ಸೆಂಡ್ ಎಂದರೇನು?

ಸೆಂಡ್ ಎಂದರೇನು?

ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು.

ಸ್ಮಾರ್ಟ್‌ಫೋನ್‌ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್‌ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ಇದನ್ನೇ ‘ಸೆಂಡ್’ ಎಂದು ಅಮೆರಿಕ ಹೆಸರಿಸಿರುವುದು!

ಆಪ್ ಬಳಸಿ ಇ-ಮೇಲ್ ಕಳುಹಿಸುವಾಗ ನೇರವಾಗಿ ವಿಳಾಸ ಪಟ್ಟಿಗೆ ಹೋಗಬಹುದು. ಇದು ಎಸ್‌ಎಂಎಸ್ ಕಳುಹಿಸಿದಷ್ಟೇ ಸರಳ.

ಈಗ ಸ್ಮಾರ್ಟ್‌ಫೋನಿನಲ್ಲಿ ಇ-ಮೇಲ್ ಕಳುಹಿಸಬೇಕೆಂದರೆ ಮೊದಲು ಇ ಮೇಲ್ ಸಂದೇಶ ಕಳುಹಿಸಬೇಕೋ ಅವರ ಇ-ಮೇಲ್ ವಿಳಾಸವನ್ನು ತುಂಬಬೇಕು. ಆದಾದ ಮೇಲೆ ಇ-ಮೇಲ್ ವಿಷಯವನ್ನು ಸಂಕ್ಷಿಪ್ತವಾಗಿ ಸಬ್ಜೆಕ್ಟ್ ಕಿಂಡಿಯಲ್ಲಿ ಬರೆಯಬೇಕು ಇವಿಷ್ಟೂ ಪ್ರಕ್ರಿಯೆಗಳನ್ನು ಪೂರೈಸಿದ ಮೇಲೆ ಸಂದೇಶ ಬರೆಯಬೇಕು.

ಆದರೆ ಸೆಂಡ್ ಮೂಲಕ ಇ-ಮೇಲ್ ಮಾಡುವಾಗ ಸಂದೇಶ ಬರೆದೊಡನೆ ನೇರವಾಗಿ ಇ-ಮೇಲ್ ವಿಳಾಸಗಳ ಪಟ್ಟಿಗೆ ಹೋಗಬಹುದು. ಈಗ ಫೋನ್ ನಂಬರ್‌ನೊಂದಿಗೆ ಜೋಡಿಸದ ಇ-ಮೇಲ್ ವಿಳಾಸಗಳಿದ್ದಲ್ಲಿ ಅಂತಹ ವಿಳಾಸಗಳನ್ನು ಈಗ ಹುಡುಕುವುದು ಕಷ್ಟ ಸಾಧ್ಯ.

ಆದರೆ ಸೆಂಡ್ ಆಪ್ ಇದ್ದಲ್ಲಿ ಅಂತಹ ಇ-ಮೇಲ್ ವಿಳಾಸಗಳನ್ನೂ ನೇರವಾಗಿ ಹುಡಕಬಹುದಾಗಿದೆ. ಇದಕ್ಕೆಂದೇ ಬೇರೆ ಅಪ್ಲಿಕೇಷನ್‌ನ ಅವಶ್ಯಕತೆ ಬೇಕಿಲ್ಲ. ಸೆಂಡ್ ಬಳಸಿದರೆ ಸಬ್ಜೆಕ್ಟ್ ಲೈನ್ ಮತ್ತು ಸಹಿಯ ಅಗತ್ಯ ಬೇಕಿಲ್ಲ. ಇ-ಮೇಲ್ ಸ್ವೀಕರಿಸುವವರೂ ಸೆಂಡ್ ಬಳಸುತ್ತಿದ್ದರೆ ಅವರು ಇ-ಮೇಲ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸೆಂಡ್ ನೀಡುವುದು.

ಈಗೀಗ ಈ ಅಪ್ಲಿಕೇಷನ್ ಐ-ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಮಾನಗಳಲ್ಲಿ ವಿಂಡೋಸ್ ಮತ್ತು ಆಂಡ್ರಾಯ್ಡ್ ತಂತ್ರಾಂಶ ಬಳಸುವ ಫೋನ್‌ಗಳಿಗೂ ಲಭ್ಯವಾಗಲಿದೆ. ತನ್ನದೇ ಕಾರಚರಣೆಯ ವ್ಯವಸ್ಥೆ ವಿಂಡೋಸ್ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆಪ್‌ನ್ನು ಒದಗಿಸುವ ಮೊತ್ತ ಮೊದಲೇ ತನ್ನ ಪ್ರತಿಸ್ಪರ್ಧಿ ಆಪಲ್ ಫೋನ್‌ಗಳಿಗೆ ಈ ಆಪ್ ಒದಗಿಸಿರುವ ಮೈಕ್ರೋಸಾಫ್ಟ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಬರು ಬರುತ್ತಾ ಏನೆಲ್ಲ ಹೊಚ್ಚ ಹೊಸತು ಕಂಡು ಹಿಡಿಯಬಹುದೋ ಕಾದು ನೋಡೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರೆಂಬರು ಮುಗಿದುವೆಂದು ಬವರಾಂ?
Next post ಇಸ್ಲಾಂ ಎಂದರೇನು?

ಸಣ್ಣ ಕತೆ

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…