ನಾನು ನೀನಾಡಿಸುವ ಸೂತ್ರದ ಗೊಂಬೆ
ಆದರೆ ನಿನ್ನ ಮರೆತು ಬಾಳಿರುವೆ
ಎಲ್ಲಕ್ಕೂ ನಾನೆಂಬ ಅಹಂಕಾರದಲಿ
ನನ್ನ ಮೂಲಧಾಮವೆ ಮರೆತಿರುವೆ
ನಾವು ನಮ್ಮವರೆಲ್ಲ ಭವದ ಜಾತ್ರೆಯಲಿ
ಆದರೆ ಜಾತ್ರೆಯೇ ಆಗಿದೆ ನೈಜ ಪಾತ್ರೆ
ಮತ್ತೆ ಮತ್ತೆ ಕಷ್ಟ ನಷ್ಟಗಳ ಮರೆಸಲು
ನುಂಗುತ್ತಿರುವೆ ನಾ ಕಾಂಪೋಸ್ ಮಾತ್ರೆ
ಸಾಗರದ ಯಾವ ತೀರದಲ್ಲೂ ನಾನು
ಅಥವಾ ನೀರ ಮಧ್ಯದಲ್ಲಿ ಮುಳಗಿಹನೊ
ಏನೊಂದು ಅರಿಯದ ನಾನೋರ್‍ವ
ನಾನೇ ಈ ಜಗತ್ತು ಹೊತ್ತಂತೆ ಇಹನೊ
ಬೆಳಗು ಕತ್ತಲುಗಳ ಬಾಳ ರಾತ್ರಿ
ಮತ್ತೊಮ್ಮೆ ಸಾವು ಕಾಳರಾತ್ರಿ
ಸಾವನ್ನು ಮರೆತು ಬದುಕನ್ನೆ ಚಿತ್ರಿಸುವ
ನಾವು ಹೆಣೆಯುವವು ಹುಸಿಸ್ವಪ್ನಗಳ ರಾತ್ರಿ
ಹೌದೌದು ನಮಗೆ ಈಗಷ್ಟೇ ಎಚ್ಚರ
ಎಷ್ಟೊತ್ತಿನ ವರೆಗೂ ಈ ವಿಚಾರ
ಕಾಮ ಕ್ರೋಧ ಕ್ರಿಯೆ ಜಾಲ ಬೀಸಿದರಾಯ್ತು
ಮಾಣಿಕ್ಯ ವಿಠಲನಾಗದ ಗ್ರಹಚಾರ
*****