ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು.
ಅಬ್ಬಾ! ಮೇಯರ್ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳು ಮಧ್ಯಾಹ್ನ ೨ ರಿಂದ ೪ ಗಂಟೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ… ಬೊಗಳದಂತೆ ಅದರ ಮಾಲೀಕರು ನೋಡಿಕೊಳ್ಳಬೇಕೆಂದು ಆದೇಶಿಸಿರುವರು! ಕಾರಣ- ಈ ವೇಳೆಯಲ್ಲಿ ಪಟ್ಟಣದ ಜನರು ವಿಶ್ರಾಂತಿಯಲ್ಲಿರುವರು. ಕಿರು ಸಕ್ಕರೆ ನಿದ್ರೆಯಲ್ಲಿರುವರು. ಅವರ ಭಂಗಕ್ಕೆ ನಾಯಿಯ ಬೊಗಳು ಅಡ್ಡಿಯಾಗಬಾರದು! ಭಪ್ಪರೆ… ಜನರ ಬಗ್ಗೆ ಇಷ್ಟು ಕಾಳಜಿಯೇ..?
ಈ ಸಮಯದಲ್ಲಿ ನಾಯಿ ಬೊಗಳಿದರೆ ಅದರ ಮಾಲೀಕರಿಗೆ ರೂ. ೩೫,೦೦೦ ಅಂದರೆ ೫೦೦ ಯೂರೊಗಳವರೆಗೆ ದಂಡ ವಿಧಿಸಲಾಗುವುದೆಂದು ಮೇಯರ್ ಆದೇಶ ನೀಡಿರುವರು.
-ಹೀಗೆ ಮಧ್ಯಾಹ್ನ ೨ ರಿಂದ ೪ ರವರೆಗಿನ ಹಗಲು ವಿರಾಮದ ಅವಧಿಯಲ್ಲಿ ಅಲ್ಲದೆ ರಾತ್ರಿ ವೇಳೆಯೂ ನಾಯಿಗಳು ಶಬ್ದ ಮಾಡದಂತೆ ನಾಯಿ ಸಾಕುವವರು ಎಚ್ಚರ ವಹಿಸಬೇಕೆಂದೂ ಆದೇಶದಲ್ಲಿ ಮೇಯರ್ ಸ್ಪಷ್ಟವಾಗಿ ಆಗ್ರಹಿಸಿರುವರು.
ಇಷ್ಟೇ ಅಲ್ಲದೇ ಸಾರ್‍ವಜನಿಕ ಸ್ಥಳಗಳಲ್ಲಿ ಯಾವುದೇ ಯಾರದೇ ನಾಯಿಗಳನ್ನು ಒಂಟಿಯಾಗಿ ಬಿಡಾಡಿಯಾಗಿ ಬಿಡಬಾರದು!! ಹೀಗೆ ಬಿಟ್ಟರೆ ಅದಕ್ಕೂ ಮಾಲೀಕರು ದಂಡ ಕಟ್ಟಬೇಕು. ನಾಯಿ ಮೂತ್ರ ಮಾಡಿದರೆ- ಮಲ ವಿಸರ್ಜಿಸಿದರೆ ಅದನ್ನು ನೀರು ಹಾಕಿ ಮಾಲೀಕರೇ ಸ್ವಚ್ಛಗೊಳಿಸಬೇಕು! ಇಲ್ಲವಾದರೆ ದಂಡ ಸ್ಥಳದಲ್ಲೇ ಕಟ್ಟಿ ನಾಯಿ ಒಯ್ಯಬೇಕು.
ಹೇಗಿದೆ ಮೇಯರ್ ಆದೇಶ?! ಈಗೀಗ ಇಟಲಿಯ ಜನರು ನಾಯಿಗಳನ್ನು ಸಾಕುವುದನ್ನು ಕೈಬಿಟ್ಟಿರುವರು. ನಾಯಿ ರುಚಿಗೆ ಅಂಟಿಕೊಂಡವರು ನಾಯಿ ಬಾಯಿಗೆ ಕ್ಯಾಪ್ ಹಾಕಿ ಭದ್ರಗೊಳಿಸಿ ಸಾಕುತ್ತಿರುವರು ಹೆಚ್ಚು ರಚ್ಚೆ ಹಿಡಿದು ಬೊಗಳಿದ ನಾಯಿಯನ್ನು ಕೊಂದು ತಿಂದು ತೃಪ್ತಿ ಪಟ್ಟುಕೊಂಡು ಬೀಗುವರು.
ಆಹಾ! ನಮ್ಮಲ್ಲಿ ಬೆಂಗಳೂರಿನಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್‍ಗ, ಬೆಳಗಾವಿಯಲ್ಲಿ ಮೇಯರ್‌ಗಳೆಲ್ಲ ಈ ರೀತಿ ಆದೇಶ ಹೊರಡಿಸಿದರೆ ಹೇಗೆ? ಕಾದು ನೋಡೋಣವಲ್ಲವೇ?
*****