* ಹಲವರು ನಡೆದು ನಡೆದು ದಾರಿ.
* ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ.
* ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್ಲಿ ಬಳಸಿ.
* ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ೫,೫೦೦ ಕೇಜಿ ಚಿನ್ನವಿದೆ. ಅದನ್ನು ವಿವಿಧ ಬ್ಯಾಂಕಿನಲ್ಲಿಟ್ಟಿರುವರು. ವರ್ಷಕ್ಕೆ ೮೦ ಕೇಜಿ ಚಿನ್ನ ಬಡ್ಡಿಯಾಗಿ ಬರುವುದು.
* ಕ್ರಿಸ್ತ ಶಕ ೫ನೆಯ ಶತಮಾನದಲ್ಲಿ ಚೀನಾದ ತತ್ವಜ್ಞಾನಿಗಳಾದ ಗೊಂಗುಬನ್ (ಲುಬನ್) ಮೋದಿ (ಮೋಝಿ) ಅವರು ಗಾಳಿ ಪಟವನ್ನು ಕಂಡು ಹಿಡಿದರು.
* ಶುಂಠಿ ಸುವಾಸನೆ, ರುಚಿ, ಹಸಿವು ವೃದ್ಧಿಸುವುದು.
* ದಿನಾಂಕ ೦೨-೦೮-೧೭೧೫ರಂದು ಪ್ರಸಾದವೆಂದು ಲಡ್ಡು ನೀಡುವ ಸಂಪ್ರದಾಯವು ತಿರುಪತಿ ದೇವಸ್ಥಾನದಲ್ಲಿ ಮೊದಲಾಯಿತು. ಈ ಸಂಪ್ರದಾಯಕ್ಕೆ ಈಗ ೩೦೦ ವರ್ಷಗಳು ವರ್ಷಕ್ಕೆ ಬರೀ ಲಡ್ಡಿನಿಂದಲೇ ೧೯೦ ಕೋಟಿ ರೂಪಾಯಿ ಬರುತ್ತಿದೆ.
* ಕನ್ನಡಕ್ಕೊಬ್ಬರೇ ಕೈಲಾಸಂ ಅವರು ದಿನಾಂಕ ೨೯-೦೭-೧೮೮೫ರಂದು ಮೈಸೂರಿನಲ್ಲಿ ಹುಟ್ಟಿದರು. ಇವರ ತಂದೆ-ತಮಿಳುನಾಡಿನ ಜಸ್ಟೀಸ್ ತ್ಯಾಗರಾಜ ಪರಮಶಿವ ಅಯ್ಯರ್, ತಾಯಿ- ಕಮಲಮ್ಮ.
* ಒಣ ಶುಂಠಿ ಹಾಲಿನಲ್ಲಿ ಹಾಕಿ ಕುದಿಸಿ, ಬೆಲ್ಲದೊಂದಿಗೆ ಕಲಿಸಿ ನಿತ್ಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ಕಫ, ನಿವಾರಣೆಯಾಗುವುದು.
* ಕಳ್ಳಿ ಗಿಡಕ್ಕೆ ಎಲೆಗಳಿಲ್ಲ!
* ಸೋಡಿಯಂನಿಂದ ಕಂದು- ಕಬ್ಬಿಣದಿಂದ ಕೆಂಪು ಬಣ್ಣ ಪೊಟಾಸಿಯಂನಿಂದ ಹಳದಿ- ಮ್ಯಾಂಗನೀಸ್‌ನಿಂದ ಗುಲಾಬಿ ಬಣ್ಣ… ಹೀಗೆ ವಿವಿಧ ಬಣ್ಣಗಳಿಂದ ಶಿಲೆಗಳು ರೂಪುಗೊಳ್ಳಲಿದೆ.
* ಆಲ್ಬೇನಿಯಾದಲ್ಲಿ ಶೇಕಡ ೭೦% ರಷ್ಟು ಟರ್‍ಕಿಯಲ್ಲಿ ಶೇಕಡ ೯೮% ರಷ್ಟು ಮುಸ್ಲಿಮರಿದ್ದಾರೆ. ಇವು ಎರಡು ದೇಶಗಳೂ ಯುರೋಪ್‌ನಲ್ಲಿವೆ.
* ಜನಪ್ರಿಯ ಹಾಡುಗಾರ ಮನ್ನಾಡೆ ದಿನಾಂಕ ೦೧-೦೫-೧೯೧೯ ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಇವರ ಹೆಸರು- ಪ್ರಬೋಧ ಚಂದ್ರ ಅಡ್ಡ ಹೆಸರು- ಮನ್ನಾ ಎಂದು. ೩,೫೦೦ ಹಾಡುಗಳನ್ನು ಸಿನಿಮಾದಲ್ಲಿ ಹಾಡಿದ್ದಾರೆ. ೨೦೦೭ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. “ಜಿಮೊನೆರ್ ಜುಲ್ಲಾ ಘೋರೆ” ಎನ್ನುವುದು ಇವರ ಬಂಗಾಳಿ ಆತ್ಮಕಥೆ ಇದನ್ನು “ಮೆಮೊರೀಸ್ ಕಮ್ ಆಲೈವ್” ಎಂದು ಇಂಗ್ಲೀಷ್‌ಗೆ ಅನುವಾದಗೊಂಡಿದೆಯಲ್ಲದೆ ಹಿಂದಿ-ಮರಾಠಿಗೂ ಅನುವಾದವಾಗಿದೆ.
*****