Home / ಕವನ / ಕವಿತೆ

ಕವಿತೆ

ಬಾ ಗೆಳೆಯ ಬಾ ಹೃದಯದಂಗಳದಲ್ಲಿ ಚಿತ್ತಾರ ಬಿಡಿಸು ಬಾ ಬಾನಿನಂಗಳದಲ್ಲಿ ಚಂದಿರ ನೀನಾಗು ಬಾ ನೀ ಬರುವಿಯೆಂದು ಕಾಯುತಿರುವೆ ಕಾತುರದೆ ಇಹಪರವ ಮರೆತು ಹೃದಯ ಬಾಗಿಲು ತೆರೆದು ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ ಮುಗುಳ್ಳಗೆಯ ಮಲ್ಲಿಗೆ ಮುಡಿದು ಮೌನ ಬಂಗಾ...

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ. ಸರಳುಗಳಾಚೆಯ ಬೆಳಕು ಗೋಡೆಯ ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ. ನನ್ನ ಈ ಪ್ರೇಮದ ಅಲಾಪ ಗೀತೆಗಳ ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ ನೆತ್ತಿಗೆ ಸವರುತ್ತವ...

ಓ ಕನ್ನಡಿಗ ತಾಯ್ ನುಡಿಯ ಬೆನ್ನುಸಿರು ನೀನಾಗಿ ಜೀವ ನರನಾಡಿಗಳಲಿ ಧಮನಿಯಾಗಿ ಬಾನಾಡಿಯಾಗಿ ಕನ್ನಡ ಬಾವುಟ ಹಾರಿಸಿ ಮೇರು ಶಿಖರಕೆ ತಾಯ್ನಾಡ ಕೀರ್ತಿ ಹಬ್ಬಿಸು ಬಾ || ಹಸಿರು ಹೊದ್ದ ನೆಲಕೆ ಬರಗಾಲ ಬಂದಿಹುದು ಉಳಿವುದೆಂತು ಫಲವು ಹೆರರ ಹೊಲಗಳಲಿ ಮನುಕ...

ಕತ್ತಲವೆ ಇತ್ತು ಇನ್ನೂನು ದಾರುಣಾರಣ್ಯದಂತೆ ಎಲ್ಲ ಅದರಲ್ಲಿ ಅಲ್ಲಿ ಬದಲಿಲ್ಲ ಇಷ್ಟು ಅದರಾಶೆ ಕೂಡ ಇಲ್ಲ ಸತ್ತ ಶಾಶ್ವತಿಯ ಸಾಯದಿರುವ ನಿಃಸತ್ತ್ವ ಭೂತವಲ್ಲ! ಕರಿಕನಸು ಇರುವ ಬರಿಮನೆಯ ಕೆಳಗೆ ಹುಸಿಬದುಕು ಮಾಡುವವರು ಇಲ್ಲೆಂಬ ನಾಡಿಗೆತ್ತೇನೊ ಹೊರಟ ...

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು ಮರೆಯಾಗಿದೆ-ಎಲ್ಲ-ಮರೆಯಾಗಿದೆ! ೧ ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ, ಬೆಳಗಿಸಿದುವಂದು ದೇವಿಯ ವರದ ಮೂರುತಿಯ ; ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ- ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದ...

ಬರಿಯ ಮಣ್ಣ ಹಣತೆ ನಾನು ಅದರ ಜ್ಯೋತಿ ಪ್ರಕಾಶಕನು ನೀನು| ನಿನ್ನ ಕಾಂತಿಯ ಕರುಣೆ ಬೆಳಕಲಿ ಕಾಣಿಸುತ್ತಿರುವೆನು ನಾನು|| ನೀನು ಬೆಳೆಗುವವರೆಗೂ ನಾನು ಮಿನುಗುವೆನು| ನೀನು ಹೊಳೆಹೊಳೇದಂತೆ ನಾನು ಹೊಳೆಯುವೆನು| ನಿನ್ನಿಂದಲೆನ್ನ ತಮವ ತೊಳೆವೆನು|| ನಿನ್...

ಅಣುಬಾಂಬುಗಳು ಆಣೆ ಮಾಡಿದವು ಸಿಡಿಯುವುದಿಲ್ಲ ಎಂದು ಕಾವಿಯ ತೊಟ್ಟು ಕಾದುಕೂತವು ಗಡಿಯ ಒಳಗಡೆ ಬಂದು ಗಡಿಯೆಂಬುದು ಗಡಿಯಲ್ಲ ಅದು ಗುಡಿಯಣ್ಣ ಎಂದವು ರಾಗ ದ್ವೇಷಗಳು ಸಾಗರ ಸೇರಲಿ ನಮಗದು ಮಡಿಯಣ್ಣ ಎಂದವು ಅಣುಬಾಂಬುಗಳು ಅಗೋಚರವಾಗಿವೆ ಮಾನವ ಬಿಂಬದಲಿ...

ಅದು ಕೋಟೆಯಂತೆ ಕಟ್ಟಿದ ಗೋಡೆ ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ ಗೋಡೆಯಾಚೆಗೆ ಸ್ವಚ್ಛಂದ ಪಾರಿವಾಳ ಗೋಡೆಗಳ ಮಧ್ಯ ನಾನು ಸಮಾಧಿ. ಬದುಕು ಕಬ್ಬಿಣದ ಕಠಿಣ ಹಾದಿ ಹಿಮಾಲಯದ ಹಿಮನೀರು ನಾನಾದರೆ ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು ಕಿಲುಬುಗಟ್ಟಿದ ಸಂ...

ನಿಂತಿವೆ ಬಿಂಬಗಳು ತಿರುವು ತಿರುವುಗಳಲ್ಲಿ ನೆಟ್ಟ ನೋಟಗಳಲ್ಲಿ ಯುಗ ಯುಗಗಳಲ್ಲೂ ಯಾರಿಗೊ ಕಾಯುತ್ತಿವೆ ದಾರಿ ನೋಡುತ್ತಿವೆ ಬರಬೇಕಾದವರಿನ್ನೂ ಬಂದಿಲ್ಲವೇ ಯಾವ ದೇವರ ಶಾಪ ಇವು ಹೀಗೇ ಇರಬೇಕೆ ಬಿಡುಗಣ್ಣುಗಳ ಕ್ಷಣವೂ ಮುಚ್ಚಲಾರವೇ ಮುಚ್ಚಿದರೆ ಮರೆವಿನ...

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...