Home / ಮನೆ ತುಂಬಿದ ಬೆಳಕು

Browsing Tag: ಮನೆ ತುಂಬಿದ ಬೆಳಕು

೧ ತಾಯಿ ಹೊರಳಿದಳು ನರಳಿ ಸುಪ್ತ ಮನಸಿನಲೇನೊ ತುಂಬ ಕನಸು; ಹಗಲೆಲ್ಲ ದುಡಿದು ದಣಿದಿಹ ದೇಹ- ಯಾವಾಗ ನೆಲವ ಕಂಡೇನೆಂದು ತೂಗಿ ಮಲಗಿರಬೇಕು. ಮೈ ಮುದುರಿ ಮಲಗಿರುವ ಎಲುಬು ಹಂದರ ಗೂಡು ಮುರಿದು ಬಿದ್ದಿಹ ಹಳೆಯ ಕೊಡೆಯ ಪಾಡು; ಆದರೂ….ಆದರೂ&#8230...

ತಿಪ್ಪೆಗುಂಡಿಯ ಬಿಸಿಯ ಬೂದಿಯಲಿ ಮೈಮುದುರಿ ಮಲಗಿ ಜೋಂಪಿಸುತಿರುವ ಗಂಡು ನಾಯಿ; ಹಸಿದು ಕುಸಿದಿಹ ಹೊಟ್ಟೆಗೊಂದು ತುಕಡಿಯ ಬಯಸಿ ಮೆಲ್ಲನೆದ್ದಿತು; ಅಂತೆ ಮೈಯ ಮಣಿಸಿತು ನಿಂತು ತೆರೆದು ಬಾಯಿ. ಲಟಪಟನೆ ಕಿವಿಯ ಬಾರಿಸಿ ದೂಳು ಜಾಡಿಸಿತು ಹೊರಟಿತು ಸಂದಿ...

ನೀನೆನ್ನ ಹೊಸತಿಲಿಗೆ ದುಃಖದೊಲು ಬಂದರೂ ನನ್ನ ತೋಳ್-ತಳ್ಕೆಯಲಿ ಹಿಡಿಯುವಾಸೆ; ನಿನ್ನ ಶ್ರೀಮುಖದಲ್ಲಿ ಇರುಳ ಕುರುಳಿನ ಛಾಯೆ ಇಳಿದರೂ ನಿನ್ನನ್ನು ನೋಡುವಾಸೆ. ನಿನ್ನ ತೋಳಿನ ಬಲದ ಮರಣ ವಜ್ರಾಘಾತ ಬಂದರೂ ಈ ಬಾಳು ಪ್ರಜ್ವಲಿಸಲಿ; ಎದೆಯ ಒಳಗೂಡಿನಲಿ ನೋ...

೧ ಗಡಿಯಾರದಲಿ ಗಂಟೆ ಹತ್ತಾಯಿತು! ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ ಕೈಯ ಕುಲುಕಿಸಿ ಕಾಲ ಗೆಲುವಾಯಿತು; ಕುಳಿತಿರುವ ಕೋಣೆಯಲಿ ಕಂದೀಲ ದೀಪವದು ಕುರುಡು ಕುರುಡಾಗೆನಿತೊ ಉರಿಯುತ್ತಿದೆ. ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ ನೋಡಬೇಕೆ...

ಇಂದು ಹುಣ್ಣಿಮೆಯಿರುಳು ಚೆಂಗುಲಾಬಿಯ ಅರಳು ಅಳುವ ಮಗುವಿನ ಮೊಗದಿ ಬಂತು ನಲಿವು; ಬನ ಬಾನು ಮುಗಿಲಿನಲಿ ಚೆಲ್ಲುವರಿದಿದೆ ಹಿಗ್ಗು ಚಂದ್ರ ರೋಹಿಣಿ ಚಿಕ್ಕೆ ನಕ್ಕ ನಗುವು. ಬಾನವರ ಊರಿನಲಿ ಇಂದು ಎಂತಹ ಹಬ್ಬ ಮನೆಮನೆಯ ಹೊಸತಿಲಲಿ ದೀಪಾವಳಿ; ಅವರ ಸುವಿಶ...

