ಯಾರಿದ್ದರೇನಂತೆ
ಯಾರು ಇಲ್ಲದಿರಲೇನಂತೆ
ನಿನಗೆ ನೀನೇ ಸಾಟಿ ಸಖಿ
ಹೂವು ಹೂವಿನಲಿ ನೀನು
ದುಂಬಿ ಆಲಾಪದಲಿ
ನಿನ್ನ ಹೆಸರೇ ಹೇಳುತಿದೆ
ಬರೆದೆ ಎಲೆಗಳ ನರನಾಡಿಗಳಲಿ
ಪ್ರಕೃತಿಯೇ ನೀನು
ವಿಕೃತಿಯೇ ನೀನು
ಋತುಗಾನ ವಿಲಾಸಿನಿ
ಸೌಂದರ್ಯವತಿಯೇ ನೀನು
ಜೀವನದ ಜೀವ ತರಂಗ ನೀನು
ಸಪ್ತ ಸಾಗರವೇ ನೀನು
ಸುಪ್ತಗಾಮಿನಿ ಹಿಮಮಣಿ
ಮಕುಟ ಶೃಂಖಲೆ ನೀನು
ಆಗಸದರ ಮನೆಯ ಒಡತಿ
ಆ ಮೋಡಗಳೇ ರಥ ಕುಂಚಗಳು
ಸೂರ್ಯ ಚಂದ್ರ ನಕ್ಷತ್ರ ತಾರಾ
ವಿಹಂಗಿಣೆ ಸೌಮ್ಯ ರೂಪಿಣಿ
ನಿನ್ನ ಮೌನದ ಗಾನವೇ
ಆವರಿಸಿದೆ ಚಿಲಿಪಿಲಿ ಹಕ್ಕಿ
ಗಳಲಿ ಸಂವತ್ಸರದ ಹಾಡು
ಹಾಡಲಿ ನೆರಳಾಗಿಹೆ ನೀನು ಸಖಿ
ಯಾರು ಮರತರೇನಂತೆ ನಿನ್ನ
ಮರಲಾಗುವುದೇ ನಿನ್ನ ನಿಲುವೂ
ನಿನ್ನ ತ್ಯಾಗ ಬಲಿದಾನ ಫಲವೇ
ನೀನು ಯುಗಗಳೇ ಸಾರಿದೆ ಸಖಿ
*****