Home / ಕವನ / ಕವಿತೆ / ನಾಗರಿಕ ಅವತಾರಿ

ನಾಗರಿಕ ಅವತಾರಿ

೧
ತಾಯಿ ಹೊರಳಿದಳು ನರಳಿ ಸುಪ್ತ ಮನಸಿನಲೇನೊ ತುಂಬ ಕನಸು;
ಹಗಲೆಲ್ಲ ದುಡಿದು ದಣಿದಿಹ ದೇಹ-
ಯಾವಾಗ ನೆಲವ ಕಂಡೇನೆಂದು ತೂಗಿ ಮಲಗಿರಬೇಕು.
ಮೈ ಮುದುರಿ ಮಲಗಿರುವ ಎಲುಬು ಹಂದರ ಗೂಡು
ಮುರಿದು ಬಿದ್ದಿಹ ಹಳೆಯ ಕೊಡೆಯ ಪಾಡು;
ಆದರೂ….ಆದರೂ….
ಬದುಕಬೇಕೆನುವಾಸೆ ಬಹಳ ಹಿರಿದು!
ಮಲಗುವಾಗಲೆ ತಾಯಿ-
ಹಸಿದ ಕೂಸಿಗೆ ಮೊಲೆಯನುಣಿಸಿದಳು
ಚಪ್ಪಡಿಸಿ ತೂಗಿದಳು ತೊಟ್ಟಿಲಲ್ಲಿ;
ಇಷ್ಟರಲ್ಲಿಯೆ ಎಣ್ಣೆ ತೀರಿ ಆರೇನೆಂದು
ಕಣ್ಣಿನಲ್ಲಿಯೆ ಜೀವ ಹಿಡಿದಿತ್ತು
ಕುರುಡಿ ಚಿಮಣಿಯ ದೀಪ ಜಗುಲಿಯಲ್ಲಿ.
೨
ನೂರು ನೋವಿನ ಸಂತೆ ಜಗದ ಗುಜುಗುಜು ಗುಲ್ಲು
ಇರುಳಿನಲಿ ಮೈಮರೆತು ಮಲಗಿ ಬಿಟ್ಟಿಹವೇನೊ
ಗೂಗೆ ಘೋಕರಿಸಿ ಕೊನೆಯ ಸಲ ಎಚ್ಚರಿಸಿ
ಹಾರಿ ಹೋಯಿತು ದೂರ ಯಾವ ಕಡೆಗೊ,
ಗೋಪುರದ ಗಡಿಯಾರ ನಿಂತು?….ಹೊಡೆಯಿತು ಗಂಟೆ
ತಾಸು ತಾಸಿತು ವ್ಯರ್ಥ ಸುತ್ತಿ ತಿರುಗುವ ಚಿಂತೆ
ಅಂತೆ ತಿರುಗಿತು ಪಾಪ
ನಾಗರಿಕ ಅವತಾರಿಗಂಜಿದಂತೆ!
ಮೈಲು ಮೈಲುಗಳಾಚೆ ನೂರ್ಕೋಟಿ ನಕ್ಷತ್ರ
ಪಿಳಪಿಳನೆ ನೋಡುತಿವೆ ಕಣ್ಣ ಬಿಟ್ಟು.
೩
ತೊಟ್ಟಿಲಲಿ ಕೂಸು – ಕಂದಮ್ಮ!
ಚಟ್ಟನೆ ಚೀರಿ ಬೋರಿಟ್ಟಿತು;
ಬಳಲಿ ಮಲಗಿದ ತಾಯಿ ಸಿಡಿದೆದ್ದು ನೋಡಿದಳು
ಸಾವು-ಬದುಕಿನ ಮೇಲೆ ಹೊರಳಾಡಿತು.
ಹೊಟ್ಟೆಯಲಿ ಕರುಳುರಿದು ಸುಡುವ ಬೆಂಕಿ
ಮೈಯೆಲ್ಲ ಸುಟ್ಟ ಅರಳಂತಾಗಿ
ಆ ತಾಯಿ ಹಲುಬಿದಳು ಬಿಕ್ಕಿ ಬಿಕ್ಕಿ
****
ದೂರ ಎಲ್ಲಿಯೊ ಪ್ಯಾಸಿಫಿಕದಲ್ಲಿ-
ಜಲಜನಕ ಬಾಂಬು ಹಾರಿ… ಹಾಹಾಕಾರ
ತಾಮ್-ಕರುಳು ಸತ್ತ ಮಗುವನ್ನಪ್ಪಿ ಚೀರುತಿತ್ತು
ಖಾಲಿ ತೊಟ್ಟಿಲು ತಾನೆ ತೂಗುತಿತ್ತು.
*****
Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...