ಮಧುವನದ ಮಂದಾರ ಸೌಗಂಧ ಶ್ರೀಪೂರ ಇಳಿಸಿದೆಯ ನನ್ನೆದೆಯ ಮೌನಭಾರ; ಸುಖದಲ್ಲಿ ಮರೆತಿರಲು ದುಃಖದಲಿ ನಕ್ಕಿರಲು ಹೊರಳಿ ನೋಡಿದರಿತ್ತ ಚಂದ್ರತಾರಾ. ಹಗಲುಗನಸಿನ ಚಿತ್ರ ಕುರುಳ ಸುರುಳಿಯ ಪತ್ರ ಬರೆದು ಮುಗಿಸಿವೇಸೊ ರಾಶಿರಾಶಿ; ಪ್ರೀತಿಪೂರದ ತೀರ್ಥಯಾತ್ರೆ...

ಜೊತೆಯಿರದ ಈ ಬಾಳ ಹಾಳು ಗೋಳಿನ ಕಥೆಯ ದಾರಿ ಕೊರಕಲುಗಳಲಿ ಸಾಗುತಿರಲು; ಹಗಲಿರುಳು ಉರುಳಿದರು ಹೊಸತನವೆ ಬರದಿರಲು ಏನೊ ಎಂತೋ ಜೀವ ನರಳುತಿರಲು. ನೂರಾರು ಹರದಾರಿ ತಿರುತಿರುಗಿ ಅತಿಥಿಯೊಲು ನಿನ್ನ ಮನೆ ಹೊಸತಿಲಲಿ ಬಂದು ನಿಲಲು; ತಂಗಾಳಿ ಸೋಕಿದರೆ ಹಾರ...

೧ ಥೂ….ಸೂಳೆ, ಹೇಸಿ ಪಾಪದ ಹೆಣ್ಣು ಇವಳ ಬಾಳೇನಿಹುದು ಹಾಳು ಮಣ್ಣು ಊರ ಕೇರಿಯ ಹೊಲಸು ಕೊಳಚೆಯಿಹ ಬೀದಿಯಲಿ ದೇಹದಂಗಡಿಯಿಟ್ಟು ಯಜಮಾನಿಕೆ ಗರತಿಯರ ಎದುರಿನಲಿ ಎದೆಗಾರಿಕೆ ಎಂದು ಜನ ಕಂಡಂತೆ, ರಾಮ ಸೀತೆಯರಂತೆ ಬಾಳಿ ಬದುಕುವ ತೆರದಿ ನುಡಿವ ಸೊಲ...

೧ ಧೋ….ಧೋ….ಧೋ… ಮಳೆ ಸುರಿದಿದೆ ಇಳೆಗಿಳಿದಿದೆ ಮುಗಿಲೆಲ್ಲವು ಕರಗಿದೆ. ನಾಡು ಕಾಡು ನೀರಾಗಿದೆ ದಾರಿ ಕಾಣದಾಗಿದೆ; ಜಗದ ನಗುವು ನೋವು ನಲಿವು ಇದರ ನಾದಲೀಲೆಯಲ್ಲಿ ಏಕತಾನವಾಗಿದೆ ಗಾಳಿ ಶೃತಿಯ ಹಿಡಿದಿದೆ. ೨ ಹಳೆಯ ಕೊಳೆತ ಕಡ್ಡ...

೧ ಹೊತ್ತು ಮುಳುಗಿತು ಕತ್ತಲಾಯಿತು ಚಿತ್ತ ಬಾಗಿಲಿಗೋಡಿತು; ಒಂದೆ ದಿನದಲಿ ಬರುವೆನೆಂದರು ಮೂರು ದಿನ ಕಳೆದಾಯಿತು. ಎದೆಯ ಹಂಬಲ ತುಂಬಿ ನಿಂತಿದೆ ನಿಮಿಷ ನಿಮಿಷವನೆಣಿಸಿದೆ ಕರುಳು ಕರುಳಿಗು ಶಾಂತಿ ಹೇಳಿದೆ ಜೀವ ಕಳವಳಗೊಂಡಿದೆ ಅವರ ಪ್ರೀತಿಯ ಹೂವು ಹೆ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...