ಮುಗಿಲೇರಿದ ಸಿರಿಗನ್ನಡ ಬಾವುಟ ಹಾರಲಿ ಮೊದಲು ಎದೆಯಲ್ಲಿ ಚರಿತೆಯ ಪಡೆದಿಹ ಕನ್ನಡ ರಥಕೆ ಹೊಸ ಹಾದಿಯನು ತೋರುತಲಿ ಮಲಗಿದ ಮನಗಳು ಎಚ್ಚರವಾಗಲಿ ಕನ್ನಡ ಮೈತಾಳಿ ಭವಿಷ್ಯ ಕಾಣದ ನೆಲಜಲ ಕಾಯಲು ಅಭಿಮಾನವ ಚೆಲ್ಲಿ ಎದ್ದಿಹ ಕನ್ನಡ ವಿರೋಧಿ ಸದ್ದನು ಅಡಗಿಸಿ...

ಕನ್ನಡ ಎಂ.ಎ. ನಲ್ಲಿ ಮೈಸೂರು ಯೂನಿವರ್ಸಿಟಿಯಲ್ಲಿಯೇ ಪ್ರಥಮ ಬ್ಯಾಂಕ್ ಸಿಕ್ಕಾಗ ನನಗಾದ ಆನಂದ ಅಪರಿಮಿತ. ಒಟ್ಟು ಎಂಟು ಬಂಗಾರದ ಪದಕಗಳು ನನಗೆ ಲಭಿಸಿದ್ದವು. ಈ ಒಂದು ರಾಂಕ್‌ಗಾಗಿ. ಇದೇ ಮೊದಲ ಬಾರಿಯೇನೂ ನಾನು ರಾಂಕ್ ಬಂದದ್ದಲ್ಲ. ಬಿ.ಎ.ನಲ್ಲಿ ಇದ...

ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ ಹಳೆಪುರಾಣವ ಬಳಸಿ ಬುಡದಿಂದ ತುದಿಗೆ, ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ. ಯಾರೋ ಪೆದ್ದರು ನಿಲುವಂಗಿ ಕದ್ದರು, ತಮ್ಮದೇ ಎನ್ನುವಂತೆ ಅದ ತೊಟ್ಟು ಮೆರೆದರು ಲೋಕದೆದುರು; ಚಿಂತಿಲ್ಲ ಹಾಡೇ, ತೊಡಲಿ ಅವರೇ, ಬೆತ್...

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು. ತಾಯಿ ಗಿಡದ ಹೃದಯ ಕಂ...

(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ...

ಭುವಿಯ ಚೇತನಾಗ್ನಿಯಲ್ಲಿ ಸೂರ್‍ಯ ಬಲಿಯು ನೀಡುವ; ಅಮೃತಗರ್ಭನಾದ ಸೋಮ ಸೋಮರಸವನೂಡುವ. ಅಗಣಿತ ಗ್ರಹ-ತಾರಕಾಳಿ ಮಧುಹೋಮವ ನಡೆಸಿವೆ; ಮೋಡ- ಗುಡುಗು, ಮಿಂಚು-ಸಿಡಿಲು ಉದಧಿಗರ್ಘ್ಯ ಕೊಡುತಿವೆ! ೫ ಸಾಗರ ಹೋತಾರನಾಗಿ ಸೂರ್ಯಗೆ ಬಲಿ ನೀಡುವ; ಸೂರ್ಯನು ದಾತ...

ಮಹಾ ಮಾನವತಾವಾದಿ ಬಸವಣ್ಣನವರ ಕರ್ಮಭೂಮಿ ಈ ಬೀದರ ಜಿಲ್ಲೆಯ ಕಲ್ಯಾಣ ನಾಡು ಎಂದಾಗ ನಮ್ಮ ಎದೆ ತುಂಬಿ ಬರುತ್ತದೆ. ಈ ಬೀದರ ಜಿಲ್ಲೆ ಶರಣರ, ಸಂತರ, ಪುಣ್ಯ ಭೂಮಿ. ಈ ನಾಡಿನಲ್ಲಿ ಬಾಳಿ ಬದುಕಿದ ಈ ನಾಡಿಗೆ ಸಂದೇಶವನ್ನು ನೀಡಿ ಈ ನಾಡಿನಭೂಮಿ ಪಾವನಗೊಳಿಸ...

ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್ ಕಾಸ ಕೇಳ್ದ್ರೆ ಬಾಯ್ಬುಟ್ಟಿ- ಪೊರಕೇನ್ ಎತ್ತಿಡ್ದಿ ಬಡ...

ಗಂಧವತಿ ಪೃಥ್ವಿಯ ಸುಗಂಧ-ಕಂದದ ಬಳ್ಳಿ ಹಬ್ಬುತಿದೆ ಬೆಟ್ಟ ಸಾಲುಗಳಲ್ಲಿ; ಗಿರಿಶಿಖರ ಮುಕುಲದೊಲು ಮೊಗವನೆತ್ತಿವೆ ನಭದಲಲ್ಲಲ್ಲಿ; ಮಲರುವದದೆಂದೋ? ಕೊನೆಯ ಪ್ರಳಯ ಪ್ರಖರ ದ್ವಾದಶಾದಿತ್ಯರದಿಸಿದ ಮೇಲೆ, ಚಳಿ ತಳ್ಳಿ ನವವಸಂತವು ಬರಲು, ಸುರ-ತಾರಕಾನಿಕರ ...

1...6970717273...110

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...