ಕಳೆ

ಅವರು ಜಗಿದುಗಿದ
ತ್ಯಾಜ್ಯ
ಈ ಬೀಜ!

ಅಂದು ಎಲ್ಲಿಂದಲೋ
ಹಾರಿ ಬಂದು
ನಮ್ಮವರಂತೆಯೇ
ಮುಖವಾಡ ತೊಟ್ಟು
ನಮ್ಮವರೊಂದಿಗೇ
ಮನೆ ಹೊಕ್ಕು
ನಮ್ಮಲ್ಲೇ ತಳವೂರಿ
ನಮ್ಮದೇ ಆಗಿ
ನಮ್ಮವರ ಜೊತೆಗೂಡಿ ತಾನೂ
ನಮ್ಮದೇ ಹಿತ್ತಲಲಿ ಬೇರೂರಿ

ನಾನೂ ನಿಮ್ಮಂತೆ
ಎನ್ನುತ್ತೆನ್ನುತ್ತಲೇ
ಪ್ರತ್ಯೇಕ ಅಸ್ತಿತ್ವ
ಸ್ಥಾಪಿಸಿ
ಸಿಡಿಸಿ ನೂರಾರು
ಮರಿಬೀಜ
ಆಳಕ್ಕೆ ಊರಿ ನಿಂತು
ಪರಕೀಯ ಧ್ವಜ

ಇಂದು
ಎಲ್ಲೆಲ್ಲೂ ಇದರದ್ದೇ
ಸಾಮ್ರಾಜ್ಯ
ಅನ್ಯಕಳೆಯ ಆರ್ಭಟದಲಿ
ನಮ್ಮದೇ ನಮಗೆ ವರ್ಜ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಪೋಸು
Next post ನಿಂತು ಬಿಡೇ ನೀ ಹೀಗೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…