ಬದುಕು ಇದು ಎಂಥ ಬದುಕು ದೇವರ ಧ್ಯಾನಿಸಿದ ಈ ಬದುಕು ಬದುಕಿಗೆ ಇಲ್ಲಿ ಕಿಂಚಿತ್ತು ಮರುಕು ದೇವರ ಧ್ಯಾನಿಸದೆ ಕಾಯ ಮುರುಕು ನನ್ನೆದೆ ತುಂಬಲಿ ಕೃಷ್ಣನ ರೂಪ ನನ್ನ ಕರ್‍ಣದಲಿ ಅವನದೆ ಪದರೂಪ ಆ ಕಣ್ಣಗಳಲಿ ಪ್ರೀತಿಯ ಸಲ್ಲಾಪ ಜೀವ್ಹೆಯಲ್ಲಿರಲಿ ನಿತ್ಯ ಕೃ...

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****...

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ ಬುದ್ಧ ರಾಹುಲ ಬುದ್ಧ ಗೌತಮ ಬ...

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬ...

ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಬಯಲ ನಡುವಿನ ...

* ಹಲವರು ನಡೆದು ನಡೆದು ದಾರಿ. * ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ. * ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆ...

ಕನ್ನಡ ನಾಡು ಸುವರ್ಣ ಬೀಡು ಮುತ್ತು ಹರಿವ ಜಾಡು ಕನ್ನಡ ನಾಡಿನ ಚೆಲುವಿಗೆ ಒಲಿದು ಹಾಡುವೆ ನಾ ಹಾಡು – ಎದೆ ತುಂಬಿ ಬಂದ ಹಾಡು ಬೇಲೂರಿನ ಶಿಲೆ ಶಿಲ್ಪಿಗಳಾ ಕಲೆ ಸಮ್ಮೋಹನವಾಗಿ ಮಲೆನಾಡಿನ ಸಿರಿ ಜಲಪಾತದ ಝರಿ ಸಂಕೀರ್ತನವಾಗಿ ಹಾಡಿದೆ ಜುಳುಜುಳ...

೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ…. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ… ಹರ್ಷದಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವರದಿ ಮಾಡಿಕೊಂಡ...

ಯುಗದ ಹಾದಿಯಲ್ಲಿ ಜಗದ ಸುತ್ತ ಹೊನ್ನ ಕಿರಣ ಆವಾಗ ಮನವಾಗುವಮುನ್ನ ನಡೆ ಮುಂದೆ ನಡೆ ಮುಂದೆ ನಿಂತ ಮಗ್ಗುಲಲ್ಲಿ ನಿರ್ವಾಣ ಬೇಲಿಯ ಸುತ್ತ ಕೂಡಿತದೋ ಕೂಗಿತದೋ ನಿಮ್ಮದೆಯ ಮೌನ ಶೂನ್ಯವಿದೋ ಜೀವನ ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ ನಡೆ ಮುಂದೆ ನಡೆ ಮುಂ...

1...2223242526...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....