ಆ ಊರು ಈ ಊರು ಯಾವೂರು ತಿರುಗಿದರು ಅಜ್ಜಪ್ಪ ಕುಲುಕುಲು ನಕ್ಕು ಬಂದಿ ಉಕ್ಕಡಗಾತ್ರ್ಯಾಗ ಉಕ್ಕಲಾಡಿದಿ ಅಜ್ಜ ಜ್ಞಾನ ಕಕ್ಕಡ ದೀಪ ಹಚ್ಚಿ ನಿಂದಿ ಮರುಳನೆಂದರು ಮರುಳ ನೀ ಭಾರಿ ಶಿವಶರಣ ಕೆಂಡ ಬೆಣ್ಣಿಯ ಉಂಡಿ ಮಾಡಿಬಿಟ್ಟಿ ಮುಳ್ಳು ಮಲ್ಲಿಗಿ ಮಾಡಿ ಕಲ್ಲ...

ಕುವೆಂಪು ಕಾವ್ಯದಲ್ಲಿ ಯಾವುದು ತೀವ್ರವಾಗಿ ಅಭಿವ್ಯಕ್ತಿಸಲ್ಪಟ್ಟ ವಸ್ತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರಿಸಲು ಕಷ್ಟವಾದೀತು. ಏಕೆಂದರೆ ಪ್ರಕೃತಿ ಕಾವ್ಯವನ್ನೆಂತೊ ಹಾಗೆಯೆ ಸಾಮಾಜಿಕ ಕಾವ್ಯವನ್ನು ಬರೆದ ಕವಿ ಅವರು. ಕುವೆಂಪು ಕಾವ್ಯವನ್ನು ಒತ್ತ...

ದಾರೀಲ್ ಆರೆ ಗುದ್ಲಿ ಯಿಡ್ದಿ ರತ್ನ ಅಳ್ಳ ತೋಡ್ತಾನೆ ಮೇಸ್ತ್ರಿ ನೋಡ್ತಾನೆ; ತೋಡ್ತಿದ್ದಂಗೆ ಏನೋ ನೋಡ್ತ ಆರೇ ವೂರಿ ನಿಲ್ತಾನೆ! ಬೆಪ್ಪಂಗ್ ನಿಲ್ತಾನೆ! ೧ ಎದುರಿನ್ ಬೇಲೀಲ್ ಬಿಟ್ಟಿದ್ ಊವು ರತ್ನನ್ ಕಣ್ಗೆ ಬೀಳ್ತಾದೆ ನೆಪ್ಗೊಳ್ ಏಳ್ತಾದೆ; ಊವಿನ್ ...

ಹರಿಗಡೆದ ಕೆರೆಯ ಕೊಳೆಗೊಂಡು ನಾರುವ ನೀರು ರಸವ ಹೀರುವ ಕಸದ ತವರು ಮನೆಯು. ಸಾವ-ಕುದುರೆಯ ದಂಡಿನೊಲು ಬರುವ ಸೊಳ್ಳೆಗಳ ಮೇವು-ಮೀಸಲಕಾಗಿ ಕಾದ ಬನವು. ಮೀಂಬುಲಿಗ ಬೆಳ್ಳಕ್ಕಿ ಬೇಟೆಯಾಡಲು ಅಡವಿ; ಮೀನಗಳ ಹುಟ್ಟು ಮನೆ; ಸುಡುವ ಕಡೆಯು; ಮೀನಬಲೆಗಾರರಾಡುಂ...

ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು. “ನಮಗೆ ಜ್ಞಾನೋದಯವ...

ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ *****...

ತಪ್ಪಿತು ತಾಗಿತು ಮತ್ತೊರಿ ಬಂದಿತು ನಿಲ್ಲೂ ಸಲ್ಲದಾದರೆ ನಿಲ್ಲದಾದಿತು ಸಿದ್ದಾರೋಡಿ ಸದ್ಗುರು ಉದ್ದಾರದೆ ನಿಮ್ಮಿಂದ್ ವಿದ್ಯಾ ಪಡೆದು ನಾನು ಉದ್ದಾರದೆ ನಿಮ್ಮಿಂದಾ ಅಂಗಾರಾದು ಬಸವಾ ಸಿದ್ದಾರೋಡ ಸದ್ಗುರು ಸಲುಽಗಾರೆ ದೇಸಕೆಲಾ ಬಂದಾರೂ ಸಂಗ್ಯಾತಾ ಸ...

ಬರೆದವರು: Thomas Hardy / Tess of the d’Urbervilles ಶಂಭುರಾಮಯ್ಯನು ರಸಿಕ. ಅವನಿಗೆ ಜರ್ದಾ ಎಂದರೆ ಪ್ರಾಣ. ಅಡಕೆಲೆ ಇಲ್ಲದಿದ್ದರೂ ಬಾಯಲ್ಲಿ ಒಂದು ಚೂರು ಜರ್ದಾ ಇರಬೇಕು. ಅದೀ ಜರ್ದಾನೇ ಅವನಿಗೆ ಮಲ್ಲಣ್ಣನ ಸ್ನೇಹವನ್ನು ಸಂಪಾದಿಸಿ ...

ಸಾಗರದ ಅಲೆ ಅಲೆಗಳೆಲ್ಲ ನಿನ್ನ ನಿನಾದವೆ ನುಡಿಸುತ್ತಿವೆ ಕೋಗಿಲೆ ತನ್ನ ಕೊರಳಿನ ದನಿಯಲಿ ನಿನ್ನ ರೂಪಗಳ ಗುನಿಗುನಿಸುತ್ತಿವೆ ತಾರೆಗಳೆಲ್ಲ ಕೃಷ್ಣ ಚವತ್ತಿಗೆ ಚಂದ್ರನ ಕಾಣಲು ಪರಿತಪಿಸುವಂತೆ ಲೋಕದ ಜನರ ಮಧ್ಯನಾನು ನಿನ್ನ ದರುಶನಕ್ಕಾಗಿ ನಾ ನಿತ್ಯ ನ...

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****...

1...1718192021...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....