ಈ ಮೋಸ ದೋಸವಲ್ಲ

ಅಗಲೆಲ್ಲ ಬೆವರ್ ಅರ್‍ಸಿ
ಜೀತ ಕೆರ್‍ಕೊಂಡು
ಅಟ್ಟೀಗ್ ನಾ ಬತ್ತಂದ್ರೆ
ಮೈ ಕೈ ಮುರ್‍ಕೊಂಡು
ಜೋಬೆಲ್ಲ ಜಡ್ತಿ
ಮಾಡ್ತೌಳ್ ನನ್ ಎಡ್ತಿ! ೧

ಒಂದ್ ದಪ ತಂದ್ ಜೀತ
ಪೂರ ಕೊಟ್ಬುಟ್ಟಿ
ಯೆಂಡಕ್ ಒಂಬತ್ ಕಾಸ
ಕೇಳ್ದ್ರೆ ಬಾಯ್ಬುಟ್ಟಿ-
ಪೊರಕೇನ್ ಎತ್ತಿಡ್ದಿ
ಬಡಿದೌಳ್ ನನ್ ಎಡ್ತಿ! ೨

ಯೆಂಡಾನೆ ನಂ ದೇವ್ರು!
ತಿರ್‌ಮೂರ್‍ತಿ ಯೆಂಡ!
ನಮ್ಮುಟ್ಸಿ ಬದ್ಸೋದು
ಸಾಯ್ಸೋದು ಯೆಂಡ!
ಯೆಂಡ ಬುಡ್ತಂದ್ರೆ
ನಂ ಜೀಮ್ಕೆ ತೊಂದ್ರೆ! ೩

ಕಲಿಗಾಲ! ಸವಿಗಾಲ!
ಬದುಕೋಕ್ ಆಗಾಲ್ಲ!
ಸಾಚಾ ಮನಸರ್‍ಗನಕ
ಉಳಗಾಲಾನಿಲ್ಲ!
ಅದರಿಂದೊಂದ್ ಇಕ್ಮತ್
ಮಾಡ್ದೆ! ಬಲ್ ಗಮ್ಮತ್! ೪

ಯೆಂಡಕ್ ಬಂದ್ ಎಳ್ಡಾಣೆ
ಕೂದ್ಲಾಗ ಸಿಕ್ಸಿ
ಅಟ್ಟೀಗ್ ಬಂದ್ ತಕ್ಸಾನ
ಜೋಬ್ ಒದ್ರಿ ಬೊಗ್ಸಿ
ಯೆಡ್ತೀಗೆ ಮೋಸ
ಮಾಡ್ದ್ರೆ ಸಂತೋಸ! ೫

ಮೋಸ ನಂಗ್ ಮಾಡಂತ
ಬೇಡ್ತದ್ ಜಗತ್ತು!
ಅದಕೇನೆ ಯಿಡಿದೀನಿ
ಪಟ್ಟಾಗ್ ಇಕ್ಮತ್ತು!
ಈ ಮಾದ್ರಿ ಮೋಸ
ಆಗ್ದಣ್ಣ ದೋಸ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಧವತಿ
Next post ಪ್ರಾತಃ ಸ್ಮರಣೀಯ ಬಸವಣ್ಣನವರು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…