ಭಗವಿದ್ದಿತು

ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿಂಗವಿದ್ದರೂ ಲೈಂಗಿಕತೆಯಿರಲಿಲ್ಲ ಫ್ರಾಯ್ಡನು ಬರುವ ವರೆಗೆ...

ಉಂಡುಂಡು ಮಲಗೋ ನಂಜುಂಡ ಅಯ್ಯ

ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ...

ಕಿರುನಗೆ ಹೂನಗೆ

ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ...

ಕಷ್ಟ ದೈವವೆ ನನ್ನ

ಕಷ್ಟ ದೈವವೆ ನನ್ನಿಷ್ಟ ದೈವವೆಂದು ಬದುಕ ಸ್ವೀಕರಿಸಿಕೊಂಡೆ ಬದುಕು ಅನಿಷ್ಟಗಳ ಸರಮಾಲೆಯಾಯಿತು ಬೆಳೆ ನಷ್ಟವಾಯಿತು ಕಳೆ ತುಂಬಿ ಹೋಯಿತು ಬರ ಬಂತು ಮಳೆ ಬಂತು ನನ್ನಿಳೆಯಲೆಲ್ಲವೂ ನಾಶವಾಯಿತು ದುಡಿತಕೆ ಮೈಯೊಗ್ಗಿತು ಬೆನ್ನು ಬಗ್ಗಿತು ಕೈ...

ಈ ಬ್ರಹ್ಮನಿಗೆಂಥ ಹಸಿವು

ಅಹಂ ಬ್ರಹ್ಮ ಈ ಬ್ರಹ್ಮನಿಗೆಂಥ ಹಸಿವು ಇದು ಹಿಂಗಿಸಲಾರದ ಹಸಿವು ಅನ್ನದ ಹಸಿವೀ ಬ್ರಹ್ಮನಿಗೆ ಅನ್ನ ದೊರೆತೊಡೆ ನೀರಿನ ಹಸಿವು ನೀರು ದೊರೆತೊಡೆ ಕಾಮದ ಹಸಿವು ಕಾಮ ದೊರೆತೊಡೆ ಪ್ರೇಮದ ಹಸಿವು ಅಹಂ ಬ್ರಹ್ಮ...

ಈ ಗಿಣಿಯೆ

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ...

ಇದು ಎಂಥ ಶಿಶಿರ

ಇದು ಎಂಥ ಶಿಶಿರ! ಇದು ಎಂಥ ಶಿಶಿರ! ಹಕ್ಕಿಗಳ ಸದ್ದಿಲ್ಲ ಮರಗಳಲಿ ಎಲೆಯಿಲ್ಲ ಹಿಮ ಹೊದ್ದು ಮಲಗಿದೆ ಸರ್‍ವತ್ರ ಭೂಮಿ ಬೀದಿಯಲಿ ಜನವಿಲ್ಲ ಮಾತೆ ಕೇಳಿಸುವುದಿಲ್ಲ ನಗೆಯಿಲ್ಲ ಸದ್ದಿಲ್ಲ ಎಲ್ಲೆಲ್ಲೂ ಮೌನ ಉತ್ತರ ಧ್ರುವದಿಂದ...

ಎಲ್ಲಾ ಚಂದದ ಕನಸುಗಳೂ

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು...

ಬುದ್ಧನ ಮಾಡಿ

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ...

ಯಾವ ದೇವರ

ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ ಯಾವ ದೇವರ...