ಆತ್ಮದ ಬೆಳಕು

ಹರಿ ನಿನ್ನ ಕೃಪೆಯೊಂದು ಆಧಾರ
ಅದುವೆ ಈ ಬಾಳಿನ ಸರ್ವ ಕಾಮ್ಯ
ನಿನ್ನ ನೋಟವೊಂದೆ ಎನ್ನ ಕಾಯಲಿ
ನಿನ್ನ ರೂಪವೇ ಎನಗೆ ನಿತ್ಯ ಗಮ್ಯ

ಈ ಬದುಕು ನೀನಿಲ್ಲದ ಬರಡು
ಎಲ್ಲಯದು ಸಂತಸ ನವ್ಯ ಚೈತ್ಯ
ನೀನು ನನ್ನೊಂದಿಗೆ ಕೈ ನೀಡಿ ನಡೆಸು
ನಾನಾಗುವೆನು ನಿನ್ನ ಪಾದದಲಿ ಪಾವಿತ್ರ್ಯ

ಆಕಾಶ ಪಾತಾಳಗಳೆಲ್ಲ ನಿನ್ನ ಛಾಯೆ
ಭೂಲೋಕ ತುಂಬ ನಿನ್ನ ಮಾಯೆ
ಈ ಮಾಯೆದಿ ನೀನೆ ನನ್ನ ಬಿಡಿಸು
ನೀನೇ ನನ್ನ ಜನ್ಮ ಜನ್ಮಕ್ಕೂ ತಾಯೆ

ಎನ್ನ ಕಂಗಳ ತುಂಬೆಲ್ಲ ಇರಲಿ ರೂಪ
ಹೃದಯ ತುಂಬಲಿ ನಿನ್ನ ಭಕ್ತಿ ಸರಕು
ನಾನು ಪಡೆಯಲಿ ನನ್ನಾತ್ಮ ಬೆಳಕು
ಮಾಣಿಕ್ಯ ವಿಠಲನಾಗಲಿ ಅದೆಲ್ಲದಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟುಕರಾಗದಿರಿ ನೀವು
Next post ಕೋಮು ಹಾಗೂ ಭಯೋತ್ಪಾದನೆ ಬೇರುಗಳು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…