ಒಳಗಿನವನು

ಇವನೊಬ್ಬನಿದ್ದಾನಲ್ಲಾ ಈ ಒಳಗಿನವನು? ಅಬ್ಬಬ್ಬಾ ಇವನದೆಂತಾ ಮಂಗನಾಟ? ನನ್ನ ಬೊಗಸೆಯನ್ನೂ ಮೀರಿ ನೂರು ನೋಟ! ಪಾತಾಳದಲ್ಲೇ ಕುಬ್ಜಳಾದಾಗ ಮೇಲೆತ್ತಿ ಗತ್ತಿನಿಂದ ಶಿಖರವೇರಿ ನಿಂತಾಗ ಕೆಳಕ್ಕೊತ್ತಿ, ತಪ್ಪುಗಳೇ ಅಪರಾಧವೆಂಬಂತೆ ಚುಚ್ಚಿ ದೌರ್ಬಲ್ಯಗಳ ಸಧ್ಯ ಹರಾಜಿಗಿಡದೇ ಮುಚ್ಚಿ...

ರಂಗವಲ್ಲಿ

ತಿಕ್ಕಿ ತೀಡಿ ಕಸಗುಡಿಸಿ ನೀರೆರೆಚಿ ಹದ ಮಾಡಿ ಮಣ್ಣು ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು ತೋರು-ಹೆಬ್ಬೆರಳಿನ ಮಧ್ಯೆ ನಾಜೂಕು ಬೊಟ್ಟು! ಚುಕ್ಕೆ ಚುಕ್ಕೆಗಳ ಎಣಿಸಿ ಸಮಾನಾಂತರದಿ ಬಿಡಿಸಿ ಆಚೀಚೆ ರೇಖೆ ಜಾರದಂತೆ ಒರೆಸಿ ಒಂದಿನಿತೂ...

ಬದುಕೆಂದರೆ ಇಲ್ಲಿ…

ಅನಿಧಿಕೃತ ಸಮರದಲಿ ಜೀವ ವಿಶೇಷಗಳ ತಾಣ ಕ್ಷಣದಲ್ಲಾಯ್ತು ಮಸಣ ಕುಡಿಯೊಡೆದು ಚಿಗುರಿದ ನಂದನವನವೆಲ್ಲಾ ನಿಮಿಷದಲಿ ಮರುಭೂಮಿಯಾಯ್ತಲ್ಲಾ! ಗಡಿಮೀರಿ ಒಳನುಗ್ಗಿದ್ದು ಅವರ ತಪ್ಪೊ? ಬಿಟ್ಟಿದ್ದು ಇವರ ತಪ್ಪೊ? ಬೇಕಿಲ್ಲ ತಪ್ಪುಸರಿಗಳ ಅಳತೆ ರಾಜಕೀಯ ಕುತಂತ್ರದಲಿ ತಕ್ಕಡಿ...

ಕ್ಷಿತಿಜದೆಡೆಗೆ

ಮುಗಿದುಹೋಯ್ತು ಬಂದ ಕೆಲಸ ಇನ್ನು ಹೊರಡಬೇಕು ದಿಗಂತದೆಡೆಗೆ ಪಯಣ ಮುಗಿದು ಹೋದ ಬಾಳಿಗರ್ಥ ಹುಡುಕಿ ವ್ಯರ್ಥವಾದ ಮೇಲೆ ಹೋಗಿ ಸೇರುವ ಕಡಲ ತಡಿಯ ಕ್ಷಿತಿಜದಂಚಿನ ಬೆಳ್ಳಿ ರೇಖೆಯ ಮೇಲೆ ಬಾನಿರಬಹುದು ಶೂನ್ಯ ಶೂನ್ಯ ಶೂನ್ಯವ...

ಕಳೆ

ಅವರು ಜಗಿದುಗಿದ ತ್ಯಾಜ್ಯ ಈ ಬೀಜ! ಅಂದು ಎಲ್ಲಿಂದಲೋ ಹಾರಿ ಬಂದು ನಮ್ಮವರಂತೆಯೇ ಮುಖವಾಡ ತೊಟ್ಟು ನಮ್ಮವರೊಂದಿಗೇ ಮನೆ ಹೊಕ್ಕು ನಮ್ಮಲ್ಲೇ ತಳವೂರಿ ನಮ್ಮದೇ ಆಗಿ ನಮ್ಮವರ ಜೊತೆಗೂಡಿ ತಾನೂ ನಮ್ಮದೇ ಹಿತ್ತಲಲಿ ಬೇರೂರಿ...

ಅವಶೇಷ

ಹುಡುಕುತ್ತಿದ್ದೇನೆ ನಾನಿನ್ನೂ ಹುಡುಕುತ್ತಿದ್ದೇನೆ! ಅಂದೆಂದೋ ಹೊಸಹಾದಿ ಸಿಕ್ಕ ಸಂಭ್ರಮದಲಿ ನಾ ಧಡಕ್ಕನೆ ಕಿತ್ತು ಹೊತ್ತು ತಂದ ತಾಯಿಬೇರಿನ ಶೇಷ ಭೂಮಿಯಾಳದಲ್ಲೇ ಉಳಿದು ಹೋದ ನಿಶ್ಯೇಷವಲ್ಲದ ಅವಶೇಷ! ನನ್ನ ಸಶೇಷ ಕನಸುಗಳು ವಿಶೇಷ ಕಲ್ಪನೆಗಳು ಶೇಷವಾಗಿಯೇ...

ಕಾಡು ಹಕ್ಕಿಯ ಹಾಡು

ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇಲ್ಲ ಬದಲಿಗೆ ಹಾಡಾಗುತ್ತವಲ್ಲಾ! ಆಳದಲ್ಲೆಲ್ಲೋ...

ಸಹಸ್ರಾಕ್ಷಿ ಕನಸು

ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ...

ಜಂಕ್ಷನ್

ಎಲ್ಲಿಂದೆಲ್ಲಿಂದಲೋ ತೇಕುತ್ತಾ ಬಂದು ನಿಲ್ಲುವ ಗಾಡಿ ಮತ್ತೆಲ್ಲಿಗೋ ಅದರ ಪಯಣ ಯಾರೋ ಇಳಿಯುವವರು ಮತ್ತಿನ್ಯಾರೋ ಏರುವವರು ಹಸಿದವರು, ಬಾಯಾರಿದವರು. ಕೊಳ್ಳುವವರು, ಮಾರುವವರು ಗಜಿಬಿಜಿ ಗೊಂದಲ ಸತ್ತವನಿಗೆ ಫಕ್ಕನೆ ಜೀವ ಬಂದಂತೆ ಎಲ್ಲಾ! ಗಾಡಿ ಹೊಟ್ಟೆಗೊಂದಿಷ್ಟು...

ಒಂದಿಷ್ಟು ಹಸಿ ಮಣ್ಣು

ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ...