ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ

ಆನಂದಕಾರಕ ಸಾಧನಗಳಲ್ಲಿ ಪ್ರಸನ್ನತೆ ಎಂಬದೊಂದು ಬಹು ದೊಡ್ಡ ಸಾಧನವಾಗಿದೆ. ಪ್ರಸನ್ನತೆಯಿಂದ ಶಿಕ್ಷಕನು ಲೋಕಪ್ರಿಯನಾಗುವನು. ಅಂಗಡಿಕಾರನು ಹೆಚ್ಚಾಗಿ ಗಿರಾಕಿಗಳನ್ನು ದೊರಕಿಸುವನು; ನೌಕರನು ಹೆಚ್ಚು ಸಂಬಳವನ್ನು ದೊರಕಿಸುವನು; ರಾಜನು ಪ್ರಜಾನುರಾಗಿಯಾಗುವನು; ನಾನಾಪ್ರಕಾರದ ಮಹತ್ಕಾರ್‍ಯಗಳು ಪ್ರಸನ್ನತೆಯನ್ನು ಕಾಯ್ದುಕೊಳ್ಳುವದರಿಂದ ಸಹಜವಾಗಿ ಕೊನೆಗಾಣುವವು. ಖಿನ್ನತೆಯು ಪ್ರಗತಿಯನ್ನು ನಾಶಮಾಡುವ ಶೆಸ್ತ್ರವಾಗಿದೆ. ಪ್ರಸನ್ನತೆಯು ಶಕ್ತಿಯ ಉತ್ಪಾದಕವೂ ಖಿನ್ನತೆಯು ಶಕ್ತಿಯ ನಾಶ ಕಾರಕವೂ ಅಗಿರುತ್ತದೆ.

ಪ್ರಸನ್ನತೆಯಲ್ಲಿ ಮನೋಹರತ್ವವೂ ಇರುವದು. ಅದರಿಂದ ಅದು ಪ್ರಗತಿಪರನಿಗೆ ಕಾರ್ಯಸಾಧಕವಾಗಿರುವದು; ಪ್ರಸನ್ನತೆಯಿಂದ ಸ್ನೇಹವು ಬೆಳೆಯುವದು. ಪ್ರಸನ್ಮಮುಖಿಯು ದುಷ್ಟ ಹಾಗು ವಿರೋಧಿ ಮನುಷ್ಯನಿಂದ ಕೂಡ ಪ್ರಸಂಗದಲ್ಲಿ ಸಹಜವಾಗಿ ಸಹಾಯಹೊಂದುವನು. ಮನೆಯಲ್ಲಾಗಲಿ, ಕಾರಖಾನೆಗಳಲ್ಲಾಗಲಿ, ರಾಷ್ಟ್ರದಲ್ಲಾಗಲಿ, ಲೋಕಪ್ರಿಯನಾದವನು ಪ್ರಸನ್ನಮುಖಿಯೇ ಆಗಿರುತ್ತಾನೆಂಬದು ಕಂಡುಬರುತ್ತದೆ. ಖಿನ್ನ ಹಾಗು ಉಗ್ರಮುದ್ರೆಯ ಮನುಷ್ಯನು ಲೋಕಪ್ರಿಯನುಗುವದು ದುಸ್ತರವು. ಖಿನ್ನವದನನು ಬೇಗ ಸಾಯುವನೆಂದೂ ಪ್ರಸನ್ನಮುಖಿಯು ದೀರ್‍ಘ ಕಾಲಬಾಳುವನೆಂದೂ ತಜ್ಞರು ಹೇಳುತ್ತಾರೆ. ಅದ್ದರಿಂದ ಪ್ರಗತಿಯನ್ನು ಬಯಸುವವನು ಸದಾ ಪ್ರಸನ್ನಚಿತ್ತವಿರುವಂತೆ ಯತ್ನಿಸಬೇಕು.

ಅಭ್ಯಾಸದಿಂದ ಬೇಕಾದದ್ದನ್ನು ಕೈವಶಮಾಡಿಕೊಳ್ಳಬಹುದು. ದುರ್ಮುಖಿಯು ಕೂಡ ಅಭ್ಯಾಸದಿಂದ ಪ್ರಸನ್ನತೆಯನ್ನು ಪಡಯಬಹುದು. ಪ್ರಸನ್ನಚಿತ್ತದವನಿಗೆ ದುಃಖ-ಶೋಕಗಳು ಹೆಚ್ಚಾಗಿ ಬಾಧಿಸಲಾರವು. ಪ್ರಸನ್ನತೆಯನ್ನು ಸಂಪೂರ್‍ಣವಾಗಿ ಪಡೆಯಲಿಚ್ಚಿಸುವವನು ಮೊದಲು ಸ್ಮಿತವದನನಾಗಿರಲು ಪ್ರಯತ್ನಮಾಡಬೇಕು, ಮುಗುಳುನಗೆಯೆಂದರೆ, ಜಾರಿಣಿಯು ಬಾರನನ್ನು ವಶ ಮಾಡಿಕೊಳ್ಳುವಾಗ ತೋರಿಸುವ ವಿಕಟಹಾಸ್ಯವಲ್ಲ. ಬಾಲ ಬಡಿಯವ ಸ್ವಭಾವದವರು ಅಧಿಕಾರಿಗಳ ಇಲ್ಲವೆ ಶ್ರೀಮಂತರ ಬಳಿಯಲ್ಲಿ ಕಾರ್ಯ ಸಾಧನಕ್ಕಾಗಿಯೂ, ಒಣ ಪ್ರತಿಷ್ಟೆಯನ್ನು ಹೊಂದುವದಕ್ಕಾಗಿಯೂ ನಗುವ ದೇಶಾವರಿ ನಗೆಯಲ್ಲ; ತಾಯಿಯು ಪ್ರೀತಿಯಿಂದ ಮಗನನ್ನು ಮುದ್ದಾಡುವಾಗ ನಗುವನಗೆಯು; ಸ್ಮಿತವದನದಿಂದ ಕಡುವೈರಿಯು ಕೂಡಶಾಂತನಾಗುವನು. ಸ್ಮಿತವದನನಾಗುವದು ಸಾಧಿಸಿದ ಬಳಿಕ ಅಂತಃಕರಣವನ್ನು ಪ್ರಸನ್ನವಾಗಿಟ್ಟುಕೊಳ್ಳಲಿಕ್ಕೆ ಪ್ರಯತ್ನಿಸಬೇಕು. ಸತ್ಯ ಹಾಗು ಸುಲಲಿತ ಭುಷಣಮಾಡುವದರಿಂದ ಪ್ರಸನ್ನತೆಯು ಅಂತಃಕರಣದಲ್ಲಿ ನೆಲೆಗೊಳ್ಳಹತ್ತುವದು. ಪ್ರಸನ್ನಾಂತಃಕರಣವು ತ್ರಾಸ, ನಿರಾಶೆ, ದುಃಖ, ಕಷ್ಟ ಇವುಗಳ ಮೇಲೆ ಅಧಿಕಾರತೋರಿಸಿ ಅವನ್ನು ಓಡಿಸುವದು. ಪ್ರಸನ್ನಚಿತ್ತನು ಎಂಥ ಪ್ರತಿಕೂಲಪ್ರಸಂಗಗಳಲ್ಲಿಯೂ ಅನುಕೂಲತೆಯನ್ನು ದೊರಕಿಸಿಕೊಂಡು ಪ್ರಗತಿ ಪರನಾಗುವನು.

ನಿಜಿವಾದ ಸಭ್ಯ ಸ್ತ್ರೀಪುರುಷರು ದುಃಖ ಶೋಕ ದಾರಿದ್ರ್ಯ ಇವುಗಳನ್ನು ಸಹಜವಾಗಿ ಸಹಿಸುವರು. ಪ್ರಸನ್ನತೆಯಿಂದಲೇ ಸಭ್ಯ ಗುಣವು ಅವರಲ್ಲಿ ಒಡಮೂಡಿರುತ್ತದೆ. ದೈನ್ಯವನ್ನು ಮಂದಿಯ ಮುಂದೆ ಹೇಳಿಕೊಳ್ಳುವದು ಸಭ್ಯ ಜನರಿಗೆ ಮರಣಪ್ರಾಯವಾಗುವದು. ಇದರಿಂದಲೇ ಅವರು ಉಜ್ವಲಚರಿತ್ರರಾಗಿ, ಲೋಕವಂದ್ಯರಾಗುವರು. ದುಃಖ, ಶೋಕ, ಶ್ರಮಗಳನ್ನು ನುಂಗಲು ಪ್ರಯತ್ನ ಮಾಡುವದರಿಂದ ಮನೋದಾರ್‍ಢ್ಯವು ಹೆಚ್ಚುವದು, ದೃಢಮನಸ್ಸಿನವನು ಪ್ರಸನ್ನತೆಯನ್ನು ಪಡದಿರಬೇಕಾಗುವದು, ಇಲ್ಲದಿದ್ದರೆ ಅವನ ನಿಶ್ಚಯವು ಸಹಜವಾಗಿ ಸಡಿಲಾಗಬಹುದು.

ಕಪಟದ, ಮಾತ್ಸರ್ಯದ, ಭಿನ್ನತೆಯ ಮುದ್ರೆಗಳುಳ್ಳ ಮನುಷ್ಯನು ಯಾವ ಪ್ರಕಾರದ ಪ್ರಗತಿಯನ್ನೂ ಪಡೆಯಲಾರನು. ನಗೆ ಮೊಗದ ಮಗುವನ್ನು ಯಾರು ಮುದ್ದಿಡಲಿಕ್ಕಿಲ್ಲ? ನಗೆಮೊಗದ ಮನುಷ್ಯನನ್ನು ಯಾರು ಮುಂದೆ ಕರೆಯಲಿಕ್ಕಿಲ್ಲ? ನಗೆಮೊಗದ ಹೆಂಡತಿಯನು ಯಾವ ಗಂಡನು ಪ್ರೀತಿಸಲಿಕ್ಕಿಲ್ಲ? ಇದು ಯಾತರ ಪರಿಣಾಮವು? ಅವರ ಪ್ರಸನ್ಮಮಯಿಯಾದ ಮುದ್ರೆಯಿಂದಲ್ಲವೇ?

ಸರಳವಾದ ನಡಾವಳಿಯವರಾಗುವದೂ, ಮಿತ್ರರ ಅದರಕ್ಕೆ ಪಾತ್ರರಾಗುವದೂ, ಸಮಾಜದ ಪ್ರೇಮಕ್ಕೆ ಪಾತ್ರರಾಗುವದೂ ಪ್ರಸನ್ನಚಿತ್ರದಿಂದಲೇ. ಪ್ರಸನ್ನತೆಯನ್ನೊಂದು ಕಳಕೊಳ್ಳುವದರಿಂದ ಮನೆಯವರ, ಮಿತ್ರರ, ಸಮಾಜದ, ರಾಷ್ಟ್ರದ ಕ್ಷೋಬಕ್ಕೆ ಪಾತ್ರರಾಗ ಬೇಕಾಗುತ್ತದೆ. ಎಷ್ಟೋ ಜನರು ಸಾಧಾರಣವಾದ ವ್ಯವಹಾರಗಳಲ್ಲಿ ಕೂಡ ಸಭ್ಯತೆಯನ್ನು ಕಾಯ್ದುಕೊಳ್ಳುವದಿಲ್ಲ . ಈ ದಾರಿಯು ಯಾವ ಊರಿಗೆ ಹೋಗುವದೆಂದು ಪ್ರವಾಸಿಕನು ಕೇಳಲು, ದಾರೀ ತೋರಿಸಲಿಕ್ಕೆ ನನ್ನನ್ನು ಆಳುಗಿ ನಿಯಮಿಸಿರುವೆಯೇನು? ಎಂದು ನೇಳುವ ನಿರ್‍ದಯರು ನಮ್ಮಲ್ಲಿ ಬಹುಜನರಿರುವರು. ಇಂಥ ದುರಭಿಮಾನಿಗಳಿಂದ ಸ್ವಹಿತದ ಕಾರ್‍ಯವಾಗಲಿ, ದೇಶಹಿತದ ಕಾರ್‍ಯವಾಗಲಿ ಆಗುವ ಸಂಭವವಿಲ್ಲ. ಇವರ ಈ ದುಶ್ಚಿತ್ತತನದಿಂದ ಅವರ ಪ್ರಗತಿಯ ಘಾತಮಾತ್ರ ತಪ್ಪದೆ ಆಗುವದು;

ಶ್ರೀ ಶೇಷಾಚಲ ಸದ್ಗುರುಗಳು ಎಲ್ಲರನ್ನೂ ಸ್ಮಿತವದನ ಪೂರ್‍ವಕವಾಗಿ ನಮಿಸುತ್ತ ಅವರನ್ನು ಕುರಿತು-ಮಹಾರಾಜಾ, ಎಂಬ ಉಪಪದದೊಡನೆ ಸಂಬೋಧಿಸುತ್ತ ಬೋಧಮಾಡುತ್ತಿದ್ದದರಿಂದಲೇ ಅವರ ಬೋಧವು ಸುಪರಿಣಾಮಕಾರಿಯಾಗಿ, ಅವರು ಲೋಕವಂದ್ಯರೂ ಭಕ್ತಾನುರಾಗಿಗಳೂ ಆದರು. ಶ್ರೀ ಟೇಂಬೇ ಮಹಾರಾಜರು ಸದ್ಗುಣಿಗಳನ್ನು ಮನ್ನಿಸುತ್ತಲೂ, ದುರ್‍ಗುಣಿಗಳನ್ನು ದಂಡಿಸುತ್ತಲೂ ಲೋಕಹಿತದಕ್ಷರಾದರು. ಆದರೆ ಅಗಡಿಯ ಸಾಧುಗಳು ದುಷ್ಟರ ಹಾಗು ಶಿಷ್ಟರ ದೃಷ್ಟಿಯಿಂದ ಸರಿಯಾಗಿಯೇ ವಂದ್ಯರಾದಂತೆ ಟೇಂಬೇಮಹಾರುಜರು ಆಗಲಿಲ್ಲ. ಇದರಲ್ಲಿ ಶ್ರೀ ಟೇಂಬೇ ಮಹಾರಾಜರನ್ನು ನಿಂದಿಸಬೇಕೆಂದು ಲೇಖಕನ ಉದ್ದೇಶವಿಲ್ಲ. ಶ್ರೀಗುರುಗಳಂತೆ ಅವರೂ ಲೇಖಕನಿಗೆ ಅತ್ಯಂತ ಪೂಜ್ಯರಾಗಿರುವರು. ಆದರೆ ಪ್ರಸ್ತುತ ವಿಷಯವಾದ ಪ್ರಸನ್ನತೆಯ ವಿವೇಜನವನ್ನು ಮಾಡುವಾಗ, ಸಾಮಾನ್ಯರಿಗೆ ತೋರಬಹುದಾದ ಭೇದವನ್ನು ಇಲ್ಲಿ ವಿವರಿಸಿರುವೆವು.

