್ಮೆಯಾದರು ನಮ್ಮ ಹಿತ್ತಲ ತುದಿಗೆ ಸೂರ್‍ಯನೆ ಮೂಡಿ ಬಾ ಒಮ್ಮೆಯಾದರು ನಿನ್ನ ಬಳಗದ ಚಂದ್ರ ಚುಕ್ಕೆಯ ಕೂಡಿ ಬಾ ಒಮ್ಮೆಯಾದರು ನಮ್ಮ ತೋಟ...

೧ ಪೃಥ್ವಿಯ ಒಡಲೊಳಗಿರುತಿಹುದೇನು? ತಳಮಳ ಕಾಯ್ದಿಹ ಲಾವಾರಸವು! ಭೂಮಿಯು ಗದಗದ ನಡುಗುತಿದೆ! ಸಾಗರ ಕೊನೆ ಮೊದಲಾಗುತಿದೆ! ಗಿಡವದು ಬುಡಮೇಲಾಗುತಿದೆ! ಪಶುಗಳ ಪ್ರಾಣವು ಪೋಗುತಿದೆ! ಮಾನವಕೋಟಿಯು ಮುಳುಗುತಿದೆ! ಕಟ್ಟಡ ಕಟ್ಟಡ ಉರುಳುತಿದೆ! ಪಟ್ಟಣ ಪಟ್ಟ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದ...

ಪರಿವರ್ಧಿನಿ ೧ ಎ೦ದಾಗುವುದೋ ಧರ್ಮಗ್ಲಾನಿಯು, ಮುಂದಾಗುವುದೆಂದೋ ದುರ್ನೀತಿಯು, ಅಂದೇ ತಪ್ಪದೆ ತಾನವತಾರವ- ನೆಸಗುವನಿವನಾರೇ? ಸಂದಾ ದುಷ್ಟರ ಭಾರವ ಸಹಿಸದೆ, ಬಂದಡಿವಿಡಿ ದಿಹ ಭೂವನಿತೆಯ ಬಗೆ- ದಂದುಗವಟ್ಟಲು ಮಾನಿಸವುಟ್ಟೊಳು ಪುಟ್ಟಿದನಿವನಾರೇ? ೨ ಶ...

ದೂರದಲಿ ತಾಣದಲಿ ಪಿರಿದೊಂದು ವೃಕ್ಷದಲಿ ಏರಿತ್ತು ಖಗವೊಂದು- ಚಲುವು. ಇನಿದುಸರ ಸವಿಬೆರಸಿ ತನುಅನುವ ಅದರಿರಿಸಿ ಕಾನನದಿ ಹಾಡಿತ್ತು- ಹಿರಿಮೆ. ರಾಗದಲಿ ಮೇಳದಲಿ ಆಗಸದ ನೇಸರದಿ ಸಾಗಿತ್ತು ಪ್ರವಹದಲಿ- ನಡೆದು. ಗಮ್ಯದಲಿ ನೋಡಿದೆನು ಒಮ್ಮೆಯಲೆ ಬೆರೆತು...

ಪ್ರೀತಿಯ ಕಿಟಿ, ನಾವಂದುಕೊಂಡಂತೆ ಡಸೆಲ್ ತುಂಬಾ ಒಳ್ಳೆಯ ಮನುಷ್ಯ. ನನ್ನ ಸಣ್ಣ ಕೋಣೆಯನ್ನು ಶೇರ್ ಮಾಡಲು ಅವರಿಗೆ ತೊಂದರೆ ಇರಲಿಲ್ಲ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ವಸ್ತುಗಳನ್ನು ಅಪರಿಚಿತನೊಡನೆ ಶೇರ್ ಮಾಡುವುದು ನನಗೆ ಇಷ್ಟವಿರಲಿಲ್...

ಇಡಿಕಮ್ಮೆಂಬೂರಿಗೆ ಹೆಸರ್ಹ್ಯಾಂಗ ಬಂತು? ಚೌಡಿಯ ಲಿಪಿಗಲ್ಲ ಸೇಳಾ ಕೋಲ. ಮಲ್ಲಾಡದಡವಿಯ ಮಧ್ಯದಿ ನಿಂತು ಘಟ್ಟದ ಕೆಳಗೂ ಮೆರೆದೂರ ಕೋಲ. ‘ಹೇಳ್‌ ತಮ್ಮ! ಏ ಪೀರ! ಎಲ್ಲೈತಿ ನಿನ ತಟ್ಟು ಇಡಿಕಮ್ನೂರ ಜಾತ್ರಿಗೆ ಹೋಕ್ಕೇವಿ ಕೋಲ, ಬಸವಣ್ಣಿ, ಸಣ್ಣಪ...

ಕೋಲುಕೋಲನ್ನಿರೆ | ವಡ್ಡಯ್ನ ಕೈಗಲ್ಲ ಕಲೆಯನ್ನಿರೆ ||ಪ|| ಬಮ್ಮ ತನ್ನ ಹಿರಿಮಗ ವಡ್ಡಯ್ಗೆ ಕಲ್ಕೆಲಸ ಕಲಿಸಿ ಭೂಮಿಗೆ ಕಳುಹಿದ || ಕೋ || ೧ ಗುಡ್ಡದ ಬಿರಿಗಲ್ಲ ಹುಡ ಹುಡುಕುತ ಬಂದ ಧರೆಗೆ ಶಿವಲಿಂಗ ಪೂಜೆಗೆ ಕೊರೆದ || ಕೋ || ೨ ತಂದೆ ಮಾತ ತಾ ಎದೆಯಲ...

ಸೀತಾದೇವಿಗೆ ಲವಕುಶರನಂತರ ಮಕ್ಕಳಾಗಲೇ ಇಲ್ಲವೆ? ಪುರಾಣದಲ್ಲಿ ಅವಳಿಗೆ ತದನಂತರ ಪತಿಯ ಸಮಾಗಮ ಲಭಿಸಲಿಲ್ಲವೆಂದೇನೋ ಹೇಳಿದೆ. ನನ್ನ ಕತೆ ಮಾತ್ರ ಹೀಗಿದೆ. “ಹಿಂದಕ್ಕೆ ನಾವು ವನವಾಸದಲ್ಲಿದ್ದಾಗ ನಮ್ಮ ಕುಟೀರದ ಎದುರಿಗೆ ಒಂದು ಮಲ್ಲಿಗೆ ಬಳ್ಳಿಯ...

ಬೆಳೆಯುತ್ತಿರುವ ಬಾಳಿನೆಳೆಯ ಬಾಳೆಯೆಲೆಯ ಸುಳಿಯನು ಕೊರತೆಯೆಂಬ ಕೊಯ್ತದಲಗು ಕೊರೆಯುತಿಹುದನರಿವೆನು. ಬೇರಿನಿಂದ ಚಿಮ್ಮಿಬರುವ ಜೀವರಸದ ಝರಿಯನು ಮರೆವೆನೆಂತು ಮರಳಿ ಸುಳಿಯ ಬೆಳೆಸುವದರ ಪರಿಯನು. ೧ ಮೈಯು ಮನವು ಸೋತು ಸುರಳಿಯಾಗಿ ಹುಳದ ಹಾಗಿರೆ ಅಯ್ಯೋ...

1...89101112...1314

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...