ಅತ್ತಿ ಸಸ್ತೆರ ಜಗಳಾ ಹತ್ತು ವರುಷವು ಆಗಿ| ಬಿಚ್ಚಿ ಹೇಳ್ಯಾಳ ಮಾತ ತನ್ನ ಮಗನ ಮುಂದ| ಸೂಯಿ ||೧|| ಬಿಚ್ಚೀನೆ ಹೇಳ್ಯಾಳ ಮಗನ ಮುಂದ ಈವ ಮಾತಾ| ಬಿಟ್ಟಬಿಡೊ ಮಗನೆ ನಿನ್ನ ಮಡಽದೀನ| ಸೂಯಿ...
ಮನುಷ್ಯನಿಗೆ ಕನಸುಗಳದ್ದೇ ಒಂದು ಸಾಮ್ರಾಜ್ಯ. ಪ್ರತಿಯೊಬ್ಬ ವ್ಯಕ್ತಿಗೂ ಹುಚ್ಚರಿಗೂ ಕೂಡ ಕನಸುಗಳು ಬಿದ್ದು ರೋಚಕ ಅನುಭವ ನೀಡಿದ ಸತ್ಯವನ್ನು ಅನೇಕ ವಿಜ್ಞಾನಿಗಳು ಕಂಡು ಹಿಡದು ವಿಧ ವಿಧವಾಗಿ ವಿಶ್ಲೇಶಿಸಿದ್ದಾರೆ. "ಸ್ವಪ್ನಗಳು ದೇಹಕ್ಕೆ ಒಳ್ಳೆಯ ಆರಾಮ...
ಕಾಣಲಿಹುದನು ಕಂಡೆನೆಲ್ಲ, ಕೊಳ್ಳಲಿಹುದನು ಕೊಂಡೆನೆಲ್ಲ, ಹಿರಿವುದೆಂದೀ ಸಂತೆ ಬಲ್ಲ ರಾರು ನೆರಸಿದನಲ್ಲದೆ? ೪ ಬಂದು ಪೋಪರು ಮೊತ್ತಮೊತ್ತದೆ- ಯಾರಿಗೇಕೇನೆಂದು ಗೊತ್ತದೆ? ಬಾಳದೊಡವೆಗೆ ಬೆಲೆಯ ತೆತ್ತುದೆ ನನ್ನ ಪಾಲಿನ ಕೌತುಕ. ೮ ಇಲ್ಲಿ ಇನ್ನಿರಲಿಷ್ಟವಿಲ್ಲ- ಕೆಲಸವಿಲ್ಲದಲಿರಲು...
ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೊಂದಿದ ರಾಜ್ಯ ಮತ್ತೊಂದಿಲ್ಲ. ಉಷ್ಣ ಪ್ರದೇಶಗಳಲ್ಲಿ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು ಅಲ್ಪಕಾಲ ಪ್ರಜ್ವಲಿಸಿ, ಒಡನೆಯೇ ಅಂಧಕಾರದಿಂದ ಆಚ್ಛಾದಿತವಾಯಿತು. ಪ್ರಕೃತದಲ್ಲಿ ಅದರ...
ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ ಕೈ ಗತಿಸಿದ್ದನ್ನ. ಮುಖಮಾಟ, ನಗು ಮಧುರವಾಗಿಸಿದ...