ಹೇಗೋ ನನಗೆ ತಿಳಿದಹಾಗೆ
ಬರದೆ ನಿನಗೆ ಒಲವಿನೋಲೆ||
ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ
ನಾನೇನು ಕಥೆ ಕವಿಗಾರನಲ್ಲ||
ಇದೇ ಮೊದಲ ಪ್ರೇಮದೋಲೆ
ಒಲಿದ ನಿನಗದುವೆ ಹೂಮಾಲೆ
ಗಾಂಧರ್ವ ವಿವಾಹ ಕರೆಯೋಲೆ||
ಇದರಲಿದೆ ನನ್ನ ನೂರಾರು
ಭಾವನೆಯ ಪ್ರತಿಬಿಂಬ|
ನಿನ್ನ ಪ್ರೇಮದಲೆಯಲಿ
ನಾ ಪುಳಕಿತನಾಗಿ ರಚಿಸಿರುವ ಪತ್ರ|
ಅಳೆಯಲಾಗದು ಇದರಿಂದ
ನನ್ನ ಪ್ರೀತಿಯ ಪರಿಯ|
ಆರಂಭವಾಗಲಿ ಇಂದಿನಿಂದ
ನಮ್ಮಿಬ್ಬರ ಪ್ರೇಮ ಚೈತ್ರಾ||
ಧಮನಿಧಮನಿಯಲಿ ನಿನ್ನ
ಪ್ರೀತಿ ಸ್ಪೂರ್ತಿ ಸಂಚರಿಸಿ
ಸಂತಸದಿ ತೇಲಾಡಿದೆ ಮನ||
ಅಗಲಿಕೆಯ ಸಹಿಸಲಾರೆನು ಒಂದು ಕ್ಷಣಾ|
ಮನದಲಿರುವ ಭಾವನೆಯನೆಲ್ಲಾ
ಎದುರಿಗೆಳಲಾಗದೆ ಇದರ ಮೊರೆಹೋಗಿರುವೆ|
ಈ ಪತ್ರಕೆ ಸುಂಕವಿರುವುದಿಲ್ಲ,
ಸಹಾಯಕರು ಬೇಕಾಗಿಲ್ಲ
ಬರೆದವರೆ ಬಂದು ಕೊಡುವ ಓಲೆ
ಇದುವೆ ಅಂತರಂಗದ ಒಲವಿನೋಲೆ||
*****