Home / ಕವನ / ಕವಿತೆ

ಕವಿತೆ

ಅಂತರಿಕ್ಷಕ ತನ್ನ ಗುರಿಯಿಟ್ಟು ಸಾಗಿಹುದು ಗರುಡ ಪಕ್ಷಿಯು ಅದರ ಗಾನವಿಕಲಿತ ಹೃದಯ ನಾಗಭೀಷಣವಿಹುದು, ತಾಳದೆಯೆ ಕೂಗಿಹುದು ಸರ್‍ಪದಂಶವು ಹೆಚ್ಚಿ. ಗರುಡವಾಹನನಭಯ- ವೆಲ್ಲಿ ಕೇಳಿಸದೀಗ ಇಂತು ಪೀಯೂಷಮಯ- ವಾದ ನಿರ್‍ಭಯ ಪಯಣ ನಂಜೇರಿದಂತಿರಲು ಮಂಜುಮುಸುಕ...

ಅಂತರಾತ್ಮದ ದೀಪ ಎತ್ತುವೆ ಕಣ್ಣು ಕರ್‍ಪುರ ಬೆಳಗುವೆ ಜ್ಞಾನ ಕೆಂಡಕೆ ದೇಹ ಗುಗ್ಗುಳ ಸುಟ್ಟು ಧೂಪವ ಹಾಕುವೆ ಉಸಿರು ಉಸಿರಿಗೆ ಶಿವನ ನೆನಪಿನ ಊದಬತ್ತಿಯ ಬೆಳಗುವೆ ವಿಮಲ ಮಾನಸ ಜ್ಞಾನ ಅಗ್ನಿಯ ತುಪ್ಪದಾರತಿ ಸಲಿಸುವೆ ಮಾತು ಮಲ್ಲಿಗಿಯಾಗಿ ಸುರಿಯುವೆ ಹ...

ಯಿಂದೆ ಲೋಟ್ದಾಗ್ ನೀರ್ ಇಟ್ಕೊಂಡಿ ‘ಚೂ ಮಂತ್ರಾ’ಂದ ಏಸು! ಇಟ್ ನೀರೆಲ್ಲ ಯೆಂಡ್ ಆಗೋಯ್ತು! ಅದು ಕೆಲಸ! ಬೇಸು! ೧ ಮಾತ್ಗೇಳ್ತೀನಿ- ಯಿಂದಿನ್ ಕಾಲ್ದಾಗ್ ಎಂತೆಂತೋರ್ ಇದ್ರಂತ! ಈಗ್ಲು ಔರೆ-ದೊಡ್ ಪಡಕಾನೆ ಇಟ್ಟಾಕ್ಸ್ನೇನೆ ಬಂತ! ೨ ಕಾಲಿ ನೀರ್‍ನ ಯೆಂ...

ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ ಹೋಗಲಿ, ಉರುವಲಿಲ್ಲದಲ...

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ ಹಾರುವ ಹಕ್ಕಿ ಆಡುವ ಕೀಟ ಹರಿಯುವ ನದಿ ಹರಿಯುತ್ತಲೆ ಇದೆ ಗಾಳಿಗೆ ಎಲ...

ಕದ್ದಿಂಗಳಿನಿರುಳು: ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು, ದೆಸೆಯಳಿಯದೆ ನಿಲಲು ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು, ಭೂತ ಭವಿಷ್ಯವನು ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು, ಸೆರೆಬಿದ್ದಿಹ ಕಾಲ ಹುಯಿಲಿಡುವುದೊ ಎನೆ ಜಿರ್ರನೆ ...

ಜೋತು ಬಿದ್ದಿದೆ ಮೇಲೆ ಬಣ್ಣ ಬಣ್ಣದ ಕವಚ ಸತ್ತ ಮೌಲ್ಯಗಳ ಹೆಣಭಾರ. ಹೊತ್ತು ಸಾಗಿರುವೆ ಬಹುದೂರ ಹೀಗೇಯೇ ಮರುಮಾತಿಲ್ಲದೆ. ಸನಾತನ ಬೇರುಗಳು ಬಿಳಲುಗಳು ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು ಹೊತ್ತಿರುವ ಕವಚಕ್ಕೆ ಮೆತ್ತಿದೆ ಬೆವರಿನ ಜಿಡ್ಡು ಅಂಟು...

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲನೆಮ್ಮೆವು- ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್...

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ ಮಿಂದೆ...

ಆನೆ, ಮುದ್ದಾನೆ, ಮದ್ದಾನೆ ಬಂದಿತು ತಾನೆ, ಮುದಿಯಾನೆ! ಕಳೆದಿರಲು ಯೌವ್ವನದ ಹೊರಮಿಂಚು ಅನುದಿನವು ಸಿಂಹಗಳಿಗಿಂತು ಕೊನೆವರೆಗಂಜು- ತುತ್ತಮಾಂಗದ ಮುತ್ತು ಮುಗಿದಿರಲು, ಹಿರಿಬೇನೆ ಮುದವ ಹದಗೆಡಿಸಿರಲು, ಕೊಳದ ಬಳಿ ಬಂದಾನೆ ಸಾಯ್ವ ಪಣ ತೊಟ್ಟಿತದು ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...