ನಾವು ಪ್ರಯತ್ನದಿಂದ ಎಂಥ ಶ್ರೀಮಂತರೇ ಆಗಲಿ, ಎಷ್ಟು ಕೀರ್ತಿಯನ್ನೇಹೊಂದಲಿ ಆದರೆ ಯಾವನಿಗೆ ಪ್ರಸನ್ನತೆಯ ಮಧುರ ರಸವು ಸೇವಿಸಲಿಕ್ಕೆ ದೊರೆಯಲಿಲ್ಲವೋ ಅವನ ಬಾಳು ವ್ಯರ್‍ಥವೆನ್ನಬಹುದು. ಅಂಗೀಕೃತಕಾರ್ಯದಲ್ಲಿ ಯಶವು ದೊರೆಯಲ್ಲಿ-ದೊರೆಯದಿರಲಿ, ದುಡ್ಡು ಸಿಗಲಿ-ಸಿಗದಿರಲಿ, ಏನೇ ಆಗಲಿ, ಪ್ರಸನ್ನತೆಯನ್ನು ಮಾತ್ರಕಳಕೊಳ್ಳಬಾರದು. ನಮಗೆ ದುಡ್ಡು ಸಿಕ್ಕರೂ ಆಷ್ಟೇ-ಸಿಗದಿದ್ದರೂ ಆಷ್ಟೇ ಯಶೋಭಾಗಿಗಳಾದರೂ ಅಷ್ಟೆ- ಯಶೋವಿಹೀನರಾದರೂ ಅಷ್ಟೇ, ಈ ಸಂಗತಿಗಳೆಲ್ಲ ಕೇವಲ ನಮ್ಮ ಸ್ವವಿಷಯಗಳಾಗಿರುವವು. ಜನರಿಗೆ ಇವುಗಳ ಪರಿವೆಯಿರುವದಿಲ್ಲ. ನಾವು ಪ್ರಸನ್ನ ಚಿತ್ತರಿರುವೆವೋ ಇಲ್ಲವೋ ಎಂಬದೊಂದು ವಿಷಯವನ್ನು ಮಾತ್ರ ಜನರು ಪರೀಕ್ಷಿಸುವರು.

ಕೈ. ನಾಮದಾರ ಗೋಪಾಳ ಕೃಷ್ಣ ಗೋಖಲೆಯವರ ಪ್ರಗತಿಯ ರಹಸ್ಯವು ಅವರು ಸದಾ ಧರಿಸುತ್ತಿದ್ದ ಪ್ರಸನ್ನಮುದ್ರೆಯದಾಗಿರುವದೆಂದು ಅವರ ಸಹಪಾಠಿಗಳು ಹೇಳುತ್ತಾರೆ. ಇತಿಹಾಸ ಪ್ರಸಿದ್ಧರಾದ ಎಷ್ಟೋ ಜನರು ದೂಡ್ಡವರೆನಿಸಿಕೂಳ್ಳಲಿಕ್ಕೆ ಅವರ ಪ್ರಸನ್ಮಚಿತ್ತವೇ ಕಾರಣವೆಂದು ಗೊತ್ತಾಗುವದು. ಶ್ರೀ ಶಿವಾಜಿ ಮಹಾರಾಜರು ದುರ್ಮುಖಿಗಳಾದದ್ದನ್ನು ಯಾರೂ ನೋಡಿದ್ದಿಲ್ಲ. ಸಂತಶ್ರೇಷ್ಠ ತುಕಾರಾಮ ಮಹಾರಾಜರು ಎಂದೂ ದೀನರಾಗಿದ್ದಿಲ್ಲ.

ಜಗತ್ತು ಕನ್ನಡಿಯಂತಿರುವದು. ಅದರಲ್ಲಿ ಯಾವ ಪ್ರಕಾರದ ಬಿಂಬವನ್ನು ಕಡವುವೆವೋ ಅದರ ಪ್ರತಿಬಿಂಬವೇ ಕಾಣುವದು. ಯಾವ ಪ್ರಕಾರವಾಗಿ ಕೂಗುವೆವೋ ಅದೇ ಪ್ರಕಾರದ ಪ್ರತಿಧ್ಯನಿಯುಂಟಾಗುವದು. ಎಷ್ಟು ಖರ್ಚು ಮಾಡುವೆವೋ ಅಷ್ಟು ಹೊಂದುವೆವು. “ಖರ್ಚುಗಾರರ ಮನೆಯ ಮೊಟ್ಟೆಗಾರ” ಎಂದು ದೊಡ್ಡವರು ಹೇಳಿರುವ ರಹಸ್ಯವಾದರೂ ಇದೇ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತವಚನ
Next post ಯಾರಿದ್ದರೇನಂತೆ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…