ಗಂಧವತಿ

ಗಂಧವತಿ ಪೃಥ್ವಿಯ ಸುಗಂಧ-ಕಂದದ ಬಳ್ಳಿ
ಹಬ್ಬುತಿದೆ ಬೆಟ್ಟ ಸಾಲುಗಳಲ್ಲಿ; ಗಿರಿಶಿಖರ
ಮುಕುಲದೊಲು ಮೊಗವನೆತ್ತಿವೆ ನಭದಲಲ್ಲಲ್ಲಿ;
ಮಲರುವದದೆಂದೋ? ಕೊನೆಯ ಪ್ರಳಯ ಪ್ರಖರ
ದ್ವಾದಶಾದಿತ್ಯರದಿಸಿದ ಮೇಲೆ, ಚಳಿ ತಳ್ಳಿ
ನವವಸಂತವು ಬರಲು, ಸುರ-ತಾರಕಾನಿಕರ
ಭೃಂಗದಂತೆರಗಿ, ನರುಗಂಪನ್ನು ಹೊರಚೆಲ್ಲಿ,
ಮಗಮಗಿಸೆ ದೆಸೆ, ಆಗ ಮುಗಿಲ ಮೌನವೆ ಮುಖರ.

ಈ ಚಿತ್ತ ಸರಸಿಯಲಿ ಮಧುಕಲ್ಪನಾಕುಸುಮ
ತುರುಗಿ ತುಂಬಿವೆ, ಒಡಲಕಾವಣದೊಳೀ ಪ್ರಾಣ
ಕಾದಲನಿಗಾಗಿ ಕುಳಿತಿದೆ ಕಾದು, ಗಂಭೀರ!
ಬಾರ, ತಳುವದೆ ಜಗಜ್ಜೀವನವೆ! ಅತಿವಿಷಮ
ಸಂಕಟದೊಳಿದೆ; ತಡೆಯುವರೆ, ತಾನು ನಿತ್ರಾಣ;
ಉಸಿರೊಳುಳಿದಿದೆ. ಮಲಯಪವನ ವಿಲಯಸಮೀರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್ಚರಿಕೆ
Next post ಈ ಮೋಸ ದೋಸವಲ್ಲ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…