ನಿಂದಿಸದಿರು ನೀ ಕಾಲವನು
ವಿಧಿಯ ನೆಪಮಾಡಿ|
ದೂಷಿಸದಿರು ನೀ ಈ ಜನ್ಮವನು
ಹಿಂದಿನ ಕಾಲಕರ್ಮನು ಹಗೆಮಾಡಿ||
ಕಠಿಣ ಪರಿಶ್ರಮವಿಲ್ಲದೆ
ಬರಿಯ ಅದೃಷ್ಟವನೇ ನಂಬಿ
ಬದುಕಲು ಸಾದ್ಯವೇನು?|
ಬಿಲ್ಲನೆತ್ತಿ ಬಾಣವ ಹೂಡದೆ
ಬರೀ ಠೇಂಕರಿಸಿದರೆ
ಗುರಿಯತಲುಪಲು ಸಾಧ್ಯವೇನು?||
ಉತ್ತಿ ಬಿತ್ತಿ ಬೆಳೆಸಿ ಇನ್ನೇನು ಫಲ
ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ಮಳೆಹೋಗಿ
ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಿರುವಾಗ|
ದುಡಿದು ಶ್ರಮವಹಿಸಿ ಗಳಿಸಿದರೂ
ದಕ್ಕುವದೇ ದುರ್ಲಭವಾಗಿರುವಾಗ|
ದುಡಿಯದಲೇ ಬಯಸಿದರೆ ಭಾಗ್ಯವ
ಬರಲದುವೇ ತಾತನ ಮನೆಯ ಸ್ವತ್ತೇ?||
ಬೆವರಿಳಿಸಿ ಬಸವಳಿದು ಭೂತಾಯಿಯ
ಸೇವೆಮಾಡಿದರೂ ತುತ್ತು ಅನ್ನಕೆ
ಅದೆಷ್ಟೋ ದಿನ ಕಾಯಬೇಕು|
ಅಂತದರಲಿ ನೀ ಕೂತಲ್ಲಿ ಎಲ್ಲವನು
ಬಯಸಿ ಬೇಸರಿಸಿದರೆ
ನಿನ್ನಕಡೆ ನೋಡುವರಾರು?
ಬಿಡು ಚಿಂತಿಸುವುದನು
ಬಿಡು ಕಾಲ, ಕರ್ಮವ ನಿಂದಿಸುವುದನು|
ನಡೆಮುಂದೆ ಕಾಲ ದಾರಿತೋರಿದೆಡೆ
ಮುಂದಿರದು ಭಯದ ಅಡೆತಡೆಯ ಗೋಡೆ||
*****