ಗುರುವೇ ನಿನ್ನ ಪಾದ ಧೂಳಿನ
ಕಣದ ಕಣ ನಾನು|
ಕರುಣೆ ತೋರುತಿರು ನೀನು
ಪರಿಪೂರ್ಣನಾಗುವವರೆಗೂ ನಾನು||
ದೀನ ನಾನು ನಿನ್ನ ಅಧೀನನು
ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು |
ನಿನ್ನನೇ ನಂಬಿಹೆನು ನಾನು
ಮಹಾ ಸಾಗರನು ನೀನು
ಆ ಸಾಗರದಲೊಂದು ಹನಿಯಾಗಿಸಿ
ಎನ್ನ ಬೆರೆಸಿಕೋ ನೀನು||
ನಿನ್ನ ಶಿಷ್ಯರಂತೆಯೇ ಎನ್ನ
ಪರೀಕ್ಷಿಸಿ ಸ್ವೀಕರಿಸು ಪ್ರಭುವೆ|
ನಿನ್ನ ಫ್ರಭಾವವನು ಬೀರಿ
ನಿನ್ನ ಭಕ್ತವೃಂದವನು ಸೇರಿ
ಧನ್ಯನೆಂದೆನಿಸುವೆ ಗುರುವೆ|
ಜೀವನದಲಿ ಇದಕಿಂತ ಬೇರೆ
ಭಾಗ್ಯವೇನಿದೆ ಗುರುವೆ?||
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರಹಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮಹಿ ಶ್ರೀ ಗುರವೇ ನಮಃ||
*****