ಬಾಳನ್ನು ಒರೆಗೆ ಹಚ್ಚಿನೋಡು
ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು
ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು
ಆತ್ಮನ ಸಹಚರದಲಿ ಪರಮಾತ್ಮನ ಹಾಡು
ಯಾವಕ್ಷಣಗಳಿವು ಮನುಜ!
ಬರೀ ಮೋಜೆಂದು ಬಗೆದೆಯಾ?
ಇಂದ್ರಿಯ ಗಟ್ಟಿ ಇರುವಾಗು ಸುಖ
ನಂತರ ಪಾಪದ ಪರ್ವತ ಕಾಣೆಯಾ?
ಏಸೋ ಜನುಮದ ನಂಟು
ಮಾನವ ಈ ಜನುಮ ಪಡೆಯಲು
ಆದರೆ ಇದನ್ನು ಕಳೆಯದಿರು ವ್ಯರ್ಥ
ಮತ್ತೇಷ್ಟು ಯುಗಗಳೋ ಈ ಜನ್ಮ ಕಾಣಲು
ಸದಾ ಮನಸ್ಸು ಪತನದತ್ತ ವಾಲಿದೆ
ಹೌದು ಅದರ ಅದು ಸಹಜ ಗುಣ
ಮನಸ್ಸಿನ ಮೇಲೆ ಸವಾರಿ ಮಾಡು
ಕಲಿಸು ನೀನು ಮನಕ್ಕೆ ಸತ್ವ ಗುಣ
ಸಾಧಿಸಬೇಕು ನರನೆ ಭಕ್ತಿಯನ್ನು
ನೀ ಮತ್ತೆ ಪಡೆಯಬೇಕು ಪುಣ್ಯ
ಪಾಪಗಳರಿಯದೆ ಸಖ್ಯ ಅನುಭವಿಸಿದರೆ
ಮಾಣಿಕ್ಯ ವಿಠಲ ಆಗಲಾರ ಧನ್ಯ
*****