ಬಿಡಬೇಡ ಮನಸ್ಸನು ಸುಮ್ಮನೆ
ಇದೆ ಅದು ಮಹಾ ಚತುರ
ಸಾಧುವಿನ ಹಾಗೆ ವರ್ತಿಸುವುದು
ಹೀನಕ್ಕಿಳಿಯಲು ನಿತ್ಯ ಆತುರ
ಸ್ಥಿರವಾಗಿ ಒಂದೊಮ್ಮೆ ಕುಳಿತು ನಿ
ನಿನ್ನ ಮನಸ್ಸನ್ನೆ ನಿ ವಿರ್ಮಶಿಸು
ಮಗುವಿನಂತೆ ಅದಕ್ಕೆ ಸಂತೈಸಿ
ಧನ್ಯ ಹೀನತೆಯ ಪರಾಮರ್ಶಿಸು
ಅಂಬರದಿ ಕಸದಿಂದ ಜಲ ಸೋಸುವಂತೆ
ದೈವನಾಮದಿಂದ ಮನ ಸೋಸು
ಇಂದ್ರಿಯದತ್ತ ತಾನು ಸರಿದಾಗಲೆಲ್ಲ
ಮತ್ತೆ ಮತ್ತೆ ಹಿಡಿದು ದೇವರಲಿ ನಿಲ್ಲಿಸು
ಮುಳ್ಳಿನಿಂದ ಮುಳ್ಳನೆ ತೆಗೆಯುವಂತೆ
ಮನದಿಂದ ಮನವ ನಿಗ್ರಹಿಸು
ಇಂದ್ರಿಯಗಳ ಒಳಗೆಳೆದು ನೀನು
ಮಾಣಿಕ್ಯ ವಿಠಲನ ಆರಾಧಿಸು
*****