ಕವಿವರ್‍ಯ ಭೃಗು ಅವರ ಹೆಸರು ಕೇಳದವರು ಯಾರು? ಅವರ ಮಗನಿಗೆ ಮಾತ್ರ ತಂದೆಯ ಕವಿತ್ವದ ಬಗ್ಗೆ ಎಳ್ಳಷ್ಟೂ ವಿಶ್ವಾಸವಿಲ್ಲ. “ನಮ್ಮಪ್ಪನಂಥವರೆಲ್ಲ ಕವಿಗಳಾದರೆ ತೀರಿತು!” ಎಂದು ಅವನು ನಿಸ್ಸಂಕೋಚವಾಗಿ ಹೇಳುತ್ತಾನೆ.
ಅವನಿಗೆ ಕತೆ ಕಾದಂಬರಿಗಳೆಂದರೆ ತುಂಬ ಪ್ರೀತಿ. ಒಂದು ರಾತ್ರಿ ಭೃಗು ಅವರು ಅರ್ಧ ನಿದ್ರೆಯಲ್ಲೇ ಎದ್ದು ನಿಸರ್ಗದ ಕರೆಗೆ ಓಗೊಟ್ಟು ಹೊರಗೆ ಬಂದರು. ಒಂದು ಘಂಟೆ ರಾತ್ರಿಯಾಗಿರಬೇಕು. ಮಗನ ಕೋಣೆಯಲ್ಲಿ ಇನ್ನೂ ದೀಪ ಉರಿಯುತ್ತಿದ್ದುದನ್ನು ಕಂಡು, ಕೋಪಿಸಿಕೊಂಡು “ಸೂ.. ಮಗನೆ, ಇನ್ನೂ ಎಣ್ಣೆ ಸುಡುತ್ತಿದ್ದೀಯಾ ಹಾಳು ಕಾದಂಬರಿ ಓದುತ್ತಾ?” ಎಂದು ಅಬ್ಬರಿಸಿದರು.
ಇಲ್ಲ ಅಪ್ಪ, ನಾನು ಕಾದಂಬರಿ ಓದುತ್ತಿಲ್ಲ. ನಿನ್ನ ಹೊಸ ಹೊಸ ಕವಿತೆಗಳಿಗೆ ಧಾಟಿ ಕೂಡಿಸುತ್ತಿದ್ದೇನೆ.
ಕವಿವರ್ಯರಿಗೆ ಏನೋ ದಿವ್ಯ ಸ್ಪರ್ಶವಾದಂತಾಗಿ ಆ ಎಣ್ಣೆ ಸುಟ್ಟದ್ದಕ್ಕಲ್ಲ. ನಾನು ಹೇಳಿದ್ದು, ಆದರೆ ರಾತ್ರೆ ಬಹಳ ಹೊತ್ತು ಓದುವದರಿಂದ ಆರೋಗ್ಯ ಕೆಡುತ್ತದೆ. ಸಾಕು, ಇನ್ನು ಮಲಗಿಕೊ…….. ಕವಿತೆ ಹೇಗೆ ಅನಿಸುತ್ತವೆ?”
*****

















